ಶ್ರೀ ಠೋಕ್ರಿ ಬನ್ಕಿ ಭೀಮಮ್ಮ ದೇವಿಗೆ ಮಹಾಚಂಡಿಕಾ ಹೋಮ

ಹುಳಿಯಾರು : ಹೋಬಳಿಯ ಶಿರಾರಸ್ತೆಯಲ್ಲಿರುವ ಬಳ್ಳೆಕಟ್ಟೆ ತಾಂಡ್ಯದ ಶ್ರೀ ಠೋಕ್ರಿ ಬನ್ಕಿ [ಭೀಮಮ್ಮ] ದೇವತೆಗಳ ಶತಕುಂಭ ಮಹೋತ್ಸವ ವಿಗ್ರಹ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಹಾಗೂ ಮಹಾಚಂಡಿಕಾ ಹೋಮವನ್ನು ಗಮ್ಮಿಕೊಳ್ಳಲಾಗಿದೆ.
ಏ. 29 ನೇ ಮಂಗಳವಾರ ಮತ್ತು 30ನೇ ಬುಧವಾರ ಎರಡು ದಿನ ಈ ಕಾರ್ಯಕ್ರಮ ನಡೆಯಲಿದೆ, ಮೊದಲನೇದಿನ ಸಂಜೆ ಸಾಮೂಹಿಕ ಪ್ರಾರ್ಥನೆ ಗ್ರಾಮಸ್ಥರಿಂದ ನಂತರ ಧ್ವಜಾರೋಹಣ, ಸಕ್ರಾನಾಯ್ಕನತಾಂಡ್ಯ ಮತ್ತು ಭೂತಪ್ಪನಗುಡಿ ಭಕ್ತಾಧಿಗಳಿಂದ ಸಂಜೆ 5.30 ಕ್ಕೆ ಭಗವದ್ಭಕ್ತರಿಂದ , ಸಮಸ್ತ ಭಕ್ತಾದಿಗಳಿಂದ ಪುಣ್ಯ ತೀರ್ಥ ಸಂಗ್ರಹಣೆ ಗಂಗಾರತಿ ಸೇವೆ , ಪಕೋತ್ತರ ಶತಕುಂಭ ಮಹೋತ್ಸವ ನಂತರ ಶ್ರೀ ಕ್ಷೇತ್ರದ ಶ್ರೀ ಠೋಕ್ರಿಬನ್ಕಿ [ಶ್ರೀ ಭೀಮಮ್ಮ] ದೇವತೆಗಳ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ರಾತ್ರಿ 9 ಗಂಟೆಗೆ ಗಂಗಾಪೂಜೆ , ಗಣಪತಿ ಪೂಜೆ, ಸ್ವಸ್ತವಾಚನ, ದೇವನಾಂದಿ, ರಕೋಘ್ನ , ವಾಸ್ತುಹೋಮ, ಭೂತಬಲಿ, ಮಹಾಗಣಪತಿ ಹೋಮ, ಅಂಕುರ ಪೂಜೆ, ಪಂಚಗವ್ಯ, ಸ್ಥಳ ಸುದ್ದಿ, ನವಗ್ರಹ, ಮೃತ್ಯುಂಜಯ, ಪಂಚಕಲಸ, ಪ್ರಧಾನಕಲಸ ಸಹಿತ ಪ್ರತಿಷ್ಠಾಪಿತ ಕಲಶಾಧನೆ ಗಣ ಹೋಮ, ನವಗ್ರಹ – ಮೃತ್ಯುಂಜಯ – ಚರಹೋಮ, ದುರ್ಗಾ ಹೋಮ, ಧನಪ್ರಾಪ್ತಿ ಹೋಮ, ಪೂರ್ಣಾಹುತಿ ಹೋಮಗಳು ನಡೆಯಲಿವೆ. ರಾತ್ರಿ 11.18 ಕ್ಕೆ ಏಕವಿಸಂತಿ, ನ್ಯಾಸಪೂಜಾ, ಧ್ಯಾನ್ಯದಿವಾಸ, ರತ್ನಾದಿವಾಸ, ಪುಷ್ಪಾದಿವಾಸ, ಶಯ್ಯಾದಿವಾಸ, ಕ್ಷೀರಾದಿವಾಸ, ಮಂಗಳಾರತಿ ನಡೆಯಲಿದೆ.
ಎರಡನೇ ದಿನ ಬುಧವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿಗ್ರಹ ಪುನರ್ ಪ್ರತಿಷ್ಠಾಪನೆ ನಂತರ ಕುಂಭಾಭಿಷೇಕ, ಕಳಾಹ ಹೋಮ, ಪ್ರದಾನ ಹೋಮ, ಪ್ರಾಣಶಕ್ತಿ ಹೋಮ, ಬಲಿಹರಣ, ಕೂಕ್ಷ್ಮಾಂಡ ಛೇದನ, ಕದಳಿಛೇದನ, ದೃಷ್ಠಿಪೂಜೆ, ನೇತ್ರೋನ್ಮಿಲನ, ಮಹಾಪೂಜಾ ನಂತರ ಪ್ರದಾನ ಕುಂಡದಲ್ಲಿ “ಮಹಾ ಚಂಡಿಕಾಹೋಮ” ನಡೆಯಲಿದೆ ನಂತರ ಪೂರ್ಣಾಹುತ, ಮಹಾಮಂಗಳಾರತಿ, ವೈದಿಕ ಮಂತ್ರಾಕ್ಷತೆ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ 12.30 ಕ್ಕೆ ಅನ್ನಸಂತರ್ಪಣೆ ಇರುತ್ತದೆ ಎಲ್ಲಾ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯವರ ಕೃಪೆಗೆ ಪಾತ್ರಾರಾಗುವಂತೆ ಸಮಿತಿಯವರು ಕೋರಿದ್ದಾರೆ.

26

© ಹುಳಿಯಾರು ಸಮಗ್ರ ಸುದ್ಧಿ . All Rights Reserved.