ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜ.02 ಗುರುವಾರ ಹೋಬಳಿಯ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದು ಕೊರತೆಗಳ ಜನಸಂಪರ್ಕ ಸಭೆ ಚಿಕ್ಕನಾಯಕನಹಳ್ಳಿ ಶಾಸಕರು, ಜ್ಯಾತ್ಯಾತೀತ ಜನತದಳ ಶಾಸಕಾಂಗ ಪಕ್ಷದ ನಾಯಕರಾದ ಸಿ ಬಿ ಸುರೇಶು ಬಾಬು ಹಾಗೂ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಇಲಾಖೆ ರಾಜ್ಯ ಸಚಿವರಾದ ವಿ ಸೋಮಣ್ಣ ನವರ ನೇತೃತ್ವದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ ಲೋಕಸಭಾ ಸದಸ್ಯರು ಜನ ಸಂಪರ್ಕ ಸಬೆ ಮಾಡಿರುವುದು ಈಡಿ ರಾಜ್ಯದಲ್ಲಿ ಮೊದಲನೇ ಬಾರಿ ಬರಿ ಲೋಕಸಭಾ ಸದಸ್ಯರು ಬರುವುದೇ ಕಷ್ಠ ಅದರಲ್ಲೂ ಕೂಡ ಕೇಂದ್ರ ಸಚಿವರಾದ ವಿ. ಸೋಮಣ್ಣನವರು ಸಾರ್ವಜನಿಕರ ಅಹವಾಲು ಸ್ವೀಕರಿಸಲು ಹೋಬಳಿ ಮಟ್ಟಕ್ಕೆ ಬಂದಿರುವುದಕ್ಕೆ ತಾಲ್ಲೂಕಿನ ಎಲ್ಲಾ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಉತ್ತಮ ರೀತಿಯಲ್ಲಿ ಕೇಂದ್ರ ಸಚಿವರಾಗಿದ್ದುಕೊಂಡು ವಿಶೇಷವಾಗಿ ರೈಲ್ವೆ ಯೋಜನೆಗಳು ಹಾಗೂ ಜಲ ಶಕ್ತಿ ಯೋಜನೆಗಳನ್ನು ಈಡಿ ರಾಜ್ಯದಲ್ಲಿ ಅನುಷ್ಠಾನ ಮಾಡುವುದರಲ್ಲಿ ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ ಹಾಗೂ ನಾವು ಕೂಡ ಪ್ರತಿ ವಾರ ಜನಸಂಪರ್ಕ ಸಭೆಯನ್ನು ತೀನಂಶ್ರೀ ಭವನದಲ್ಲಿ ಮಾಡುತ್ತಿದ್ದು 50ನೇ ವಾರದ ಸಭೆಯನ್ನು ಯಶಸ್ವಿಯಾಗಿ ತಲುಪಿದ್ದೇವೆ ಮೊದಲು ಕಛೇರಿಗೆ ವೇತನ ಪಡೆಯಲು ಅಲೆದಾಡುತ್ತಿದ್ದ ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಹಾವಳಿ ಯಿಲ್ಲದೆ ಅಧಿಕಾರಿಗಳಿಗೆ ಲಂಚ ಕೊಡದೇ ಒಂದು ವಾರ ಸಭೆಗೆ ಬಂದರೆ ಇನ್ನೊಂದು ವಾರಕ್ಕೆ ಅವರಿಗೆ ವೇತನ ಮಂಜೂರಾಗುತ್ತಿದೆ ಹಾಗಾಗಿ ಕುಂದು ಕೊರತೆ ಸಬೆಗೆ ಬರುವವರ ಸಂಖ್ಯೆಯೆ ತೀರಾ ಕಡಿಮೆಯಾಗಿದೆ ಎಂದರು.
ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ ಸೋಮಣ್ಣ ಮಾತನಾಡಿ ಬಂದುಗಳೇ ಒಬ್ಬ ರಾಜಕಾರಣಿಯಾದವನಿಗೆ ದೂರ ದೃಷ್ಠಿಯ ಚಿಂತನೆ ಇರಬೇಕು, ನಮ್ಮ ನಡುವಳಿಕೆ ಇನ್ನೋಬ್ಬರಿಗೆ ನೋವಾಗಬಾರದು ಅನಾವಶ್ಯಕವಾಗಿ ಇನ್ನೋಬ್ಬರಿಗೆ ಅನಾನುಕೂಲ ಮಾಡಬಾರದು ಚಿಕ್ಕನಾಯಕನಹಳ್ಳಿ ಒಂದು ಪ್ರತಿ ಷ್ಠಿತ ಕ್ಷೇತ್ರ ಮುಂದೆ ಬಾಬಣ್ಣ ಈ ರಾಜ್ಯದಲ್ಲಿ ಮಂತ್ರಿಯಾಗಬೇಕು ಎಂಬುದೆ ನನ್ನಾಸೆ , ಎಲ್ಲಾ ರಾಜಕಾರಣೀಗಳು ಸುರೇಶ್ ಬಾಬು ರೀತಿ ಕೆಲಸ ಮಾಡಿದರೆ ಚೆಂದ ಎಂದು ಶಾಸಕರನ್ನು ಹೊಗಳಿದರು, ನನಗೆ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ವರಿಷ್ಠರ ಮಾರ್ಗದಂತೆ ವಿಲೀನಗೊಂಡು ಸಹಕಾರ ನೀಡಿದ ಎಲ್ಲಾರಿಗೂ ಮುಂಚಿತವಾಗಿ ಧನ್ಯವಾದ ತಿಳಿಸಿ ನಾನು ಕುಮಾರಣ್ಣ ಸಹ ಈ ಕ್ಷೇತ್ರಕ್ಕೆ ಜನರ ಕಷ್ಠ ಕರ್ಪಾಣ್ಯಗಳನ್ನು ಆಲಿಸಲು ಮತ್ತೋಮ್ಮೆ ಬರುವುದಾಗಿ ಮತ್ತು ಬಂದ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.
ನನ್ನನ್ನು ಈ ಕ್ಷೇತ್ರಕ್ಕೆ ಬಂದಾಗ ಗೋಬ್ಯಾಕ್ ಎಂದಿದ್ದವರಿಗೆ ಈ ಕ್ಷೇತ್ರದ ಜನ ನನಗೆ ಒಂದು ಲಕ್ಷದ ಎಪ್ಪತ್ತು ಸಾವಿರ ಅಂತರದಲ್ಲಿ ಜಯವನ್ನು ಗಳಿಸಿ ಕೊಟ್ಟಿದ್ದೀರಿ ನನಗೆ ಈ ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಅಂತರದ ಮತ ನೀಡಿದ್ದೀರ ನನಗೆ ಈ ಕ್ಷೇತ್ರಕ್ಕೆ ಬಂದಾಗ ಶಾಸಕರಾದ ಸುರೇಶ್ ಬಾಬು ಇನ್ನೂ ಮೂರ್ನಾಲ್ಕು ಜನ ಮಾತ್ರ ಗೊತ್ತಿದ್ದರು ಆದರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿ ನನ್ನನ್ನು ಜಯಶೀಲನನ್ನಾಗಿ ಮಾಡಿದ್ದೀರಿ ನಿಮ್ಮ ಮತ್ತು ಭಗವಂತನ ಆರ್ಶಿವಾದದಿಂದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಮಂತ್ರಿಯಾಗಿ ನನ್ನ ಕ್ಷೇತ್ರ ತುಮಕೂರನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ತಮ್ಮ ಆರ್ಶೀವಾದದೊಂದಿಗೆ 24*7 ಕಾರ್ಯನಿರತನಾಗಿರುತ್ತೇನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ , ಎತ್ತಿನಹೋಳೆ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು
ಈ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಕಲ್ಪಶ್ರೀ , ತಹಶೀಲ್ದಾರ್ ಕೆ.ಪುರಂಧರ್ , ತಾಲ್ಲೂಕು ಪಂಚಾಯಿತಿ ಇಓ ದೊಡ್ಡಸಿದ್ದಯ್ಯ , ಡಿವೈಎಸ್ಪಿ ವಿನಾಯಕ ಶೆಟಿಗೇರಿ, ವೃತ್ತನೀರಿಕ್ಷಕರಾದ ನಡಾಫ್ , ಪಶು ಪಾಲನ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್, ಪ.ಪಂ. ಮುಖ್ಯಾಧಿಕಾರಿ ನಾಗಭೂಷಣ್ , ಸಿಡಿಪಿಓ ಹೊನ್ನಪ್ಪ , ಪ.ಪಂ. ಅಧ್ಯಕ್ಷೆ ರತ್ನಮ್ಮ , ಉಪಾಧ್ಯಕ್ಷೆ ಕಾವ್ಯರಾಣಿ , ಹಾಗೂ ಸದಸ್ಯರು, 10 ಪಂಚಾಯಿತಿಯ ಪಿಡಿಓ ಗಳು, ಹಾಗೂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.