ನಾನು ಮನೆಯಲ್ಲಿ ಕರು ಸಾಕಿದ್ದೇನೆ - ಶಾಸಕ ಸಿ ಬಿ ಸುರೇಶ್‌ ಬಾಬು

ಹುಳಿಯಾರು ಹೋಬಳಿಯ ಸೀಗೇಬಾಗಿ ಗೇಟ್ ನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿಕ್ಕನಾಯಕನಳ್ಳಿ ಹಾಗೂ ಗ್ರಾಮ ಪಂಚಾಯಿತಿ ತಿಮ್ಲಾಪುರ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಸೀಗೇಬಾಗಿ ಇವರ ಸಂಯುಕ್ತಾಶ್ರಯದಲ್ಲಿ ಮಿಶ್ರತಳಿ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ ಮತ್ತು ಕರುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಜ. 16 ನೇ ಗುರುವಾರ ಬೆಳಗ್ಗೆ ಮತ್ತು ಸಂಜೆ ಹಾಲು ಕರೆಯುವ ಸ್ಪರ್ಧೆ ನಡೆಯಿತು, ಹಾಗೂ ಜ. 17 ನೇ ಶುಕ್ರವಾರದಂದು ಕರುಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು. ದೂರದ ಊರಿನಿಂದ ಬಂದಿದ್ದ ರೈತರು ಕೂಡ ಕರುಗಳನ್ನು ಪ್ರದರ್ಶನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಬಿ.ಸುರೇಶ್ ಬಾಬು ಮಾತನಾಡಿ ಹೈನುಗಾರಿಕೆಗೆ ಹೆಚ್ಚಿನ ಹೊತ್ತನ್ನ ಕೊಡಬೇಕು ಎಂಬ ನಿಟ್ಟಿನಲ್ಲಿ ನಾಗಭೂಷಣ್ ಮತ್ತು ತಂಡದವರು, ನಾನಾ ರೀತಿ ಕಸರತ್ತುಗಳನ್ನು ಮಾಡುತ್ತಾ ಇದ್ದಾರೆ ಒಂದು ಹಸು ಮನೆಯಲಿದ್ದರೆ ಒಂದು ಹೆಣ್ಣು ಮಗು ಇದ್ದಂತೆ, ಹಸುವಿನ ಹಾಲಿನ ಶೇಖರಣೆಯಿಂದ ಏನು ತೊಂದರೆ ಬಾರದಂತೆ ಜೀವನ ನಡೆಸಲು ಸಾಧ್ಯ , ಉತ್ತಮ ಕರುಗಳನ್ನು ಪ್ರದರ್ಶನ ಮಾಡುವುದು ರೈತರಿಗೆ ಉತ್ತೇಜನ ನೀಡಲಿಕ್ಕೆ, ರೈತರು ಎಲ್ಲಾ ರೀತಿಯ ತಳಿಗಳಿಗೂ ಕೂಡ ಉತ್ತೇಜನ ನೀಡಬೇಕು ದೇಶಿಯ ತಳಿಗಳನ್ನು ಕೂಡ ಉಳಿಸಬೇಕು, ಹಸುಗಳಿಗೆ ಯಾವುದೇ ರೀತಿ ರೋಗ ಬಂದರು ಕೂಡ ಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸುವಂತಾಹುದು. ಮೂಕ ಪ್ರಾನಿಗಳಿಗೆ ಏನಾಗಿದೆ ಎಂದು ರೈತನಿಗೆ ಗೊತ್ತಾಗುತ್ತದೆ, ಪ್ರಮಾಣಿಕತೆಯಿಂದ ಹೈನುಗಾರಿಕೆಗೆ ಹೆಚ್ಚಿನ ಮಹತ್ವ ನೀಡಿ ನಾನು ಕೂಡ ಮನೆಯಲ್ಲಿ ಕರು ಸಾಕಿದ್ದೇನೆ ಎಂದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಎಸ್.ಶಿವಪ್ರಕಾಶ್ ಮಾತನಾಡಿ ಸುತ್ತಮುತ್ತ ಹಳ್ಳಿಗಳಿಂದ ರೈತರು ಬಂದಿದ್ದೀರಿ ಉತ್ತಮವಾದ ಕರುಗಳನ್ನು ಸಾಕಾಣಿಕೆ ಮಾಡಿದ್ದೀರಿ ಹಸು ಎಂದರೆ ತಮಗೆಲ್ಲ ಗೊತ್ತು ಕಾಮದೇನು ಇದ್ದಂತೆ ಪ್ರತಿಯೊಂದು ಮನೆಯಲ್ಲಿ ನಾಟಿ ಹಸು ಇರುತ್ತಿತ್ತು ಮೊದಲು ಹಸುಗಳ ಕೆಲಸ ಮಾಡಿ ನಂತರ ಮನೆಗೆಲಸಕ್ಕೆ ಮುಂದಾಗುತ್ತಿದ್ದರು, ಆಗ ಕಾಲ ಕಾಲಕ್ಕೆ ಮಳೆ ಆಗುತ್ತಿತ್ತು ಮನೆಗೆ ಹಾಲು ಆದರೆ ಆಗುತ್ತಿತ್ತು ಇತ್ತಿಚೆಗೆ ಹೈನು ಗಾರಿಕೆ ಪ್ರಾರಂಭವಾಯಿತು ಇದು ರೈತರಿಗೆ ವರದಾನ ಇತ್ತಿಚಿನ ದಿನಗಳಲ್ಲಿ ನಾವು ಬೆಳೆಯುವ ತೆಂಗು ಅಡಕೆ ಗಳಿಗೆ ರೋಗ ಬಂದು ಮತ್ತು ಸಾವಿರಾರು ಅಡಿ ಬೋರು ಕೊರೆದರು ನೀರು ಬಿಳದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೈನುಗಾರಿಕೆ ಇಲ್ಲದಿದ್ದರೆ ಜನ ವಲಸೆ ಹೋಗಬೇಕಾಗುತ್ತಿತ್ತು ಎಷ್ಟೋ ಕುಟುಂಬಗಳು ಬೆಂಗಳೂರನ್ನ ಸೇರಿವೆ, ಇವತ್ತು ಒಂದು ಹಸು ಇದ್ದರೆ ಒಂದು ಸಾಂಸರವನ್ನು ಸಾಗಿಸಬಹುದಾಗಿದೆ ನಿಮ್ಮೆಲ್ಲರ ಆರ್ಶಿವಾದದಿಂದ ಮೊದಲ ಬಾರಿ ತುಮಕೂರು ಹಾಲು ಓಕ್ಕೂಟಕ್ಕೆ ಆಯ್ಕೆಯಾಗಿದೆನೆ ಈ ಇಲಾಖೆಗೆ ಸಂಬಂಧಪಟ್ಟಂತಹ ಯಾವುದೇ ಕೆಲಸವಿದ್ದರು ಏನೇನು ಸವಲತ್ತು ಬರುತ್ತೋ ಅವನ್ನೇಲ್ಲಾ ಪ್ರಮಾಣಿಕವಾಗಿ ಮಾಡುತ್ತೇನೆ ಎಂದರು.

ತುಮಕೂರು ಡಿ.ಡಿ.ಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಳ್ಳಿ ರಾಜ್ ಕುಮಾರ್ ಮಾತನಾಡಿ ಹೈನುಗಾರಿಕೆಯನ್ನು ಮಾಡಿದಂತ ರೈತರು ಆರ್ಥಿಕವಾಗಿ ಸಬಲರಾಗಬೇಕು, ಹಿಂದೆ ಮದುವೆಯಾದರೆ ಬಳುವಳಿಯಾಗಿ ಹಸು ನೀಡುತ್ತಿದ್ದರು, ಹಳ್ಳಿಗಳಿಂದ ಹಾಲು ಹಣ್ಣು ತರಕಾರಿಗಳನ್ನು ಪಟ್ಟಣಕ್ಕೆ ಕಳುಹಿಸೊದು ಪಟ್ಟಣದವರು ಪಾನ್ ಪಾರಾಗ್ ನಂತಹ ದುಶ್ಚಟಕ್ಕೀಡಾಗುವಂತವನ್ನು ಅವರು ಕಳುಹಿಸುತ್ತಿದ್ದಾರೆ, ನಮ್ಮ ರೈತರು ಕೂಡ ಬೆಣ್ಣೆ ಮೊಸರು ತುಪ್ಪ ತಿಂದು ಚೆನ್ನಾಗಿರಬೇಕು, ಕಾಲ ಕಾಲಕ್ಕೆ ರಾಸುಗಳಿಗೆ ಲಸಿಕೆ ಹಾಕಿಸಿಕೊಂಡು ನೋಡಿಕೋಳ್ಳಿ ಎಂದರು.

ಕಾರ್ಯಕ್ರಮದಲ್ಲಿ ರೈತರಿಗೆ ಹೈನುಗಾರಿಕೆಯಲ್ಲಿ ಉತ್ತಮವಾಗಿ ಸಾಧನೆಮಾಡಿರುವ ಸಿದ್ದು ಮತ್ತು ಪ್ರಕಾಶ್ ರವರಿಂದ ಮಾಹಿತಿ ಕೋಡಿಸಲಾಯಿತು
ಬಹುಮಾನ ವಿತರಣೆ ;
ಹಾಲು ಕರೆಯುವ ಪ್ರದರ್ಶನದಲ್ಲಿ ಪ್ರಥಮ ಬಹುಮಾನ : ಜಯಣ್ಣ ಹೊಸಹಳ್ಳಿ ಒಟ್ಟು 24.22 ಲೀ ಹಾಲು ̧ ದ್ವೀತೀಯ ಬಹುಮಾನ : ಸುಧಾ ಹೊಸಹಳ್ಳಿ 23.52ಲೀ ಹಾಲು, ತೃತೀಯ ಬಹುಮಾನ : ಗಂಗಾಧರಯ್ಯ ಸೀಗೇಬಾಗಿ

4 ರಿಂದ 7 ತಿಂಗಳವರೆಗಿನ ಕರುಗಳ ಪ್ರದರ್ಶನದಲ್ಲಿ –
ಪ್ರಥಮ ಬಹುಮಾನ : ಅನಂತಯ್ಯ ತಿಮ್ಲಾಪುರ, ದ್ವಿತೀಯ ಬಹುಮಾನ : ಮಹೇಶ್ ಎಸ್ ಸಿ ಸೀಗೇಬಾಗಿ, ತೃತೀಯ ಬಹುಮಾನ : ರಂಗಯ್ಯ ತೊರೆಮನೆ.

1 ರಿಂದ 4 ತಿಂಗಳವರೆಗಿನ ಕರುಗಳ ಪ್ರದರ್ಶನದಲ್ಲಿ –
ಪ್ರಥಮ ಬಹುಮಾನ : ಸಂತೋಷ್ ಭಟ್ಟರಹಳ್ಳಿ , ದ್ವಿತೀಯ ಬಹುಮಾನ : ಬಸವರಾಜು ನಂದಿಹಳ್ಳಿ , ತೃತೀಯ ಬಹುಮಾನ : ಬಸವರಾಜು ಸೀಗೇಬಾಗಿ ಬಹುಮಾನಗಳನ್ನು ಬಡೆದುಕೊಂಡರು.

ಈ ಸಂಧರ್ಭದಲ್ಲಿ ಪಶು ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ರೆ.ಮಾ. ನಾಗಭೂಷಣ್ , ಪಶು ವೈದ್ಯಾಧೀಕಾರಿಗಳಾದ ಡಾ.ಹೆಚ್ . ಟಿ .ಮಂಜುನಾಥ್, ಹೆಚ್ .ಎಲ್ . ಪುಟ್ಟಸ್ವಾಮಿ, ವಿ.ಬಸವರಾಜು, ಕೆ.ಟಿ.ಚಿಕ್ಕಣ್ಣ , ಆರ್ ವಿ ಸುನಿಲ್, ಚಂದ್ರಮ್ಮ , ಬಿ.ತಮ್ಮಯ್ಯ , ಎಲ್ ಸಿ ದಿನೇಶ್, ನಂದಿಹಳ್ಳಿ ಶಿವಣ್ಣ , ಟಿ.ಕೆ . ಬಸವರಾಜು, ಕಾವ್ಯ ಡಿ.ಎಂ, ಗಂಗಾಧರಯ್ಯ ಎಸ್ ಬಿ ಇನ್ನಿತರರು ಉಪಸ್ಥಿತರಿದ್ದರು.

684

© ಹುಳಿಯಾರು ಸಮಗ್ರ ಸುದ್ಧಿ . All Rights Reserved.