ಬೋರನಕಣಿವೆ : ವಿದ್ಯಾರ್ಥಿಗಳು ಅಪರಿಚಿತರೊಡನೆ ಸಲಗೆಯಿಂದ ನಡೆದುಕೊಳ್ಳಬೇಡಿ, ಅವರಿಂದ ನಿಮಗೆ ತೊಂದರೆಯಾಗಬಹುದು ಎಂದು ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಎಚ್ಚರಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಗ್ರಾಮ ಪಂಚಾಯತಿ ಬೋರನಕಣಿವೆ ಪ್ರೌಢಶಾಲೆ ಯಲ್ಲಿ ಶನಿವಾರ ನಡೆದ ಮಕ್ಕಳ ರಕ್ಷಣೆ ಮತ್ತು ಶಾಲಾ ಸಂರಕ್ಷಣೆ ಪೋಸ್ಕೋ ಕಾಯ್ದೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸುರಕ್ಷತೆ ಶಾಲಾವ್ಯವಸ್ಥೆಯಲ್ಲಿ ಹೇಗಿರಬೇಕೆಂಬುದರ ಬಗ್ಗೆ ವಿವರಣೆ ನೀಡಿದರು. ಶಾಲಾ ಶಿಕ್ಷಕ ವಸಂತ್ ಕುಮಾರ್ ಪೋಸ್ಕೋ ಕಾಯ್ದೆಯ ಬಗ್ಗೆ ವಿವರಿಸಿದರು. ಸೃಜನ ಮಹಿಳಾ ಸಂಘಟನೆ ಅಧ್ಯಕ್ಷೆ ಎನ್ ಇಂದಿರಮ್ಮ ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬುದನ್ನು ಮರೆಯದಿರಿ, ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ ಎಂದು ಹೇಳಿದರು. ಮುಖ್ಯ ಶಿಕ್ಷಕ ಟಿ ಎನ್ ರಮೇಶ್ ಮಕ್ಕಳು ಮಾದಕ ವಸ್ತುಗಳ ವ್ಯಸನಿಗಳಾಗದೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು. ಸಭೆಯಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಯು ಪಿ ಉಮಾದೇವಿ, ಶಿಕ್ಷಕರಾದ ಬಸವರಾಜು ಓಂಕಾರ್,ರೇಖಾ ರತ್ನಮ್ಮ, ರಮೇಶ್, ಅನಿತಾ,ಮನು ಕುಮಾರ್, ಅಡುಗೆ ಸಿಬ್ಬಂದಿ, ವಿಜಯಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು
© ಹುಳಿಯಾರು ಸಮಗ್ರ ಸುದ್ಧಿ . All Rights Reserved.