ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಚಿಕ್ಕನಾಯಕನಹಳ್ಳಿ, ಗ್ರಾಮ ಪಂಚಾಯತ್ ಕುಪ್ಪೂರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಕುಪ್ಪೂರು ಇವರ ಸಂಯುಕ್ತ ಆಶ್ರಯದಲ್ಲಿ ಮಿಶ್ರತಳಿ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ ಮತ್ತು ಕರುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಗದ್ದಿಗೆ ಮಠದಲ್ಲಿ ಫೆಬ್ರವರಿ 27 ರ ಸಂಜೆ 6:00 ಗಂಟೆ ಮತ್ತು ಫೆ.28ರ ಬೆಳಗ್ಗೆ ಎರಡು ಬರಿ ಹಾಲು ಕರೆಯುವ ಸ್ಪರ್ಧೆ ಇರುತ್ತದೆ.
ಮಾರ್ಚ್ 1 ರಂದು ಕರುಗಳ ಪ್ರದರ್ಶನ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ 10.30 ರ ವೇಳೆಗೆ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಹಾಲು ಕರೆಯುವ ಸ್ಪರ್ಧೆಗೆ ಬಹುಮಾನಗಳಿದ್ದು ಪ್ರಥಮ ಬಹುಮಾನ - 10 ಸಾವಿರ ರೂ ನಗದು, ದ್ವಿತೀಯ ಬಹುಮಾನ - 7500ರೂ , ತೃತೀಯ ಬಹುಮಾನ 5 ಸಾವಿರ ರೂ. ನಗದು, ಹಾಗೂ ಏಳು ರಾಸುಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ.ರೆ.ಮಾ.ನಾಗಭೂಷಣ್ ಸಹಾಯಕ ನಿರ್ದೇಶಕರು ಪಶುಪಾಲನ ಮತ್ತು ಪಶು ವೈದ್ಯ ಇಲಾಖೆ ಚಿ ನಾ ಹಳ್ಳಿ - 9740569898.
ಮಹೇಶ್ ಕಾರ್ಯನಿರ್ವಹಣಾಧಿಕಾರಿಗಳು ಹಾಲು ಉತ್ಪಾದಕರ ಸಹಕಾರಿ ಸಂಘ, ಕುಪ್ಪೂರು - 9483846148. ಬಸವರಾಜು ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕುಪ್ಪೂರು - 8317360553, ಡಾ. ಎನ್ ವಿರೂಪಾಕ್ಷ ಮುಖ್ಯ ಪಶುವೈದ್ಯಾಧಿಕಾರಿಗಳು ಪಶು ಆಸ್ಪತ್ರೆ, ಚಿಕ್ಕನಾಯಕನಹಳ್ಳಿ, - 9945510509, ವಿಜಯಲಕ್ಷ್ಮಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಕುಪ್ಪೂರು - 9380556678 ವಿವರಗಳನ್ನು ಸಂಪರ್ಕಿಸಬಹುದಾಗಿದೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.