ಸಡಗರ ಸಂಭ್ರಮದಿಂದ ಜರುಗಿದ ಕಾರೇಹಳ್ಳಿ ರಂಗನಾಥ ಸ್ವಾಮಿಯವರ ಬ್ರಹ್ಮ ರಥೋತ್ಸವ

ಹುಳಿಯಾರು ಸಮೀಪದ ಶ್ರೀ ಕ್ಷೇತ್ರ ಕಾರೇಹಳ್ಳಿಯಲ್ಲಿ ಶ್ರೀ ರಂಗನಾಥ ಸ್ವಾಮಿಯವರ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆಯು ಇದೇ ತಿಂಗಳ 8ರಿಂದ ಆರಂಭವಾಗಿದ್ದು ಇಂದು ಸಹಸ್ರಾರು ಭಕ್ತರ ಉದ್ಘೋಷದ ನಡುವೆ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು

ಸುಡುಬಿಸಿಲನ್ನು ಲೆಕ್ಕಿಸದೆ ಆಗಮಿಸಿದ್ದ ಜನಸ್ತೋಮ ನಂತರ ಪಾನಕ ಪನಿವಾರ ಸೇವೆ, ತದನಂತರ ತೇರನೆಳೆಯಲು ಆಗಮಿಸಿದ್ದ ಮಹಾಜನತೆಗೆ ಭಕ್ತಾಧಿಗಳಿಂದ-ದೇವಸ್ಥಾನ ಸಮಿತಿಯಿಂದ-ಸೇವಕರ್ತರುಗಳಿಂದ ಅನ್ನಸಂತರ್ಪಣೆ ನಡೆಯಿತು.

ಸಹಸ್ರಾರು ಭಕ್ತಾಧಿಗಳು ಸ್ವಾಮಿಯ ತೇರನ್ನೆಳೆದು, ಅಲಂಕೃತ ಸ್ವಾಮಿಯನ್ನು ಕಣ್ತುಂಬಿಕೊಂಡರು.

137

© ಹುಳಿಯಾರು ಸಮಗ್ರ ಸುದ್ಧಿ . All Rights Reserved.