ಖರೀದಿಯಾಗಿರುವ ರಾಗಿಯ ಹಣ ಬಿಡುಗಡೆ ಮಾಡಿ – ರೈತ ಸಂಘ ಒತ್ತಾಯ
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಕೇಂದ್ರದ ಬಳಿ ಈಗಾಗಲೇ ಖರೀದಿಸಿರುವ ರಾಗಿಗೆ ಹಣ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಧರಣಿ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮಾ. 03 ರಿಂದ ರಾಗಿ ಖರೀದಿ ಪ್ರಾರಂಭವಾಗಿದ್ದು ಸಾವಿರಾರು ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ ಖರೀದಿಯಾಗಿರುವ ರೈತರಿಗೆ ಇದುವರೆಗೂ ಹಣ ಬಿಡುಗಡೆ ಮಾಡಿರುವುದಿಲ್ಲ ರೈತರು ವ್ಯವಸಾಯದ ಕಾರ್ಯಗಳಿಗೆ ಜೀವನ ನಿರ್ವಹಣೆಗಾಗಿ ಬ್ಯಾಂಕುಗಳು ಸಹಕಾರ ಸಂಘ ಮೈಕ್ರೋ ಫೈನಾನ್ಸ್ ಗಳು ಮತ್ತು ಖಾಸಗಿ ಲೇವಾದೇವಿದಾರರಿಂದ ಸಾಲ ಮಾಡಿರುತ್ತಾರೆ ಆರ್ಥಿಕ ವರ್ಷದ ಕೊನೆ ತಿಂಗಳಾಗಿರುವುದರಿಂದ ಸಾಲ ಮಾಡಿರುತ್ತಾರೆ ಆರ್ಥಿಕ ವರ್ಷದ ಕೊನೆ ತಿಂಗಳಾಗಿರುವುದರಿಂದ ಸಾಲ ವಸೂಲಿಗಾಗಿ ರೈತರಿಗೆ ಒತ್ತಾಯ ಪೂರ್ವಕವಾಗಿ ಹಣದ ಕಿರುಕುಳ ನೀಡುತ್ತಿದ್ದಾರೆ . ವರ್ಷದ ಬಹು ಮುಖ್ಯ ಯುಗಾದಿ ಹಬ್ಬ ರೈತರಿಗೆ ವಿಶೇಷವಾಗಿದ್ದು ಹಬ್ಬದ ನಿರ್ವಹಣೆ ಹಣದ ಮುಗ್ಗಟ್ಟಿನಿಂದ ತೊಂದರೆಯಾಗಿದೆ ಇದುವರೆವಿಗೂ ರಾಗಿ ಖರೀದಿಯಾಗಿರುವ ರೈತರಿಗೆ ಹಣ ಬಿಡುಗಡೆ ಮಾಡುವ ಮೂಲಕ ರೈತರನ್ನು ಆರ್ಥಿಕ ತೊಂದರೆಯಿಂದ ಕಾಪಾಡಬೇಕು ಮತ್ತು ಇನ್ನು ಮುಂದೆ ರಾಗಿ ಖರೀದಿಯಾದ ದಿನವೆ ರೈತರ ಖಾತೆಗೆ ಹಣ ಬಿಡುಗಡೆ ಮಾಡಲು ಆದೇಶಿಸುವ ಮೂಲಕ ರೈತರ ಹಿತವನ್ನು ಕಾಪಾಡಬೇಕೆಂದು ಓತ್ತಾಯಿಸಿ ಉಪತಹಶೀಲ್ದಾರರಾದ ವಿನುತರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮಾತನಾಡಿ ರೈತರು ಈಗಾಗಲೇ ಸಾಲಗಾರರಾಗಿದ್ದಾರೆ ತಿಂಗಳುಗಳಿಂದ ರಾಗಿ ಬೆಳೆದು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಬಿಟ್ಟು ಹಣಕ್ಕಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ ಸರ್ಕಾರ ರೈತರ ಪರಿಸ್ಥಿತಿಯನ್ನು ಅರಿತು ಕೂಡಲೇ ಇಲ್ಲಿಯವರೆಗೂ ರಾಗಿ ಖರೀದಿಯಾಗಿರುವ ರೈತರಿಗೆ ಹಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಎಸ್ ಧನಂಜಯರಾಧ್ಯ , ಜಿಲ್ಲಾ ಕಾರ್ಯದರ್ಶಿ ಹೆಚ್.ಎನ್ ಸತೀಶ್ , ಕಂಪನಹಳ್ಳಿ ಪ್ರಕಾಶ್ , ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ನಾಗರಾಜು, ಎ.ಬಿ.ಪ್ರಕಾಶಯ್ಯ ಹಳ್ಳಿಕೆರೆ, ಕಂಪನಹಳ್ಳಿ ಮರುಳಪ್ಪ , ವಿನೋದಮ್ಮ, ಲಲಿತಮ್ಮ , ರೇಣುಕಮ್ಮ, ದಬ್ಬಗುಂಟೆ ಲಕ್ಷ್ಮಕ್ಕ, ಪುಷ್ಪಲತಾ ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷರು, ಸೀತಾರಾಮಯ್ಯ ತಾಲ್ಲೂಕ್ ಉಪಾಧ್ಯಕ್ಷರು, ಜಗನ್ನಾಥಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.