ಕೇಶವ ಶಾಲೆಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ.

ಪಟ್ಟಣದ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾದ ಸಂಕ್ರಾಂತಿ ಸಂಭ್ರಮದಲ್ಲಿ ವಿಶೇಷವಾಗಿ ಗೋಮಾತೆ ಪೂಜೆ, ತುಳಸಿ ಪೂಜೆ ,ದವಸ ಧಾನ್ಯಗಳ ರಾಶಿ ಪೂಜೆ ಹಾಗೂ ಹೆಣ್ಣು ಮಕ್ಕಳಿಗೆ ಬಳೆ ತೊಡಿಸುವ ಕಾರ್ಯಕ್ರಮವನ್ನು ಆಚರಿಸಲಾಯಿತು. ನಂತರದಲ್ಲಿ ಶಾಲಾ ಮಕ್ಕಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹುಳಿಯಾರಿನ ಪ್ರಮುಖ ಕಚೇರಿಗಳಾದ ಪಟ್ಟಣ ಪಂಚಾಯಿತಿ, ಸರ್ಕಾರಿ ಆಸ್ಪತ್ರೆ, ವಿದ್ಯುತ್ ನಿಗಮ ಮಂಡಳಿ ,ನಾಡಕಚೇರಿ, ಪೊಲೀಸ್ ಠಾಣೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ಕೆನರಾ ಬ್ಯಾಂಕ್ ಗಳಿಗೆ ಭೇಟಿ ನೀಡಿ ಸಿಬ್ಬಂದಿ ವರ್ಗದವರೆಲ್ಲರಿಗೂ ಎಳ್ಳು ಬೆಲ್ಲವನ್ನು ಮಕ್ಕಳು ನೀಡಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಟಿ .ಜಯಣ್ಣನವರು ಮಾತನಾಡಿ ನಮ್ಮ ನಾಡು ನುಡಿ ಭಾಷೆ ದೇಶ ಇಷ್ಟೆಲ್ಲವನ್ನು ಕುರಿತು ರೈತರನ್ನು ಪ್ರಮುಖವಾಗಿ ಕೇಂದ್ರವನ್ನಾಗಿ ಇಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದ್ದು ಇತ್ತೀಚಿನ ದಿನಗಳಲ್ಲಿ ಶ್ರಮಿಕ ಸಂಸ್ಕೃತಿ ಕಡಿಮೆಯಾಗುತ್ತಾ ಬರುತ್ತಿದ್ದು ಬರೀ ಯಾಂತ್ರಿಕ ವಿಧಾನ ಉಂಟಾಗಿ ಸಂಸ್ಕೃತಿ ನಾಶದತ್ತ ಸಾಗುತ್ತಿದೆ ಹಾಗೂ ಕರ್ನಾಟಕ ಸಂಸ್ಕೃತಿಯು ಅವನತಿ ಹತ್ತಿರ ಹೋಗುತ್ತಿದೆ ಆದರೆ ಈ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ಇವೆಲ್ಲವನ್ನೂ ಒಳಗೊಂಡ ಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮವನ್ನು ಶಿಕ್ಷಕ ಮಿತ್ರರು ಈ ದಿನ ಈ ಶಾಲೆಯಲ್ಲಿ ಆಚರಣೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶ್ರೀಕಂಠ ಮೂರ್ತಿರವರು ಮಾತನಾಡಿ ಪ್ರಕೃತಿಯಲ್ಲಿ ಬದಲಾವಣೆ ಅನಿವಾರ್ಯ ಆದರೆ ಇನ್ನು ಮುಂದೆ ಕತ್ತಲು ಕಡಿಮೆ ಬೆಳಕು ಜಾಸ್ತಿ ಹಾಗೂ ರೈತರ ಕುರಿತು ಆಚರಣೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ, ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಣದ ಪೂಜೆ ಎಲ್ಲಾ ಕಡಿಮೆಯಾಗಿದೆ, ಕೃಷಿ ಬಗ್ಗೆ ತಾಸ್ತಾರ ಆಗಿದೆ, ಶ್ರಮ ಸಂಸ್ಕೃತಿ ಇಲ್ಲ ಯಂತ್ರದ ಮೇಲೆ ರೈತರು ಅವಲಂಬಿಸಿದ್ದಾರೆ. ಇಂತಹ ಬದಲಾವಣೆ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಈಶ್ವರಯ್ಯನವರು ಮಾತನಾಡಿ ವರ್ಷದ ಮೊದಲ ಸುಗ್ಗಿಯ ಹಬ್ಬ ರೈತರು ದವಸ ಧಾನ್ಯಗಳನ್ನು ರಾಶಿ ಮಾಡಿ ಪೂಜೆ ಮಾಡುತ್ತಾರೆ, ಗೋಪೂಜೆಯು ತುಂಬಾ ಶ್ರೇಷ್ಠವಾದ ಪೂಜೆ ಅಷ್ಟ ದೇವತೆಗಳನ್ನು ಕೂಡ ಈ ಗೋಮಾತೆಯಲ್ಲಿ ಕಾಣಬಹುದು ಹಾಗಾಗಿ ನಾವು ಹಸುವನ್ನು ಒಮ್ಮೆ ತಬ್ಬಿ ಕೊಂಡರೆ ಅಷ್ಟ ದೇವತೆಗಳು ಲಭಿಸಿದಂತೆ ಎಂದು ತಿಳಿಸಿದರು.
ಶಿಕ್ಷಕರಾದ ಶ್ರೀನಿವಾಸ್ ರವರು ಗೋಮಾತೆ ಪೂಜೆಯ ಕುರಿತಾಗಿ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು ಗೋವಿನ ಸಗಣಿ ಗಂಜು ಅದರ ಉಸಿರಾಟ ಹಾಗೂ ಬಹಳ ಹಿಂದಿನಿಂದ ಇಲ್ಲಿಯವರೆಗೂ ಗೋವಿನ ಸಗಣಿಯಿಂದ ಆಗುವ ಉಪಯೋಗ ವನ್ನು ತಿಳಿಸಿದರು.
ಶಿಕ್ಷಕಿ ಎಸ್ ಎನ್ ಗೀತಾ ರವರು ವಿಷ್ಣುವಿನ ಹೆಂಡತಿ ಲಕ್ಷ್ಮಿಯ ಸ್ವರೂಪವಾದಂತಹ ತುಳಸಿ ಗಿಡದ ಮಹತ್ವ ಹಾಗೂ ವಿಶೇಷತೆ ಯನ್ನು ತಿಳಿಸುವ ಮೂಲಕ ಕರ್ನಾಟಕ ಅಲ್ಲದೆ ಬಿಹಾರದಲ್ಲಿ ಮೂರು ದಿನಗಳ ಕಾಲ ವಿಶೇಷವಾಗಿ ಆಚರಿಸುವ ತುಳಸಿ ಪೂಜೆಯ ಪವಿತ್ರತೆಯನ್ನು ಹಾಗೂ 56 ತರಹದ ಭಕ್ಷ ಭೋಜನಗಳನ್ನು ತಯಾರಿಸಿ ಈ ತುಳಸಿ ಪೂಜೆಯ ಸಂದರ್ಭದಲ್ಲಿ ನೈವೇದ್ಯವನ್ನು ಮಾಡುವ ವಿಚಾರವನ್ನು ಕಥಾರೂಪದಲ್ಲಿ ಸವಿಸ್ತಾರವಾಗಿ ತಿಳಿಸಿದರು.
ಶಿಕ್ಷಕಿ ಎಸ್.ಕೆ. ಗೀತಾ ರವರು ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ತಿಳಿಸಿದರು. ಶಿಕ್ಷಕಿ ಲೀಲಾವತಿ ರವರು ಹೆಣ್ಣು ಮಕ್ಕಳಿಗೆ ಬಳೆ ತೊಡಿಸುವ ಕಾರ್ಯಕ್ರಮದ ಕುರಿತಾದ ವಿಚಾರವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿಗಳಾದ ಎಚ್ .ಟಿ. ದಾಸಪ್ಪನವರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಾದ ನಾಗಭೂಷಣ್ , ಸತೀಶ್, ರಘುನಾಥ್, ಶಶಿಕಲಾ ಯಶೋದಮ್ಮ, ಶೋಭಾ, ಕಾಂತ ಲಕ್ಷ್ಮಿ, ರಶ್ಮಿ ಮುಖ್ಯೋಪಾಧ್ಯಾಯರಾದ ಎಚ್. ಬಿ .ಸನತ್ ಕುಮಾರ್ ಹಾಗೂ ಹು.ಲ. ವೆಂಕಟೇಶ ಗುರೂಜಿ ಮತ್ತು ಮಕ್ಕಳು ಉಪಸ್ಥಿತರಿದ್ದರು. ರವಿಶಂಕರ್ ನಿರೂಪಿಸಿದರು ಸುಮಾ ಸ್ವಾಗತಿಸಿ ಮಧು ವಂದನಾರ್ಪಣೆ ಮಾಡಿದರು.

90

© ಹುಳಿಯಾರು ಸಮಗ್ರ ಸುದ್ಧಿ . All Rights Reserved.