ಬಾಳೆಹಣ್ಣಿನ ಮೇಲೆ ಭಾರತ ಪಾಕಿಸ್ತಾನದ ಮೇಲೆ ಯುದ್ಧಸಾರಲಿ ಎಂಬ ಬರಹ ಬರದು ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಎಸೆದ ಭಕ್ತರು

ಹುಳಿಯಾರು : ಹೋಬಳಿಯ ಕೆಂಕೆರೆ ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಸುಡು ಬಿಸಿಲಿನಲ್ಲೂ ಅದ್ದೂರಿಯಾಗಿ ಜರುಗಿತು.
03 ವರ್ಷಗಳ ನಂತರ ನಡೆಯುತ್ತಿರುವ ಇತಿಹಾಸ ಪ್ರಸಿದ್ದ ಶ್ರೀ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಇದಾಗಿದ್ದು ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಗ್ರಾಮ ದೇವತೆ ಶ್ರೀ ಕಾಳಿಕಾಂಬ ದೇವಿ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಮಹಾರಥೋತ್ಸವ ಯಶಸ್ವಿಯಾಗಿ ಜರುಗಿತು.
ಬಸವ ಜಯಂತಿ ಹಿನ್ನೆಲೆ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ಇಂದು ಮುಂಜಾನೆ ಮಹದೇವಮ್ಮ, ಚನ್ನಬಸವಯ್ಯ ದಂಪತಿಗಳು ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸ್ವಾಮಿಯನ್ನು ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು, ರಂಗು ರಂಗಿನ ಬಾವುಟ, ಎಳನೀರ ಗೊಂಚಲು, ಬಾಳೆಗೊನೆ, ಕೊಬ್ಬರಿಹಾರ ಸೇರಿದಂತೆ ವಿವಿಧ ಮಾದರಿಯ ಹೂ, ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಚನ್ನಬಸವೇಶ್ವರ ಸ್ವಾಮಿ ಕೂರಿಸಿ ಗ್ರಾಮಸ್ಥರು ಜಯ ಘೋಷ ಹಾಕಿ ರಥವನ್ನು ಎಳೆದು ಅದ್ದೂರಿಯಾಗಿ ಸಂಭ್ರಮಿಸಿದರು
ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದವರು, ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸಿದರು. ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ, ಪನಿವಾರ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

224

© ಹುಳಿಯಾರು ಸಮಗ್ರ ಸುದ್ಧಿ . All Rights Reserved.