ಪಟ್ಟಣದ ಶ್ರೀ ವಾಸವಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ವಾಸವಿ ಹಿರಿಯ ಪ್ರಾಥಮಿಕ ಹಾಗೂ ಆಂಗ್ಲ ಪ್ರೌಢಶಾಲೆ, ಮತ್ತು ಟಿ.ಆರ್, ಎಸ್ , ಆರ್ ಪ್ರೌಢಶಾಲೆಗಳ ವಾಸವಿ ಮಹೋತ್ಸವ 2024-25 ನೇ ಸಾಲಿನ ಕಾರ್ಯಕ್ರಮ ಶುಕ್ರವಾರ ಜರುಗಿತು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ತುಮಕೂರು ಜಿಲ್ಲಾಧ್ಯಕ್ಷರಾದ ಎಲ್ ಆರ್ ಚಂದ್ರಶೇಖರ್ ಮಾತನಾಡಿ ತುಮಕೂರಿನಲ್ಲಿ ಒಂದು ಜ್ಞಾನ ಬುತ್ತಿ ಕೇಂದ್ರವನ್ನು ಸ್ಥಾಪನೆ ಮಾಡಿ ಸುಮಾರು 765 ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಎಲ್ಲ ವಿದ್ಯಾವಂತ ಜ್ಞಾನಿಗಳನ್ನು ಒಂದುಗೂಡಿಸಿ ತುಮಕೂರು ನಗರದಲ್ಲಿ ಮಹಾಯಜ್ಞಾವನ್ನ ಮಾಡಿರ್ತಕ್ಕಂತ ಮುರಳಿ ಕೃಷ್ಣಪ್ಪನವರು ಇವತ್ತು ವೇದಿಕೆ ಮೇಲಿದ್ದಾರೆ ಇದು ನಮ್ಮೆಲ್ಲರ ಸೌಭಾಗ್ಯ ಅಂತ ಭಾವಿಸ್ತೀನಿ
ಕಳೆದ 56 ವರ್ಷಗಳಿಂದ ವಾಸವಿ ವಿದ್ಯಾ ಸಂಸ್ಥೆ ಈ ಸಮಾಜದ ವಿದ್ಯಾ ಕ್ಷೇತ್ರದ ಒಳಿತಿಗೋಸ್ಕರ ಈ ಸಮಾಜಕ್ಕೆ ಜ್ಞಾನಾರ್ಜನೆಯನ್ನು ಕೊಡಬೇಕು ಬಡ ಮಕ್ಕಳಿಗೆ ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಣವನ್ನು ಕೊಡುವುದರ ಮುಖಾಂತರ ಸಮಾಜದ ಮುಖ್ಯವಾಹಿನಿಗೆ ತರಬೇಕು ಅಂತ ನಮ್ಮ ಆರ್ಯವೈಶ್ಯ ಸಮಾಜದ ಪೂರ್ವಜರು ಒಂದು ವಿದ್ಯಾಸಂಸ್ಥೆಯನ್ನು ಪ್ರಾರಂಭ ಮಾಡಿದರು, ಆ ವಿದ್ಯಾ ಸಂಸ್ಥೆಯನ್ನ ಉತ್ತಮವಾಗಿ ಕೊಂಡೊಯ್ಯುವಲ್ಲಿ ಈ ಆರ್ಯವೈಶ್ಯ ಸಮಾಜ ಯಶಸ್ವಿಯಾಗಿದೆಯೆಂದು ನಾನಾದರೂ ಭಾವಿಸುತ್ತೇನೆ.
56 ವರ್ಷಗಳ ಒಂದು ಸಾರ್ಥಕ ಸೇವೆ, ಶಿಕ್ಷಣ ಕ್ಷೇತ್ರವೆಂದರೆ ತುಮಕೂರು, ಶೈಕ್ಷಣಿಕ ನಗರವೆಂದರೆ ತುಮಕೂರು, ಇಡೀ ರಾಜ್ಯದಲ್ಲಿ ಹೆಸರನ್ನು ಸಂಪಾದನೆ ಮಾಡಿದೆ ಇದೇ ಜಿಲ್ಲೆಯಲ್ಲಿ ಹುಳಿಯಾರು ಪಟ್ಟಣ ಶೈಕ್ಷಣಿಕ ಕ್ಷೇತ್ರ ಎಂದರೆ ತಪ್ಪಾಗಲಾರದು, ಏಕೆಂದರೆ ಹುಳಿಯಾರಿನಲ್ಲಿ ಹಲವಾರು ಪ್ರೌಢಶಾಲೆಗಳು, ಪ್ರಾಥಮಿಕ ಶಾಲೆಗಳು, ಖಾಸಗಿ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಪ್ರಥಮ ದರ್ಜೆ, ಎರಡು ಐಟಿಐ ಕಾಲೇಜು, ಹೋಬಳಿ ಮಟ್ಟದಲ್ಲಿ ಇಷ್ಟು ಶಾಲಾ ಕಾಲೇಜು ನಾನ್ಯಾವುದೇ ಹೋಬಳಿ ಮಟ್ಟದಲ್ಲಿ ನೋಡಿಲ್ಲ ಇದು ಈ ಭಾಗದ ಸಾರ್ವಜನಿಕರ ಸೌಭಾಗ್ಯ ಎಂದು ಭಾವಿಸುತ್ತೇನೆ, ಪ್ರಪ್ರಥಮವಾಗಿ ಇಂದಿನ ಅಗತ್ಯತೆಯನ್ನು ಮನಗಂಡು ಪ್ರಥಮವಾಗಿ ಬಾಲಕಿಯರ ಪ್ರೌಢಶಾಲೆಯನ್ನು ಪ್ರಾರಂಭ ಮಾಡಿದಂತಹ ಹೆಮ್ಮೆ ಈ ಆರ್ಯವೈಶ್ಯ ಸಮಾಜಕ್ಕಿದೆ ಹುಳಿಯಾರಿನ ಮಹಾದಾನಿ ದಿವಂಗತ ಶ್ರೀನಿವಾಸ ಶ್ರೇಷ್ಠಿಗಳು ಹುಟ್ಟಿದಂತಹ ಪುಣ್ಯಭೂಮಿ ಇದು ಎಲ್ಲಾ ನಮ್ಮ ಸಮಾಜದ ಬಂಧುಗಳು ಸೇರಿ ಮಾಡಿದಂತ ಶಿಕ್ಷಣ ಸಂಸ್ಥೆ ಇದು.
ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ಶಿಕ್ಷಣದ ಆಸೆಯನ್ನು ಇಟ್ಟುಕೊಂಡು, ಮಕ್ಕಳಿಗೆ ದೇಶಭಕ್ತಿಯ ಕಥೆಗಳನ್ನು ಎಲ್ಲಾ ಭಾಷೆಯ ಶಿಕ್ಷಣಗಳನ್ನು ನಾವು ಕೊಟ್ಟಿದ್ದೇವೆ ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗಲಿಕ್ಕೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಒಂದು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಈ ಶಾಲೆಯಲ್ಲಿ ಶಿಕ್ಷಣವನ್ನ ಕೊಟ್ಟಿದ್ದೇವೆ. ಇಡೀ ರಾಜ್ಯದಲ್ಲಿ ಎಲ್ಲೂ ಕೂಡ ಇಷ್ಟು ಕಡಿಮೆ ಶಾಲಾ ಶುಲ್ಕವಿಲ್ಲ ಅಲ್ಪ ಸಲ್ಪ ಹಣದಲ್ಲಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವಂತಹ ಒಂದು ವಿಶೇಷವಾದ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ ಖಾಸಗಿ ಶಾಲೆಗಳು ಇಲ್ಲದೆ ಹೋಗಿದ್ದರೆ ಒಬ್ಬ ವಿದ್ಯಾರ್ಥಿಗೆ ಸರಕಾರದಿಂದ ಒಂದು ಲಕ್ಷ ರೂಪಾಯಿ ಖರ್ಚು ಮಾಡಬೇಕಿತ್ತು ವರ್ಷಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಈ ದಿನ ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ, ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳನ್ನು ಸರ್ಕಾರ ತುಂಬಾ ಪ್ರೀತಿ ವಿಶ್ವಾಸದಿಂದ ನೋಡಬೇಕಾಗಿದೆ. ಏಕೆಂದರೆ ಸರ್ಕಾರದ ಮೇಲೆ ಇರುವಂತಹ ಭಾರವನ್ನು ಹೆಚ್ಚು ಕಮ್ಮಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇಳಿಸಿದ್ದಾರೆ, ಹಾಗೂ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನ ನೇಮಕ ಮಾಡುವ ವಿಚಾರದಲ್ಲಿ ಭಾರಿ ತಾರತಮ್ಯ ಮಾಡಿದೆ ಸರ್ಕಾರ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಈ ದಿನ ಈ ವೇದಿಕೆ ಮುಖಾಂತರ ಮಾಧ್ಯಮಗಳ ಮುಖಾಂತರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಲ್ಲಿ ತಾರತಮ್ಯಾಗ್ತಾಯಿದೆ ಎಲ್ಲಿ ಲೋಪ ಆಗ್ತಾ ಇದೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನ ಕೊಡಬೇಕು ಆಗದಿದ್ದರೆ ಗುತ್ತಿಗೆ ಶಿಕ್ಷಕರನ್ನಾದರೂ ನೇಮಕ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಮುರುಳಿಕೃಷ್ಣಪ್ಪನವರು ಮಾತನಾಡಿ ಈ ಸಡಗರವನ್ನು ನೋಡಿದರೆ ತುಂಭಾ ಖುಷಿಯಾಗುತ್ತದೆ, ಏಕೆಂದರೆ ಈ ವಿದ್ಯಾಸಂಸ್ಥೆಯ ಅಧ್ಯಕ್ಷರನ್ನು ಮೊದಲು ಬೇಟಿ ಮಾಡಿದೆ ಏತ್ತರದ ವ್ಯಕ್ತಿ ಅಷ್ಟೆ ಎತ್ತರದ ಆಚಾರ ವಿಚಾರ, ಹೃದಯ ಶ್ರೀಮಂತಿಗೆಗೆ ಕಮ್ಮಿ ಇಲ್ಲ ಎಂದು ಅಧ್ಯಕ್ಷರಾದ ಟಿ.ಎಲ್.ಬಾಲೇಶ್ ರವರನ್ನು ಹೊಗಳಿದರು. ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಷಣವನ್ನು ಮಾಡಿದ್ದೇನೆ ಸಂಸ್ಕಾರದಿಂದ ಸಂಯಮದಿಂದ ಕೂತು ಕೇಳುತ್ತಿರುವ ಜನರನ್ನು ನೋಡಿದ್ದು ನಾನು ಈ ಹುಳಿಯಾರಿನಲ್ಲಿ ಬಹಳ ಸಂತೋಷವಾಗುತ್ತಿದೆ. ಇಂದಿನ ಮಕ್ಕಳೆ ಮುಂದಿನ ಭವಿಷ್ಯದ ಪ್ರಜೆಗಳು ಬರಿ ಪ್ರಜೆಗಳಲ್ಲ ಈ ದೇಶದ ಹಾಗೂ ಸಂವಿಧಾನದ ಹಂತಗಳು ಎಂದರೆ ತಪ್ಪಾಗಲಾರದು ಎಲ್ಲರೂ ಸಂಸ್ಕಾರವಂತರಾಗಬೇಕು , ಪ್ರಜ್ಞಾವಂತರಾಗಬೇಕು , ಪ್ರತಿಭಾಸಂಪನ್ನರಾಗಬೇಕು ಮಕ್ಕಳಲ್ಲಿ ಶ್ರದ್ದಾ ಭಕ್ತಿ ಎಲ್ಲವೂ ಕಮ್ಮಿ ಆಗುತ್ತಿದೆ, ಇದನ್ನ ಕಿರಿಯ ವಯಸ್ಸಿನಲ್ಲಿಯೇ ಮಕ್ಕಳು ರೂಡಿಸಿಕೊಳ್ಳಬೇಕು, ಶಿಕ್ಷಣವೆಂದರೆ ಶಾಲಾ ಕಾಲೇಜಿನಲ್ಲಿ ಕಲಿತ ಎಲ್ಲವನ್ನು ಮರೆತಮೇಲೆ ಏನು ಉಳಿಯುತ್ತದೆಯೋ ಅದು ಶಿಕ್ಷಣ ಎಂದರು
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಟಿ.ಎಲ್ ಬಾಲೇಶ್, ಕಾರ್ಯದರ್ಶಿ ಎಲ್ ಆರ್ ಬಾಲಾಜಿ, ಸಹಕಾರ್ಯದರ್ಶಿ ನಾಗರಾಜು ಎಂ ಎಸ್, ಖಜಾಂಚಿ ರವೀಂದ್ರ , ಮುಖ್ಯಶಿಕ್ಷಕರಾದ ಕೆ.ಎಂ. ಗಂಗಾಧರಯ್ಯ , ಸಂಸ್ಥೆಯ ಮಹಿಳಾ ಪದಾಧಿಕಾರಿಗಳು ಸಹಶಿಕ್ಷಕರು, ಬೋದಕೇತರ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು
© ಹುಳಿಯಾರು ಸಮಗ್ರ ಸುದ್ಧಿ . All Rights Reserved.