ಉಚಿತ ಯೋಗಾಸನ ಹಾಗೂ ಪ್ರಾಣಾಯಾಮ ತರಬೇತಿ ಶಿಬಿರ

ಪಟ್ಟಣದ ವಾಸವಿ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ [ರಿ] ಹುಳಿಯಾರು - ಕೆಂಕೆರೆ ಶಾಖೆ ವತಿಯಿಂದ ಉಚಿತ ಯೋಗಾಸನ ಹಾಗೂ ಪ್ರಾಣಾಯಾಮ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಸ್ಥಿರತೆಗಾಗಿ ಯೋಗಾಭ್ಯಾಸ ಒಂದು ಸರಳ ಸಾಧನವಾಗಿದೆ ದಿನನಿತ್ಯದ ಜಂಜಾಟಗಳ ನಡುವೆ ಯೋಗಾಭ್ಯಾಸ ಮಾಡುತ್ತಾ ದೈಹಿಕ ಆರೋಗ್ಯ ಹಾಗೂ ಮಾನಸಿಕ ಸ್ಥಿರತೆಯನ್ನು ಬೆಳಸಿಕೊಂಡು ಸೇವಾ ಮನೋಭಾವದಿಂದ ಆಧ್ಯಾತ್ಮಿಕ ಸಾಧನೆಯನ್ನು ಪಡೆಯಲು ಹಾಗೂ ಮಾನಸಿಕ ಇಚ್ಚಾಶಕ್ತಿ ಮತ್ತು ನಾಯಕತ್ವದ ಗುಣಗಳನ್ನು ಹೆಚ್ಚಿಸಲು ಯೋಗಶಿಕ್ಷಣ ಅವಶ್ಯವಾಗಿದೆ.

ದಿನಾಂಕ: 23-01-2025ನೇ ಗುರುವಾರ ಸಮಯ : ಬೆಳಗ್ಗೆ 5.30 ರಿಂದ 7 ಗಂಟೆವರೆಗೆ ನಡೆಯಲಿದೆ.

ಶಿಬಿರಾರ್ಥಿಗಳಾಗಿ ಸೇರಬಯಸುವವರು ಸಮಿತಿಯ ಯೋಗ ಶಿಕ್ಷಕರುಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಕೋರಿದೆ ಹಾಗೂ ಶಿಭಿರದ ಅವಧಿಯು 48 ದಿನಗಳಾಗಿರುತ್ತವೆ.

ಈ ಶಿಭಿರದಲ್ಲಿ ಪ್ರಾರ್ಥನೆಯ ಮಹತ್ವ , ಸೂರ್ಯ ನಮಸ್ಕಾರ , ಒಳಗೊಂಡಂತೆ ಅಷ್ಟ ನಮಸ್ಕಾರಗಳು, ಯೋಗಾಸನಗಳು, ಪ್ರಾಣಾಯಾಮ , ಮುದ್ರೆಗಳು ವಿಶಿಷ್ಠ ಆಟಗಳು, ಸತ್ಸಂಗ ಭಜನೆ, ವಿಶೇಷ ಪ್ರವಚನಗಳು, ಹಬ್ಬ ಹರಿದಿನಗಳ ಮಹತ್ವ , ಮಾತೃ ಭೋಜನ , ಆಯುರ್ವೇದದ ಮಹತ್ವ ಮುಂತಾದ ವಿಚಾರಗಳ ಬಗ್ಗೆ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ : 9448533976, 9448561013, 9731156546, 9008604156

270

© ಹುಳಿಯಾರು ಸಮಗ್ರ ಸುದ್ಧಿ . All Rights Reserved.