ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಬೆಳ್ಳಾರ ಗ್ರಾಮದಲ್ಲಿ ಚಿತ್ರನಟ ಪುನೀತ್ ರಾಜ್‍ಕುಮಾರ್ ರವರ 50 ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಸೋಮವಾರ ಬೆಳ್ಳಾರ ಗ್ರಾಮದ ವೃತ್ತ ಕ್ಕೆ ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಿ ಕೇಕ್ ಕತ್ತರಿಸಿ ಸಿಹಿ ಹಂಚಿ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು.ಗ್ರಾಪಂ ಅಧ್ಯಕ್ಷೆ ರಾಧರಾಜು,ಚಿಕ್ಕನಾಯಕನಹಳ್ಳಿ ರೇಣುಕಾಂಬ ಸಹಕಾರ ಸಂಘದ ಅಧ್ಯಕ್ಷ ಬೆಳ್ಳಾರ ಎಸ್. ಮಲ್ಲಿಕಾರ್ಜುನಯ್ಯ, ವಕೀಲ ಮೋಹನ್,ಗ್ರಾಪಂ ಸದಸ್ಯರಾದ ಲಕ್ಕೇನಹಳ್ಳಿ ರಘುವೀರ್,ಹೊಯ್ಸಳಕಟ್ಟೆ ಕಾಂತರಾಜು,ಬೆಳ್ಳಾರ ಗೊಲ್ಲರಹಟ್ಟಿ ಚಿಕ್ಕಣ್ಣ, ಆರ್ಯ ಈಡಿಗರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ನಾಗರಾಜು,ಕಾರ್ಯದರ್ಶಿ ಸೋಮಣ್ಣ,ಜಿಲ್ಲಾ ಸಂಘದ ಸದಸ್ಯ ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.