ಸತತ ಮೂರು ತಿಂಗಳು ಹುಳಿಯಾರು ಕೆರೆ ಮಾರ್ಗವಾಗಿ ಬೋರನಕಣಿವೆೆಗೆ ಹೇಮಾವತಿ ನೀರು ಹರಿಸುತ್ತೇನೆ - ಶಾಸಕ ಸಿ.ಬಿ.ಸುರೇಶ್‌ ಬಾಬು

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿ ಗುರತ್ವಾಕರ್ಷಣೆಯ ಮೂಲಕ ಈಗಾಗಲೇ ಚಾನಲ್‌ ಕೆಲಸ ಆಗಿರುವಂತಹ ಶೆಟ್ಟಿಕೆರೆ ಹೋಬಳಿಯ ಸಾಸಲು ಕೆರೆಯಿಂದ ಹುಳಿಯಾರು ಕೆರೆಯವರೆಗೆ ಹೇಮಾವತಿ ನೀರನ್ನು ಹರಿಸಲಾಗುತ್ತದೆ ಎಂದು ಶಾಸಕ
ಸಿ.ಬಿ.ಸುರೇಶ್‌ಬಾಬು ತಿಳಿಸಿದರು.


ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಗಡಬನಹಳ್ಳಿ ಬಳಿಯ ಮುಖ್ಯನಾಲೆಯಿಂದ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಗೇಟ್‌ನ್ನು ತೆರವು ಮಾಡುವ ಮೂಲಕ ಚಾಲನೆ ನೀಡಿ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು ಇಂದಿನಿಂದ ಮೂರು ತಿಂಗಳ ಕಾಲ 8.3 ಕಿ.ಮೀ ಚಾನಲ್ ಮೂಲಕ ಹರಿಯುವಂತ ನೀರು ನಮ್ಮ ತಾಲೂಕಿನ ಸಾಸಲಕೆರೆಯಿಂದ ಪ್ರಾರಂಭವಾಗಿ ಶೆಟ್ಟಿಕೆರೆ, ಅಜ್ಜನಕೆರ, ಗೌಡನಹಳ್ಳಿ ಕೆರೆ, ಹೆಸರಹಳ್ಳಿ ಕೆರೆ, ಅಂಕಸಂದ್ರ ಅಣೆಯ ಮೂಲಕ ತಿಮ್ಲಾಪುರದ ಕೆರೆಯಿಂದ ಹುಳಿಯಾರು ಕೆರೆಯನ್ನು ತಲುಪುತ್ತದೆ. ಹಾಗೇ ಮುಂದುವರೆದು ಸಾದ್ಯವಾದರೆ ಬೋರನಕಣಿವೆಗೂ ಹರಿಸಲಾಗುವುದು. ಈ ಚಾನಲ್ 10 ವೆಂಟಿ ಲೇಟರ್‌ಗಳಲ್ಲಿ ಮಳೆಯಿಂದಾಗಿ ಹೂಳೂ ತುಂಬಿತ್ತು ಅದನ್ನು 28 ಲಕ್ಷ ವೆಚ್ಚದಲ್ಲಿ ತೆಗೆಸಲಾಗಿದ್ದು ಈ ಬಾರಿ ಸಂಪೂರ್ಣ ನೀರು ಸರಾಗವಾಗಿ ಹರಿಯುವ ಸಾದ್ಯತೆ ಇದೆ ಈ ಕೆಲಸದ ಬಗ್ಗೆ ಸಹಕರಿಸಿದ ಇಂಜಿನಿಯರ್‌ಗಳು, ರೈತರಿಗೆ ಹಾಗೂ ಗುತ್ತಿಗೆದಾರರಿಗೆ ಧನ್ಯವಾದಗಳು ಈ ಕೆಲಸದ ಬಗ್ಗೆ ನಮ್ಮನ್ನು ಎಚ್ಚರಿಕೆ ನೀಡಿ ನಿಂದಿಸಿದವರಿಗೂ ಧನ್ಯವಾದಗಳು ನಿಮ್ಮ ನಿಂದನೆಗೆ ನಾವು ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ ನಿಮ್ಮ ನಿಂದನೆ ನಮಗೆ ಜಾಗೃತಿ ಇದ್ದಂತೆ ಅದನ್ನು ನಾನು ಸ್ವೀಕರಿಸುತ್ತೇನೆ ಅವರ ಆಸೆಯಂತೆ ನೀರನ್ನು ಹರಿಸುವ ಕೆಲಸ ಮಾಡಿದ್ದೇನೆ. ಯಾವ ಸಂದರ್ಭಕ್ಕೆ ಯಾವ ಕೆಲಸ ಮಾಡಬೇಕೊ ಆ ಕೆಲಸವನ್ನು ಮಾಡುತ್ತೇನೆ ಯಾವುದೇ ಸಂಶಯ ಬೇಡ ಈ ಬಗ್ಗೆ ಹೂಳು ತೆಗೆಯಲು ಪ್ರತಿ ವರ್ಷ ಹಣದ ಅವಶ್ಯಕತೆ ಇರುತ್ತದೆ. ಅವರು ಇನ್ನೊಂದು ಭಾಗವಾದ ನವಿಲೆಕೆರೆ ಭಾಗದ ಚಾನಲ್ ಕೆಲಸಕ್ಕೆ ರೈತರು ಭೂಮಿ ನೀಡಲು ಮುಂದೆ ಬಂದಿದ್ದು ಅವರನ್ನು ವಿಶ್ವಾಸಕ್ಕೆ ಪಡೆದು ಈ ಭಾಗದ ಕೆಲಸ ಮಾಡುತ್ತೆನೆ ರೈತರು ಭೂಸ್ವಾದೀನಕ್ಕೆ 15 ಕೋಟ ಹಣ ಇದ್ದು ರೈತರು ದೊಡ್ಡ ಮನಸ್ಸು ಮಾಡಿ ತಮ್ಮ ಭೂಮಿ ಬಿಟ್ಟುಕೊಟ್ಟರೆ ಚಾನಲ್ ಕೆಲಸ ಮಾಡಿ ಈ ವರ್ಷದ ಕೊನೆಯವೇಳೆಗೆ ನೀರನ್ನು ಪ್ರಾಯೋಗಿಕವಾಗಿ ಹರಿಸುತ್ತೇನೆ ಈಗಾಗಲೇ ದಾಖಲೆ ನೀಡಿರುವಂತಹ ರೈತರಿಗೆ ಮೂರು ಕೋಟಿಗಳಷ್ಟು ಪರಿಹಾರದ ಹಣ ನೀಡಿದ್ದೇನೆ ಅದೇ ರಿತಿ ಗ್ಯಾರೇಹಳ್ಳಿ ಭಾಗದ ರೈತರ ಮನ ವೊಲಿಸುವ ಕೆಲಸ ಮಾಡಿದ್ದೇನೆ ರೈತರು ಸಹಕರಿಸಿದರೆ ಖಂಡಿತ ಈ ಹೇಮಾವತಿ ನಾಲಾ ಕಾಮಗಾರಿಯನ್ನು ಸಂಪೂರ್ಣಗೊಳಿಸುತ್ತೆನೆ ಎಂದರು.

54

© ಹುಳಿಯಾರು ಸಮಗ್ರ ಸುದ್ಧಿ . All Rights Reserved.