ಹುಳಿಯಾರು: ಕಾಮಶೆಟ್ಟಿಪಾಳ್ಯದಲ್ಲಿ ಶ್ರೀ ಬನಶಂಕರಿ ಅಮ್ಮನವರ ಅದ್ದೂರಿ 15 ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜ. 12 ಮತ್ತು ಜ. 13 ರಂದು ಎರಡು ದಿನಗಳು ಕಾಲ ಕಾರ್ಯಕ್ರಮ ನಡೆಯಲಿದ್ದು.
ದಿನಾಂಕ : 12-01-2025 ನೇ ಭಾನುವಾರ ಸಂಜೆ 6 ಗಂಟೆಗೆ ಕೆಂಕೆರೆ ಗ್ರಾಮ ದೇವತೆ ಶ್ರೀ ಕಾಳಿಕಾಂಭ ದೇವಿ ಮತ್ತು ಹುಳಿಯಾರು ಗ್ರಾಮದ ಶ್ರೀ ಕೆಂಚಮ್ಮ ದೇವಿ ಮತ್ತು ಬರದಲೇಪಾಳ್ಯದ ಶ್ರೀ ಅಂಬಿಕಾದೇವಿ ಅಮ್ಮನವರು ಆಗಮನದೊಂದಿಗೆ ಗಂಗಾ ಪೂಜೆ, ದೇವಾಲಯ ಪ್ರವೇಶ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ದಿನಾಂಕ : 13-01-2025 ನೇ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಬ್ರಾಹ್ಮೀ ಲಗ್ನದಲ್ಲಿ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಬನಶಂಕರಿ ಅಮ್ಮನವರಿಗೆ, ರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಬೆಳಗ್ಗೆ 7.30 ಗಂಟೆಗೆ ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಹೋಮ, ಶ್ರೀ ರುದ್ರಹೋಮ, ಮಹಾಲಕ್ಷ್ಮಿ ಹೋಮ, ಪೂರ್ಣಹುತಿ, ಕುಂಕುಮಾರ್ಚನೆ ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ರಾತ್ರಿ 7 ಗಂಟೆಗೆ ಅನ್ನಸಂತರ್ಪಣೆ ಇರುತ್ತದೆ, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕಮಿಟಿಯವರು ಕೋರಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.