ಚಿ.ನಾ.ಹಳ್ಳಿ : ಪಟ್ಟಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಪರ್ಶ ಕುಷ್ಟರೋಗ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ ವಿ ವೆಂಕಟರಾಮಯ್ಯನವರು ಕುಷ್ಟ ರೋಗವು ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆ ಇದು ಮೈಕ್ರೋ ಬ್ಯಾಕ್ಟೀರಿಯಮ್ ಲೆಪ್ರೆ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಕುಷ್ಟರೋಗದಲ್ಲಿ ಎರಡು ವಿಧ. ಪಿಬಿ ಮತ್ತುಎಂಬಿ. ಪಿ.ಬಿ ಗೆ ಆರು ತಿಂಗಳ ಚಿಕಿತ್ಸೆ ಎಂಬಿ ಗೆ 12 ತಿಂಗಳ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ತಪಾಸಣೆ ಲಭ್ಯವಿದೆ. ಬಹುವಿಧ ಔಷಧಿ ಮಾತ್ರೆಗಳ ಮೂಲಕ ಸಂಪೂರ್ಣ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ವಾಸಿಯಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ರೋಗವನ್ನು ಪತ್ತೆ ಹಚ್ಚಿದರೆ ಅಂಗವಿಕಲತೆಯನ್ನು ತಪ್ಪಿಸಬಹುದು. ಎಂದು ಆರೋಗ್ಯ ಶಿಕ್ಷಣ ನೀಡಿದರು.
ಒಟ್ಟಾಗಿ ನಾವು ಕುಷ್ಟರೋಗದ ಬಗ್ಗೆ ಜಾಗೃತಿ ಮೂಡಿಸೋಣ. ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ. ಮತ್ತು ಕುಷ್ಟರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ ಎಂದು ಹೇಳುವ ಮೂಲಕ ಅರಿವು ಮೂಡಿಸಿದರು. ಜನವರಿ 30 ರಿಂದ ಫೆಬ್ರವರಿ 13. 2025 ರವರೆಗೆ ಈ ಆಂದೋಲನ ನಡೆಯುತ್ತದೆ ಎಂದು ತಿಳಿಸಿದರು
ಕೈ ಕೈ ಜೋಡಿಸಿ – ಕುಷ್ಟ ನಿವಾರಿಸಿ, ಮಚ್ಚೆಗಳಿದ್ದರೆ ಮೈಯಲ್ಲಿ - ಮುಚ್ಚಿಡಬೇಡಿ ಮನದಲ್ಲಿ ಎಂಬ ಘೋಷವಾಕ್ಯಗಳನ್ನು ಕೂಗಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಯಶ್ವಂತ್ , ಡಾ. ಭರತ್ . ಕ್ಷೇತ್ರ ಆರೋಗ್ಯ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಿತಾಧಿಕಾರಿಗಳಾದ ರೇಣುಕಮ್ಮ, ಆಶಾ ಮೇಲ್ವಿಚಾರಕರಾದ ಜಯಂತಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆಸ್ಪತ್ರೆಯ ಬಾಲಕೃಷ್ಣ, ಸೌಮ್ಯ ಹಾಗೂ ಸಾರ್ವಜನಿಕರು ಹಾಜರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.