ಹುಳಿಯಾರು ಪಟ್ಟಣ ಪಂಚಾಯಿತಿಯ ಬಾಬ್ತುಗಳ ಬಹಿರಂಗ ಹರಾಜು

ಹುಳಿಯಾರಿನ ಪಟ್ಟಣ ಪಂಚಾಯಿತಿಯ 2025-26 ನೇ ಸಾಲಿನ ಪಟ್ಟಣ ಪಂಚಾಯಿತಿಗೆ ಒಳಪಡುವ ಬಾಬ್ತುಗಳನ್ನು ಗುರುವಾರದಂದು ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಬಹಿರಂಗ ಹರಾಜು ನಡೆಸಲಾಯಿತು.
ಆರಂಭದಲ್ಲೇ ಗಲಾಟೆ ಗದ್ದಲಗಳಿಂದ ಆರಂಭವಾದ ಬಹಿರಂಗ ಹರಾಜು ಪ್ರಕ್ರಿಯೆ ಠೇವಣಿ ಮೊತ್ತವನ್ನು ಹೆಚ್ಚು ಮಾಡಿರುವುದಕ್ಕೆ ಮೊದಲು 5000 ಇತ್ತು 25000 ಮಾಡಿರುವುದಕ್ಕೆ ಹರಾಜು ಕೂಗುವವರು ಆಕ್ಷೇಪ ವ್ಯಕ್ತಪಡಿಸಿದರು , ನಂತರ ಪಂಪು , ಮೊಟಾರ್ ಗಳನ್ನು ಆಚೆ ಇಟ್ಟು ತದನಂತರ ಒಳಗೆ ಹಿಡಿಸಿದ ಪ.ಪಂ. ಮುಖ್ಯಾಧಿಕಾರಿವಿರುದ್ದ ಬೆಂಗಳೂರಿನಿಂದ ಬಂದ ಬಿಡ್ ದಾರರು ಆಕ್ರೋಶ ವ್ಯಕ್ತಪಡಿಸಿದರು,
ನಂತರ ಆಗೋ ಹೀಗೋ ಮಾಡಿ ಹರಾಜು ಪ್ರಕ್ರಿಯೇ ಪ್ರಾರಂಭವಾಗಿ ಹುಣಸೇಮರ ಫಲಸು ಹರಾಜು , ವಾರದ ಸಂತೆ ನೆಲವಳಿ ಸುಂಕ ವಸೂಲಾತಿ ಹರಾಜು, ಖಾಸಗಿ ಬಸ್ಸುಗಳ ಶುಲ್ಕ ವಸೂಲಾತಿ ಹಕ್ಕು, ಪುಟ್ ಪಾತ್ ಅಂಗಡಿಗಳ ವಸೂಲಾತಿ ಹಕ್ಕು , ಅನುಪಯುಕ್ತ ಸಾಮಾಗ್ರಿಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.

ಅಂತಿಮವಾಗಿ ಹುಣಸೇ ಮರದ ಫಸಲು (11 ಮರಗಳು ) ಆರ್.ಮಂಜುನಾಥ್ ರವರಿಗೆ 2800 ರೂಗಳಿಗೆ, ವಾರದ ಸಂತೆ ನೆಲವಳಿ ಸುಂಕ ವಸೂಲಾತಿ ಮಿಲ್ಟ್ರಿ ಶಿವಣ್ಣ ರವರಿಗೆ 160500ರೂಗಳಿಗೆ, ಖಾಸಗಿ ಬಸ್ಸುಗಳ ಶುಲ್ಕ ವಸೂಲಾತಿ ಹಕ್ಕು ಸೈಯದ್ ಮುನಾವರ್ ರವರಿಗೆ 15000 ರೂಗಳಿಗೆ, ಪುಟ್ ಪಾತ್ ಅಂಗಡಿಗಳ ವಸೂಲಾತಿ ಹಕ್ಕು ಎಂ. ಚನ್ನಕೇಶವ ರವರಿಗೆ 500500ರೂ, ಹಾಗೂ ಅನುಪಯುಕ್ತ ಸಾಮಾಗ್ರಿಗಳನ್ನು ಅಬ್ದುಲ್ ಫಾಜಿಲ್ ರವರಿಗೆ 5600 ರೂಗಳಿಗೆ ಅಂತಿಮವಾಗಿ ಹರಾಜಾಯಿತು.
ಕಳೆದ ಬಾರಿ ಪುಟ್ ಪಾತ್ ಅಂಗಡಿಗಳ ವಸೂಲಾತಿ ಹರಾಜು ಪಡೆದಿದ್ದ ಕೆಂಕೆರೆ ಮಲ್ಲಿಕಾರ್ಜುನಯ್ಯ ನನ್ನು ವ್ಯಾಪಾರಿಗಳಿಂದ ಹೆಚ್ಚು ಶುಲ್ಕ ವಸೂಲಾತಿ ಮಾಡಿರುವುದಾಗಿ ಈ ಬಾರಿ ಹರಾಜಿಗೆ ಠೇವಣಿ ಕಟ್ಟಿದ್ದರು ಸಹ ಪುಟ್ ಪಾತ್ ವ್ಯಾಪಾರಿಗಳು ದೂರು ಹೇಳಿದ್ದರಿಂದ ಹರಾಜಿನಿಂದ ಕೈಬಿಟ್ಟರು.

ಪುಟ್ ಪಾತ್ ವ್ಯಾಪಾರಿಗಳ ಅಳಲು : ಅಂಗಡಿಗಳ ಶುಲ್ಕವನ್ನು ಸರಿಯಾಗಿ ನಿಗಧಿಪಡಿಸಬೇಕು. ಹರಾಜು ಪಡೆದಿರುವವರು ಪ.ಪಂ. ನಿಗದಿ ಪಡಿಸಿರುವ ಸಂಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಬಾರದು. ನಾಮಿನಿ ಸದಸ್ಯರಲ್ಲಿ ಸುಂಕ ವಸೂಲಿ ಮಾಡಬಾರದು , ಯಾವ ಯಾವ ವ್ಯಾಪಾರ ಮಾಡುತ್ತಾರೆ ಎಷ್ಟು ಅಳತೆಯಿದೆ ಅದರ ಆದರದ ಮೇಲೆ ಶುಲ್ಕ ವಸೂಲಿ ಮಾಡಬೇಕು, ಬಸ್ ಸ್ಟಾಂಡ್ ನಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಸುಂಕ ವಸೂಲಿಮಾಡಿ ಎಂದು ತಮ್ಮ ಅಳಲು ತೊಡಿಕೊಂಡರು.

ಗುಜುರಿ ನಾಗಣ್ಣ : ಸಂತೆ ವರ್ತಕರಿಗೆ ಸರಿಯಾದ ಸ್ಥಳವನ್ನು ಮಾಡಿಕೊಟ್ಟಿಲ್ಲ , ಶೌಚಾಲಯವಿಲ್ಲ , ಕುಡಿಯುವ ನೀರನ್ನು ಸಹ ಕೊಡುವುದಿಲ್ಲ ರಸ್ತೆ ಮೇಲೆ ಸಂತೆ ವರ್ತಕರು ವ್ಯಾಪಾರ ಮಾಡುತ್ತಿದ್ದಾರೆ, ಸರಿಯಾಗಿ ಸೌಲಭ್ಯ ಕೊಡದೆ ನಿವೇಕೆ ಶುಲ್ಕ ವಸೂಲಿ ಮಾಡುತ್ತಿದ್ದೀರಿ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.

ಈ ಸಂಧರ್ಭದಲ್ಲಿ ಪ.ಪಂ. ಉಪಾಧ್ಯಕ್ಷೆ ಕಾವ್ಯಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್, ಮುಖ್ಯಾಧಿಕಾರಿ ನಾಗಭೂಷಣ್ , ಕಂದಾಯ ನಿರೀಕ್ಷಕರಾದ ಶೃತಿ ಕೆ ಬನರ್ , ಸದಸ್ಯರಾದ ಹೇಮಂತ್ ಕುಮಾರ್ , ಜಹೀರ್ ಸಾಬ್ , ಮಹಮದ್ ಜುಬೇರ್, ಬಿಬಿ ಫಾತೀಮಾ, ನಾಮಿನಿ ಸದಸ್ಯರಾದ ಬಡಗಿ ವೆಂಕಟೇಶ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

83

© ಹುಳಿಯಾರು ಸಮಗ್ರ ಸುದ್ಧಿ . All Rights Reserved.