ಹುಳಿಯಾರು ವಿನಾಯಕ ನಗರದಲ್ಲಿ ಅಂಬೇಡ್ಕರ್ ಜಯಂತಿ
ಹುಳಿಯಾರು : ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರರ ಮೂಲದ್ಯೇಯವಾಗಿತ್ತು ಎಂದು ಶಿಕ್ಷಕ ಜಯಣ್ಣ ತಿಳಿಸಿದರು.
ಪಟ್ಟಣದ ವಿನಾಯಕನಗರದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ನಾವುಗಳು ಆಚರಣೆ ಮಾಡುತ್ತಿದ್ದೇವೆ ರಾಮ್ ಜೀ ಸಕ್ಪಾಲ್ ಹಾಗೂ ಬೀಮಾಬಾಯಿ ಯವರ 14ನೇ ಪುತ್ರನಾಗಿ ಹುಟ್ಟುತ್ತಾರೆ, ವಿದ್ಯಾಭ್ಯಾಸದಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆಯುತ್ತಾರೆ, ಆರ್ಥಿಕವಾಗಿ ಸಾಮಾಜಿಕವಾಗಿ ಬಡ ಕುಟುಂಬದಿಂದ ಬಂದಂತಹ ಇವರು ಹೆಚ್ಚಿನ ವಿದ್ಯಾಭ್ಯಾಸ ಮಾಡಿ 44 ಡಿಗ್ರಿಯನ್ನು ಪಡೆಯುತ್ತಾರೆ. ನಂತರ ಲಂಡನ್ ನಲ್ಲಿ ಅಭ್ಯಾಸ ಮಾಡಿ 163 ದೇಶಗಳ ಕಾನೂನಿನ ಗ್ರಂಥವನ್ನು ಅಭ್ಯಾಸ ಮಾಡುತ್ತಾರೆ. ನಂತರ ಕಾನೂನು ಮಂತ್ರಿಯಾಗಿರುತ್ತಾರೆ ಎಲ್ಲಾ ಹಿಂದುಳಿದವರ ಹಾಗೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾನೂನುಗಳನ್ನು ಹಾಗೂ ಹಲವು ಸುಧಾರಣೆಗಳನ್ನು ತರುತ್ತಾರೆ. ಹೆಣ್ಣು ಮಕ್ಕಳಿಗೆ ಹಕ್ಕುಗಳನ್ನು ಕೊಡಿಸುವ ವಿಚಾರದಲ್ಲಿ ಅವರಿಗೆ ಬೇಸರವಾಗಿ ರಾಜೀನಾಮೆ ಕೊಟ್ಟು ಹೋರಾಟ ಮಾಡುತ್ತಾರೆ. ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟಮಾಡಿ ಎಂಬುದು ಅವರ ಮೂಲಧ್ಯೇಯವಾಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ವಿಶಿಷ್ಠವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ, ಕುಮಾರ್ , ವೈ ರಾಮಚಂದ್ರಯ್ಯ, ಹೆಚ್ ಡಿ ಜಗದೀಶ್, ಹೆಚ್. ಪ್ರಸನ್ನ ಕುಮಾರ್ , ಲೋಕೇಶ್ ಹೆಚ್ ಕೆ, ಅಂಜನ್ ಮೂರ್ತಿ, ಕೇಶವ್ , ಮೂರ್ತಣ್ಣ ವೈ ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.