ಹುಳಿಯಾರು : ಬ್ಯಾಂಕುಗಳಲ್ಲಿ ತೆರೆದಿರುವ ಉಳಿತಾಯ ಖಾತೆಗಳನ್ನು ನಿರಂತರವಾಗಿ ವ್ಯವಹರಿಸಿ ಸಕ್ರಿಯವಾಗಿ ಇಟ್ಟುಕೊಳ್ಳುವಂತೆ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ತುಮಕೂರು ಪ್ರಾದೇಶಿಕ ಕಚೇರಿಯ ಆರ್ಥಿಕ ಸೇರ್ಪಡೆ ವಿಭಾಗದ ವ್ಯವಸ್ಥಾಪಕಿ ದಿವ್ಯಶ್ರೀ ತಿಳಿಸಿದರು.
ಹುಳಿಯಾರಿನ ಸ್ಟೇಟ್ ಬ್ಯಾಂಕ್ ಹಾಗೂ ತಿಮ್ಲಾಪುರ ಗ್ರಾಮ ಪಂಚಾಯಿತಿ ಮಟ್ಟದ ವಿನಾಯಕ ಸಂಜೀವಿನಿ ಒಕ್ಕೂಟ ಜಂಟಿಯಾಗಿ ತಿಮ್ಲಾಪುರದ ಚಂದ್ರಮೌಳೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಜನಸುರಕ್ಷಾ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಉಳಿತಾಯ ಖಾತೆಗಳಿಗೆ ಹಣವನ್ನು ಜಮಾ ಮಾಡದೆ ಅಥವಾ ವಿತ್‌ಡ್ರಾ ಮಾಡದೆ ಇದ್ದರೆ, ಆ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ. ಆದ್ದರಿಂದ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಸಕ್ರಿಯವಾಗಿಡಲು ನಿಯಮಿತವಾಗಿ ಹಣದ ವ್ಯವಹಾರ ನಡೆಸುವುದು ಬಹಳ ಮುಖ್ಯ. ಜತೆಗೆ, ಕೆವೈಸಿ (KYC) ದಾಖಲೆಗಳಾದ ಆಧಾರ್, ಪಾನ್ ಕಾರ್ಡ್, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಲ್ಲಿ ಏನಾದರೂ ಬದಲಾವಣೆ ಇದ್ದರೆ, ಅವುಗಳನ್ನು ಬ್ಯಾಂಕಿಗೆ ಒದಗಿಸಿ ಖಾತೆಯನ್ನು ಸಕ್ರಿಯವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.