ಅಬಾಕಸ್ ಇಂದ ಜ್ಞಾನ ವೃದ್ಧಿ: ಬ್ರಹ್ಮಕುಮಾರಿ ಯೋಗಿನಿ ಗೀತಕ್ಕ
ಹುಳಿಯಾರು : ಹುಳಿಯಾರಿನ ಈಶ್ವರೀಯ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ಎಸ್ ವಿ ಬಿ ಅಬಾಕಸ್ ಅಕಾಡೆಮಿ ವತಿಯಿಂದ ಅಬಾಕಸ್ ನಲ್ಲಿ ಮೊದಲನೇ ಹಂತ ಪೂರ್ಣಗೊಳಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮಕುಮಾರಿ ಯೋಗಿನಿ ಗೀತಕ್ಕ ಮಾತನಾಡಿ ಅಬಾಕಸ್ ವೇಗವಾಗಿ ಗಣಿತದಲ್ಲಿ ಬರುವ ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಮೆದುಳಿನಲ್ಲಿ ಏಕಾಗ್ರತೆಯಿಂದ ವೇಗವಾಗಿ ಲೆಕ್ಕಾಚಾರ ಮಾಡುವುದು, ಮಕ್ಕಳು ಕಣ್ಣು ಮುಚ್ಚಿಕೊಂಡು ಲೆಕ್ಕಾಚಾರ ಮಾಡುವುದು ನೋಡಿದೆ ಕಣ್ಣು ಮುಚ್ಚಿದರೆ ಶಿಕ್ಷಕಿ ಶೃತಿ ಏನು ಹೇಳಿಕೊಟ್ಟಿದ್ದಾರೆ ಅದನ್ನ ಮಾತ್ರ ನೆನಿಸಿಕೊಳ್ಳುತ್ತಾರೆ. ವೇಗವಾಗಿ ಲೆಕ್ಕಾಚಾರ ಮಾಡೋದಿಕ್ಕೆ ಅಬಾಕಸ್ ತುಂಬಾ ಸಹಕಾರಿಯಾಗಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಅಶ್ವಿನಿ ಮಾತನಾಡಿ ಈಗಿನ ಮಕ್ಕಳಿಗೆ ನವಯುಗದ ಶಿಕ್ಷಣ ಬೇಕಾಗಿದೆ ದಿನಗಳು ತುಂಬಾವೇಗದಲ್ಲಿ ಓಡುತ್ತಿವೆ ಅಬಾಕಸ್ ಅನ್ನೊದ್ ಪ್ರಾರಂಭವಾಗಿದ್ದು ಚೈನಾ, ಜಪಾನ್ ಕಡೆಯಿಂದ, ನಾವು ಉಪಯೋಗಿಸುವ ಎಲ್ಲಾ ತರಹದ ಯಂತ್ರಗಳು ಯಾವಾಗ ಬೇಕಾದರೂ ಹಾಳಾಗಬಹುದು, ಮನುಷ್ಯನ ಬುದ್ದಿ ಶಕ್ತಿ ಏನಿದೆ ಮನುಷ್ಯ ಇರೋವರೆಗು ಅದು ಜೊತೆಯಲ್ಲೆ ಇರುತ್ತೆ. ನೀವು ಚೀನಾ, ಜಪಾನ್ ನಲ್ಲಿ ನೋಡಿರಬಹುದು ಪುಟ್ಟ ಮಕ್ಕಳು ಕೂಡ ಪೋಷಕರ ಮೇಲೆ ಡಿಪೆಂಡ್ ಆಗಿರುವುದಿಲ್ಲ,ಹಾಗೂ ಬಾಲ್ಯವಸ್ಥೆನಲ್ಲಿಯೇ ಸಾಧನೆ ಮಾಡುವಂತಹುದು, ಗ್ರಾಮೀಣ ಪ್ರದೇಶದಲ್ಲಿ ಅಬಾಕಸ್ ನೆಡೆಸುತ್ತಿರುವುದು ತುಂಬಾ ಖುಷಿಯ ವಿಚಾರ , ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಇವೆಲ್ಲವನ್ನು ನಾವು ಬರೆದು ಲೆಕ್ಕಾ ಮಾಡುವುದು ತುಂಬಾ ತಡವಾಗುತ್ತದೆ, ಆದರೆ ಅಬಾಕಸ್ ನಲ್ಲಿ ಕಲಿತರೆ ವೇಗವಾಗಿ ಲೇಕ್ಕಾಚಾರ ಮಾಡಲು ಅನುಕೂಲವಾಗುತ್ತದೆ. ಸದ್ಯಕ್ಕೆ ಮೊದಲ ಹಂತವನ್ನು ಮಕ್ಕಳು ಕಲಿತಿದ್ದಾರೆ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಅಬಾಕಸ್ ಗೆ ಮಕ್ಕಳನ್ನು ಸೇರಿಸಿದರೆ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.
ನಿವೃತ್ತಿ ಮುಖ್ಯ ಶಿಕ್ಷಕಿಯಾದ ಪ್ರೇಮ ಲೀಲಾ ರವರು SVB ಅಕಾಡೆಮಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು
SVB ಅಕಾಡೆಮಿಯ ಮಾರ್ಗದರ್ಶಕಿಯಾದ ಶೃತಿ ಕಾರ್ಯಕ್ರಮ ನಿರೂಪಿಸಿದರು ಎಸ್ ವಿ ಬಿ ಅಕಾಡೆಮಿಯಲ್ಲಿ ದಿನಾಂಕ 10- 4 -2025 ರಿಂದ ಉಚಿತವಾಗಿ ಬೇಸಿಗೆ ಶಿಬಿರ ನಡೆಸಲಾಗುತ್ತಿದ್ದು ಆಸಕ್ತಿ ಮಕ್ಕಳು ಭಾಗವಹಿಸಬೇಕೆಂದು ತಿಳಿಸಿದರು. ಅಬಾಕಸ್ ಮತ್ತು ವೇದಿಕ್ ಮ್ಯಾತ್ಸ್ ತರಗತಿ ಪ್ರಾರಂಭವಾಗಿದೆ. ಆಸಕ್ತಿಯು ಳ್ಳವರು ಸಂಪರ್ಕಿಸಬೇಕಾಗಿ ತಿಳಿಸಿದರು,
ನಂತರ ಮೊದಲ ಹಂತವನ್ನು ಪೂರ್ಣಗೊಳಿಸಿದ ಎಲ್ಲಾ ಮಕ್ಕಳಿಗೆ ಗೀತಕ್ಕ ನವರಿಂದ ಬಹುಮಾನ ವಿತರಿಸಲಾಯಿತು. ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ವೈ.ಆರ್.ಮಲ್ಲಿಕಾರ್ಜುನ್ , ಪ್ರೇಮಲೀಲಾ, ಕ.ರ.ವೇ ಚನ್ನಬಸವಯ್ಯ, ರಾಮನಾಥ್ , ಮಂಜುನಾಥ್ ಹಾಗೂ ಪೋಷಕರು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.