ಹೋಬಳಿಯ ಸೀಗೇಬಾಗಿ ಗೇಟ್ ನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿಕ್ಕನಾಯಕನಳ್ಳಿ ಹಾಗೂ ಗ್ರಾಮ ಪಂಚಾಯಿತಿ ತಿಮ್ಲಾಪುರ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಸೀಗೇಬಾಗಿ ಇವರ ಸಂಯುಕ್ತಾಶ್ರಯದಲ್ಲಿ ಮಿಶ್ರತಳಿ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ ಮತ್ತು ಕರುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಜ. 16 ನೇ ಗುರುವಾರ ಬೆಳಗ್ಗೆ ಮತ್ತು ಸಂಜೆ ಹಾಲು ಕರೆಯುವ ಸ್ಪರ್ಧೆ ಹಾಗೂ ಜ. 17 ನೇ ಶುಕ್ರವಾರದಂದು ಕರುಗಳ ಪ್ರದರ್ಶನ ಇರುತ್ತದೆ.
ಪ್ರಥಮ ಬಹುಮಾನ ರೂ. 15000, ದ್ವೀತೀಯ ಬಹುಮಾನ ರೂ. 10000 , ತೃತೀಯ ಬಹುಮಾನ ರೂ. 5000 ಹಾಗೂ ಈ ಎಲ್ಲಾ ಬಹುಮಾನಗಳ ಜೊತೆ ಬೆಲೆ ಬಾಳುವ ರೈತೋಪಯೋಗಿ ಸಾಮಾಗ್ರಿಗಳನ್ನು ನೀಡಲಾಗುವುದು ಮತ್ತು 7 ರಾಸುಗಳಿಗೆ ಸಮಾಧಾನಕರ ಬಹುಮಾನ ವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಡಾ. ರೆ.ಮ.ನಾಗಭೂಷಣ್ , ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ, ಚಿ.ನಾ.ಹಳ್ಳಿ, ಡಾ. ಹೆಚ್.ಟಿ.ಮಂಜುನಾಥ್ ಮುಖ್ಯ ಪಶುವೈಧ್ಯಾಧಿಕಾರಿಗಳು, ಪಶು ಆಸ್ಪತ್ರೆ ಹುಳಿಯಾರು, ವಿ. ಬಸವರಾಜು ಕಾರ್ಯನಿರ್ವಹಣಾಧಿಕಾರಿಗಳು, ಹಾಲು ಉತ್ಪಾದಕರ ಸಂಘ ಸೀಗೇಬಾಗಿ, ಕೆ.ಟಿ. ಚಿಕ್ಕಣ್ಣ ಪಿ.ಡಿ.ಓ ಗ್ರಾ.ಪಂ. ತಿಮ್ಲಾಪುರ ಇವರುಗಳನ್ನು ಸಂಪರ್ಕಿಸಬಹುದಾಗಿದೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.