ಪ್ರತಿ ವರ್ಷದಂತೆ ಪಟ್ಟಣದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಶ್ರೀ ಅಯ್ಯಪ್ಪ ಸ್ವಾಮಿಯವರ ಉತ್ಸವ ಜರುಗಿತು.
ಸ್ವಾಮಿಯವರ ಉತ್ಸವಕ್ಕೆಂದು ಹುಳಿಯಾರು ಪಟ್ಟಣದಲ್ಲಿ ಬಾಳೆಕಂದು ಕಟ್ಟಿ ಸಿಂಗರಿಸಲಾಗಿತ್ತು . ಸ್ವಾಮಿಯ ಉತ್ಸವಕ್ಕೆಂದು ಹೂವಿನಿಂದ ಸಿಂಗರಿಸಲಾಗಿದ್ದ ವಾಹನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಹುಳಿಯಾರಿನ ಗ್ರಾಮ ದೇವತೆಗಳಾದ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಹುಳಿಯಾರಮ್ಮನವರನ್ನು ಕೂರಿಸಿ ಸುಮಾರು 7 ಗಂಟೆಗೆ ಉತ್ಸವ ದೇವಸ್ಥಾನದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಹೊರಟಿತು ಉತ್ಸವದಲ್ಲಿ ಆಕರ್ಷಣೆಗಾಗಿ ಅಯ್ಯಪ್ಪ ಸ್ವಾಮಿ ಗೀತೆಗಳನ್ನು ಹಾಕಲು ಡಿಜೆ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಚಂಡೆ ವಾಧ್ಯ , ವೀರಗಾಸೆ, ಮತ್ತು ಸಿಡಿ ಮದ್ದಿನ ಶಬ್ದಗಳು ಉತ್ಸವಕ್ಕೆ ಮೆರಗು ತಂದವು. ಅಲ್ಲಲ್ಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕರ್ಪೂರ ಹಚ್ಚುತ್ತ ಅಯ್ಯಪ್ಪ ಸ್ವಾಮಿ ನಾಮ ಜಪಿಸುತ್ತ ಹೆಜ್ಜೆ ಹಾಕುತ್ತ ಮುನ್ನೆಡದರು. ರಾತ್ರಿ 8.30 ರ ಸಮಯದಲ್ಲಿ ಚಿ.ನಾ.ಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಬೇಟಿ ನೀಡಿ ಉತ್ಸವದಲ್ಲಿ ಪಾಲ್ಗೋಂಡರು,
© ಹುಳಿಯಾರು ಸಮಗ್ರ ಸುದ್ಧಿ . All Rights Reserved.