ಮೇ 10 ಕೊನೆ ದಿನಾಂಕ | ನೊಂದಾಯಿಸಲು ಪ್ರತ್ಯೇಕ ಕೌಂಟರ್
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ- ಆಸ್ತಿ ಅಭಿಯಾನ ಆರಂಭಿಸಲಾಗಿದೆ ಎಂದು ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ತಿಳಿಸಿದರು. ಆಸ್ತಿ ಮಾಲೀಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿ ಮಾತನಾಡಿ ನಮೂನೆ 3 (ಎ-ರಿಜಿಸ್ಟರ್) ಹಾಗೂ ನಮೂನೆ -3ಎ (ಬಿ-ರಿಜಿಸ್ಟರ್)ನಲ್ಲಿ ಇ- ಆಸ್ತಿ ನೋಂದಾಯಿಸಲು ಅಭಿಯಾನ ಆರಂಭಗೊಂಡಿದ್ದು ಇದಕ್ಕಾಗಿ ಪಟ್ಟಣ ಪಂಚಾಯಿತಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ವ್ಯವಸ್ಥೆ ಗೊಳಿಸಲಾಗಿದೆ ಎಂದರು.
ನಕ್ಷೆ ಉಲ್ಲಂಘನೆ, ಪಾರ್ಕಿಂಗ್ ಜಾಗಕ್ಕೆ ಅವಕಾಶ ಕಲ್ಪಿಸದಿರುವುದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ಮಹಡಿ ನಿರ್ಮಿಸಿರುವುದು ಸೇರಿದಂತೆ ನಿಯಮ ಮೀರಿ ಕಟ್ಟಿರುವ ಕಟ್ಟಡಗಳಿಗೆ ಬಿ ಖಾತೆ ಪಡೆಯಬಹುದಾಗಿದ್ದು ನಮೂನೆ-3ಎ (ಬಿ-ರಿಜಿಸ್ಟರ್) ಪಡೆಯಲು ಅವಕಾಶವಿದ್ದು ಸಂಬಂಧಪಟ್ಟ ಆಸ್ತಿ ಮಾಲೀಕರುಗಳು ತಮ್ಮ ಸ್ವತ್ತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಪಟ್ಟಣ ಪಂಚಾಯಿತಿ ಕಚೇರಿಗೆ ಸಲ್ಲಿಸಿ ಖಾತೆ ಸರಿಪಡಿಸಿಕೊಳ್ಳಬಹುದಾಗಿದೆ ಎಂದರು.
ನಮೂನೆ 3 ʼಎ' ರಿಜಿಸ್ಟರ್ ಪಡೆಯಲು ಬೇಕಾದ ದಾಖಲೆಗಳು:
1. ಅಸ್ತಿಗೆ ಸಂಬಂಧಿಸಿದಂತ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ನೊಂದಾಯಿತ ಮಾರಾಟ ಪತ್ರಗಳು / ದಾನ ಪತ್ರ / ವಿಭಾಗ ಪ್ರತ್ರ / ಸರ್ಕಾರ ಅಥವಾ ಸರ್ಕಾರ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು / ಮಂಜೂರಾತಿ ಪತ್ರಗಳು / ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ.
2. ಸಕ್ಷಮ ಪ್ರಾಧಿಕಾರದಿಂದ ಅನುಮೋಧನೆಯಾದ ದೃಢೀಕೃತವಾದ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ.
3.ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ (ಇ.ಸಿ)
4. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿಸಿದ ರಸೀತಿ, ನೀರಿನ ಶುದ್ಧ, ಒಳಚರಂಡಿ ಶುಲ್ಕದ ರಸೀದಿಗಳು
5. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
6. ಮಾಲೀಕರ ಗುರುತಿನ ಚೀಟಿ
ನಮೂನೆ 3ಎ ʼಬಿ' ರಿಜಿಸ್ಟರ್ ಪಡೆಯಲು ಬೇಕಾದ ದಾಖಲೆಗಳು.
1. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ: 10-09-2024 ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳುದಾನ ಪತ್ರಗಳು / ದಾನ ಪತ್ರ / ವಿಭಾಗ ಪತ್ರಗಳು / ಹಕ್ಕು ಖುಲಾಸೆ ಪತ್ರಗಳು
2. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ (ಇ.ಸಿ)
3. ಚಾಲ್ತಿ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿದ ರಸೀದಿ. ನೀರಿನ ಶುಲ್ಕ ಒಳಚರಂಡಿ ಶುಲ್ಕದ ರಸೀದಿಗಳು
4. ಮಾಲೀಕರ ಫೋಟೋ ಮತ್ತು ಸ್ವತ್ತಿನ ಪೋಟೋ
ಈ ದಾಖಲೆಗಳು ಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗಭೂಷಣ್ ವಿವರಿಸಿದರು, ಇ-ಆಸ್ತಿಯನ್ನು ಈವರೆಗೆ ಪಡೆಯದೇ ಇರುವ ಖಾತೆಗಳಿಗೆ ದಿನಾಂಕ: 10-05-2025 ರ ಒಳಗಾಗಿ ಇ-ಆಸ್ತಿಯನ್ನು ಪಡೆದುಕೊಳ್ಳುವುದು ಎಂದು ತಿಳಿಸಿದರು. ಈ ವೇಳೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಕಾವ್ಯಾರಾಣಿ, ಇದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.