ಕಲಾ ತಂಡದಿಂದ ಆರೋಗ್ಯ ಮಾಹಿತಿ

ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಲಿಂಗಪ್ಪನಪಾಳ್ಯ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳ ಕಛೇರಿ ತುಮಕೂರು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಆರೋಗ್ಯ ಸೌದ ಬೆಂಗಳೂರು ವತಿಯಿಂದ ಸಂಗಮೇಶ್ವರ ಜಾನಪದ ಕರಪಾಲಮೇಳ ತಂಡದವರಿಂದ ರಕ್ತ ಹೀನತೆ, ಶಿಶು ಮರಣ, ತಾಯಿ ಮರಣ, ಕುಷ್ಟರೋಗ, ಗಂಡಾಂತರ ಗರ್ಬಿಣಿ, ಬಾಣಂತಿಯ ಆರೈಕೆ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಈಶ್ವರಯ್ಯ ಮತ್ತು ಸಂಗಡಿಗರಿಂದ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

119

© ಹುಳಿಯಾರು ಸಮಗ್ರ ಸುದ್ಧಿ . All Rights Reserved.