ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಹುಳಿಯಾರು : ಪಟ್ಟಣದ ವಾರ್ಡ್ ಗಳಲ್ಲಿ ಶುಕ್ರವಾರ ಶಾಸಕರು ಹಾಗೂ ಜೆ.ಡಿ.ಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ. ಸುರೇಶ್ ಬಾಬು ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
10 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ 2 ಬಡ್ಡಿ ಪುಟ್ಟಣ್ಣನ ಅಂಗಡಿ ಪಕ್ಕದ ರಸ್ತೆ, 30 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. 4 ರಲ್ಲಿ ನೂರಾನಿ ಮಸೀದಿ ಹತ್ತಿರ, 30 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. 5 ರ ಬಾಲಾಜಿ ಟಾಕೀಸ್ ಹಿಂಬಾಗದಲ್ಲಿ , 35 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. 9 ವೈ ಎಸ್ ಪಾಳ್ಯದಲ್ಲಿ , 20 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. 14 ರ ಇಂದಿರಾನಗರದಲ್ಲಿ, 25 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. 15 ರ ಉರ್ದು ಸ್ಕೂಲ್ ಹತ್ತಿರದ ರಸ್ತೆ, 25 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. 15 ರ ಗಾಂಧಿ ಪೇಟೆ ಹಾಸ್ಟೆಲ್ ಹತ್ತಿರ, 20 ಲಕ್ಷ ವೆಚ್ಚದಲ್ಲಿ ವಾಸವಿ ಶಾಲೆ ಹತ್ತಿರದಿಂದ ಮುಸ್ಲಿಂ ಖಬರಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಜಹೀರ್ ಸಾಬ್ ಮಾತನಾಡಿ ಅಲ್ಪಸಂಖ್ಯಾತರ ನಿಧಿಯಲ್ಲಿ ಹಣವನ್ನು ತಂದು ಅಭಿವೃದ್ದಿ ಮಾಡುತ್ತಿರುವುದು ಸಂತೋಷ ತಂದಿದೆ, ಖಬರಸ್ಥಾನಕ್ಕೆ ನಾವು ಬರೋದಿಕ್ಕೆ ಆಗುತ್ತಿರಲಿಲ್ಲ ಆಗ ಶಾಸಕರು ಸೇತುವೆ ನಿರ್ಮಾಣ ಮಾಡಿಕೊಟ್ಟಿದ್ದರು. ಜಾಮೀಯ ಮಸೀದಿ, ನೂರಾನಿ ಮಸೀದಿ ಕಮೀಟಿಯ ಪರವಾಗಿ ಮುಸ್ಲಿಂ ಭಾಂದವರ ಪರವಾಗಿ, ಊರಿನ ಸಮಸ್ತ ಜನತೆಯ ಪರವಾಗಿ ಜನಪ್ರಿಯಾ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಪ.ಪಂ. ಅಧ್ಯಕ್ಷರಾದ ರತ್ನಮ್ಮ , ಉಪಾಧ್ಯಕ್ಷರಾದ ಕಾವ್ಯಾರಾಣಿ, ಮುಖ್ಯಾಧಿಕಾರಿ ನಾಗಭೂಷಣ್, ಸದಸ್ಯರಾದ, ಮಂಜುನಾಥ್, ಎಸ್ ಆರ್, ಎಸ್ ದಯಾನಂದ್, ರಾಜು ಬಡಗಿ, ಶೃತಿ ಸನತ್, ಹೆಚ್ . ಎನ್ .ಕಿರಣ್ ಕುಮಾರ್, ಪ್ರೀತಿ ರಾಘವೇಂದ್ರ , ದಸ್ತುಗಿರ್ ಸಾಬ್, ನಾಮಿನಿ ಸದಸ್ಯರಾದ ವೆಂಕಟೇಶ್ , ಸೈಯದ್ ನೂರ್ , ಹಾಗೂ ಮುಖಂಡರಾದ ರಾಘವೇಂದ್ರ, ರವಿ, ಕಿರಣ್ , ರೇವಣ್ಣ , ಮುಂತಾದವರಿದ್ದರು.

26

© ಹುಳಿಯಾರು ಸಮಗ್ರ ಸುದ್ಧಿ . All Rights Reserved.