ಹುಳಿಯಾರು : ಗಣಿ ಬಾಧಿತ ಪ್ರದೇಶಗಳÀಲ್ಲಿ ಗಣಿ ದಂಡದ ಹಣದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಆಗಲು ವ್ಯವಸ್ಥೆಯ ಭ್ರಷ್ಟ ಅಧಿಕಾರಿಗಳು ಕಾರಣ ಎಂದು ಕೆಆರ್‌ಎಸ್ ಪಕ್ಷದ ಅದ್ಯಕ್ಷ ರವಿಕೃಷ್ಣ ರೆಡ್ಡಿ ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಗಣಿಭಾದಿತ ಪ್ರದೇಶಗಳಿಗೆ ಕೆಆರ್‌ಎಸ್ ನ ರವಿಕೃಷ್ಣರೆಡ್ಡಿ ಮತ್ತು ತಂಡ ಬೇಟಿ ನೀಡಿ ಗುರುವಾರ ಕೆಂಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಿಬಾದಿತ ಪ್ರದೇಶ ಹಾಗೂ ಗಣಿ ದಂಡದ ಹಣದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿ ಗಣಿ ಬಾದಿತ ಗ್ರಾಮಗಳ ಸಮಸ್ಯೆಗಳನ್ನು ಗ್ರಾಮಸ್ಥರೊಂದಿಗೆ ಅವರು ಮಾತನಾಡಿದರು.
ಗಣಿ ದಂಡದ ಹಣದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿವೆ ಎಂದು ಬೇಟಿ ನೀಡಿದ ಸಮಯದಲ್ಲಿ ಗ್ರಾಮಸ್ಥರು ದೂರಿದರು. ಕಾಮಗಾರಿ ಕಳಪೆ ಆಗಲು ವ್ಯವಸ್ಥೆಯ ಭ್ರಷ್ಟ ಅಧಿಕಾರಿಗಳು ಕಾರಣವೆಂಬುದನ್ನು ರವಿಕೃಷ್ಣ ರೆಡ್ಡಿ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು. ಇಂದಿನ ರಾಜಕಾರಣ ಗ್ರಾಮಸ್ಥರನ್ನು ಪ್ರಶ್ನೆ ಮಾಡಲಾಗದ ಸ್ಥಿತಿಗೆ ತಂದೊಡ್ಡಿದೆ. ಆದರೆ ನಮ್ಮ ಕೆಆರ್‌ಎಸ್ ಪಕ್ಷದ ಸೈನಿಕರ ರೀತಿ ಅಧಿಕಾರಿಗಳನ್ನು ಪ್ರಶ್ನೆ ಮಾಡುವಂತಹ ಗುಣಗಳನ್ನು ಬೇಳೆಸಿಕೊಳ್ಳಿ ಎಂದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.