ಹಂದನಕೆರೆ ಹೋಬಳಿಯ ಬರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣೇಶ್ ಬಾಬು ರವರಿಗೆ ಸೇರಿದ ಜಮೀನಿನಲ್ಲಿ ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ನೆಟ್ಟು ಮೂರ್ನಾಲ್ಕು ವರ್ಷಗಳ ಕಾಲ ಅವುಗಳನ್ನು ಮಕ್ಕಳಂತೆ ಪೋಷಿಸಿ ಇನ್ನೇನು ಹೊಂಬಾಳೆ ಬಿಡುವ ಸಮಯ ಬಂದಿದೆ ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಅಡಿಕೆ ಪೈರು ಕೈಗೆ ಸಿಗುತ್ತದೆ ಎಂಬ ದೃಢ ನಂಬಿಕೆಯಲ್ಲಿ ಕಾಲ ಕಳೆಯುತ್ತಿದ್ದ ಈ ಅಡಿಕೆ ಗಿಡದ ಮಾಲೀಕನಿಗೆ ಇಂದು ಬೆಳಗ್ಗೆ ತನ್ನ ಜಮೀನಿನಲ್ಲಿ ಸುಮಾರು 600ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಯಾರೋ ಕಿಡಿಗೇಡಿಗಳು ಕಡಿದು ಹಾಕಿರುವುದನ್ನು ನೋಡಿ ಘರ ಬಡಿದಂತಾಗಿದೆ
150 ಗಿಡಗಳು ಅರ್ದಕ್ಕೆ ತುಂಡಾಗಿ ಬಿದ್ದಿವೆ, ಮಿಕ್ಕ ಗಿಡಗಳನ್ನು ಮಚ್ಚಿನಿಂದ ಕೊಚ್ಚಿ ಬಿಟ್ಟಿದ್ದಾರೆ ಅತ್ಯುತ್ತಮವಾಗಿ ಬೆಳೆದಿದ್ದ ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕತ್ತರಿಸಿರುವುದು ಅವರಿಗೆ ಹುಟ್ಟಿದ ಮಕ್ಕಳನ್ನು ಕತ್ತರಿಸಿದಂತೆ ಬೆಳೆದು ಇನ್ನೇನು ಪಸಲು ಬಿಡುವ ಸಮಯದಲ್ಲಿ ಕಡಿದಿರುವ ಕಿಡಿಗೇಡಿಗಳು ಇದರಲ್ಲಿ ತುಂಬಿಕೊಳ್ಳುವುದಾದರೇನು ನೇರವಾಗಿ ಬನ್ನಿ ಅದನ್ನು ಬಿಟ್ಟು ಈತರದ ಕೆಲಸ ಮಾಡಬಾರದೆಂದು ಬರಗೂರು ಗ್ರಾಮದ ವಾಸಿ ಕಿರಣ್ ಕಿಡಿ ಕಾರಿದ್ದಾರೆ ಹಂದನಕೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.