ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 70% ಫಲಿತಾಂಶ.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 70% ಫಲಿತಾಂಶ.
ಹುಳಿಯಾರು : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹುಳಿಯಾರಿನ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇಕಡಾ 70 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಕುಳಿತಿದ್ದ 63 ಬಾಲಕಿಯರಲ್ಲಿ 44 ಬಾಲಕಿಯರು ಉತ್ತೀರ್ಣರಾಗಿದ್ದು ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 07 , ಪ್ರಥಮ ದರ್ಜೆಯಲ್ಲಿ 25, ದ್ವಿತೀಯ ದರ್ಜೆಯಲ್ಲಿ 10, ತೃತೀಯ ದರ್ಜೆಯಲ್ಲಿ 02 ಬಾಲಕಿಯರು ತೇರ್ಗಡೆ ಹೊಂದಿದ್ದಾರೆ.
ಕಲಾ ವಿಭಾಗದಲ್ಲಿ : ಪ್ರೇಮ ಕೆ – 524, ನಿರ್ಮಲ ಸಿ ಎನ್ – 516, ಹರ್ಷಿತ ಕೆ ಆರ್ – 487 ,
ವಾಣಿಜ್ಯ ವಿಭಾಗದಲ್ಲಿ : ಭಾವನ ಎಸ್ – 555, ಹೇಮಲತಾಬಾಯಿ – 555, ವಿದ್ಯಾ ಎಸ್ – 538, ಇಂದಿರಾಬಾಯಿ ಎಂ.ಆರ್ – 531, ಲಕ್ಷ್ಮಿದೇವಿ ಟಿ.ಕೆ – 521 ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡೆಸಿದ್ದಾರೆ.

151

© ಹುಳಿಯಾರು ಸಮಗ್ರ ಸುದ್ಧಿ . All Rights Reserved.