ಹುಳಿಯಾರು :- ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ 12ನೇ ವರ್ಷದ ಜಾತ್ರಾ ಮಹೋತ್ಸವ ಫೆ.1 ರ ಶನಿವಾರದಿಂದ ಫೆ.9 ರ ಭಾನುವಾರದವರೆಗೆ ಹಮ್ಮಿಕೊಳ್ಳಲಾಗಿದೆ.
ಫೆ.1 ಹಾಗೂ 2 ರಂದು ಕೋಡಿಪಾಳ್ಯ,ಲಿಂಗಪ್ಪನಪಾಳ್ಯ,ಕಾಮಶೆಟ್ಟಿಪಾಳ್ಯ ,ಸೋಮಜ್ಜನಪಾಳ್ಯದಲ್ಲಿ ಮಡಿಲಕ್ಕಿ ಸೇವೆ ನಡೆಯಲಿದೆ.
ಫೆ.3 ರಂದು ಧ್ವಜಾರೋಹಣ, ಅಂಕುರಾರ್ಪಣೆ ಹಾಗೂ ಅಮ್ಮನವರ ಮಧುವಣಗಿತ್ತಿ ಸೇವೆ ನಡೆಯಲಿದೆ.
ಫೆ.4 ರಂದು ಆರತಿ ಬಾನ ಹಾಗೂ ಎಡೆ ಸೇವೆ ನಡೆಯಲಿದೆ.
ಫೆ.5 ರಂದು ಹುಳಿಯಾರು ಗ್ರಾಮದೇವತೆ ದುರ್ಗಮ್ಮ , ಹುಳಿಯಾರು ಕೆಂಚಮ್ಮದೇವಿ, ಕೆಂಕೆರೆ ಗೊಲ್ಲರಹಟ್ಟಿ ಕರಿಯಮ್ಮ ದೇವಿ,ಗೌಡಗೆರೆ ದುರ್ಗಮ್ಮ ,ಕೆ.ಸಿ.ಪಾಳ್ಯದ ಅಂತರಘಟ್ಟೆ ಅಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ಕಾರ್ಯ ನಡೆಯಲಿದೆ. ಸಂಜೆ ದೂತರಾಯನ ಕುಣಿತ ನಡೆಯಲಿದೆ.
ಫೆ.6 ರ ಗುರುವಾರದಂದು ಬೆಳಗ್ಗೆ 8.30 ಕ್ಕೆ ಕಳಸ ಮಹೋತ್ಸವ ಹಾಗೂ ಅನ್ನಸಂತರ್ಪಣೆ ,ಫೆ.7 ರ ಶುಕ್ರವಾರದಂದು ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ, ಸಂಜೆ ಧೂತರಾಯ ಸ್ವಾಮಿ ಅವರ ಅದ್ದೂರಿ ಮಣೇವು ಕಾರ್ಯಕ್ರಮ, ಫೆ.8 ರ ಶನಿವಾರ ಕಂಕಣವಿಸರ್ಜನೆ ,ಓಕಳಿ ಮತ್ತು ಫೆ.9 ರಂದು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಹುಳಿಯಾರು ಕೆರೆಬಾವಿ ಹಾಗೂ ಕೆಂಚಮ್ಮನ ಗುಂಡಿನ ಸ್ಥಳ ನೀರಿನ ಆವೃತವಾಗಿರುವುದರಿಂದ ಕಳಸದ ದಿನದಂದು ಹುಳಿಯಾರಮ್ಮನವರ ಮೂಲಸ್ಥಾನದಲ್ಲಿ ಕಳಸ ಸ್ಥಾಪಿಸಿ ನಂತರ 8:30 ರಿಂದ ಕಳಸದ ನಡೆಮುಡಿಯೊಂದಿಗೆ ಸನ್ನಿಧಾನಕ್ಕೆ ಕಳಸಗಳ ಆಗಮನವಾಗುವುದು.
🙏ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಜಾತ್ರಾಮಹೋತ್ಸವ ಯಶಸ್ವಿಗೊಳಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ🙏.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.