ಹೊಯ್ಸಳಕಟ್ಟೆಯಲ್ಲಿ ಅಂಬೇಡ್ಕರ್ ಜಯಂತಿ
ಹುಳಿಯಾರು : ಸಂವಿಧಾನದ ಮೂಲಕ ತಳಸಮುದಾಯ ಮತ್ತು ಕಾರ್ಮಿಕ ವರ್ಗಕ್ಕೆ ನ್ಯಾಯ ಮತ್ತು ಹಕ್ಕನ್ನು ದೊರಕಿಸಿಕೊಟ್ಟ ಮಹಾನ್ ನಾಯಕರು ಡಾ.ಬಿ ಆರ್ ಅಂಬೇಡ್ಕರ್ ಎಂದು ಗ್ರಾಪಂ ಸದಸ್ಯ ಎಲ್.ಯು. ರಘುವೀರ್ ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಗ್ರಾಮದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ದೂರ ಮಾಡಿ ಸಮ ಸಮಾಜ ನಿರ್ಮಿಸಲು ಹೋರಾಟ ನಡೆಸಿದವರು ಅವರು ಅಂದು ರೂಪಿಸಿರುವ ಸಂವಿಧಾನ ಇಂದು ದೇಶದ ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಇದೆ ಸಂಧರ್ಭದಲ್ಲಿ ಗ್ರಾಮದ ಕಾಲೋನಿಗೆ ಅಂಬೇಡ್ಕರ್ ನಗರ ಎಂದು ನೂತನವಾಗಿ ನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಾಧರಾಜು, ಉಪಾಧ್ಯಕ್ಷ ಕಾಂತರಾಜು, ಪಿಡಿಓ ತಿಪ್ಪೇಸ್ವಾಮಿ, ಲೆಕ್ಕ ಪರಿಶೋಧಕ ಹೇಮಂತ್ ಕುಮಾರ್, ಗ್ರಾಪಂ ಸದಸ್ಯರಾದ ಗಿರೀಶ್, ರಘುವೀರ್, ಮಲ್ಲಣ್ಣ, ಚಿಕ್ಕಣ್ಣ, ರೇಣುಕಾದೇವಿ, ಈರಣ್ಣ, ರಾಜಣ್ಣ, ಕಿರ್ತಣ, ಪವೀತ್ರ, ರಂಗಣ್ಣ, ವೀಣಾ, ಲಾವಣ್ಯ, ಜಯಮ್ಮ, ಲಚ್ಚಮ್ಮಇತರರು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.