ಹುಳಿಯಾರು : ಶ್ರೀ ಪತಂಜಲಿ ಯೋಗ ಶಿಕ್ಷಣ ಹುಳಿಯಾರು- ಕೆಂಕೆರೆ ಶಾಖೆ ಹಾಗೂ ಶ್ರೀಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ಮತ್ತು ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಏ.24 ಗುರುವಾರದಿಂದ ಏ.27 ರ ಭಾನುವಾರದವರೆಗೆ ಮಕ್ಕಳ ಪ್ರಾಥಮಿಕ ವಸಂತ ಯೋಗ ಪ್ರಶಿಕ್ಷಣ ಶಿಬಿರ ಏರ್ಪಡಿಸಲಾಗಿದೆ.
ಏ.24 ರ ಗುರುವಾರ ಬೆಳಗ್ಗೆ ಅಗ್ನಿಹೂತ್ರದೊಂದಿಗೆ ಸಾಮೂಹಿಕ ಅಭ್ಯಾಸ ಪ್ರಾರಂಭಿಸಿ ಎಂಟು ಗಂಟೆಗೆ ಹೇಮಾವತಿ ವಲಯದ ಹಾಸನ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 120ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ನೊಂದಣಿ ಮಾಡಿಕೊಂಡರು ಹಾಗೂ ಶಿಕ್ಷಕರಾಗಿ 15 ಜನ ಆಗಮಿಸಿದ್ದರು. ಸೇವೆಯನ್ನು ಅರ್ಪಿಸಲು ಪ್ರಬಂಧಕರಾಗಿ ಸುಮಾರು 25ಕ್ಕೂ ಹೆಚ್ಚು ಜನ ಸ್ವಯಂಸೇವಕರಾಗಿ ಕರ್ತವ್ಯಕೆ ಹಾಜರಿದ್ದರು.
ಮೊದಲಿಗೆ ಆಗಮಿಸಿದ ಮಕ್ಕಳಿಗೆ ಗಣ ಶಹ ವಿಂಗಡಣೆ ಮಾಡಿ ಪರಿಚಯ ಪರಿಮಳ ಮಾಡಿಕೊಂಡು 12.30 ಗಂಟೆಗೆ ಅಗ್ನಿಹೋತ್ರ ಮಾಡಿಸಲಾಯಿತು ಆನಂತರ ವಿವಿಧ ಚಟುವಟಿಕೆಗಳನ್ನು ಮಾಡಿಸಲಾಯಿತು. ಮಧ್ಯಾಹ್ನ 2:30 ಕ್ಕೆ ಭೋಜನ. ನಂತರ ವಿವಿಧ ಕಾರ್ಯಕ್ರಮಗಳು ಮುಂದುವರೆಯಿತು. ಸಂಜೆ 6 ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂದನಕೆರೆ ಶ್ರೀಗುರುಗಿರಿಸಿದ್ದೇಶ ಸ್ವಾಮಿ ಮಠದ ರುದ್ರಾರಾಧ್ಯರು ದಿವ್ಯಸಾನಿಧ್ಯ ವಹಿಸಿದ್ದರು. ಯೋಗ ಶಿಕ್ಷಕ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಎಸ್ಪಿವೈಎಸ್ಎಸ್ನ ಜಿಲ್ಲಾ ಸಂಚಾಲಕ ಸಿ.ಎನ್.ಗಿರೀಶ್ ಪ್ರಾಸ್ತಾವಿಕ ನುಡಿ ನುಡಿದರು. ಶ್ರೀಮಾತಾ ಟ್ರಸ್ಟ್ನ ಅಧ್ಯಕ್ಷರಾದ ಗಂಗಾಧರ್ ಉದ್ಘಾಟಿಸಿದರು, ಮುಖ್ಯಅತಿಥಿಗಳಾಗಿ ಎಸ್ಪಿವೈಎಸ್ಎಸ್ನ ಕೇಂದ್ರ ಸಮಿತಿ ಉಪಾಧ್ಯಕ್ಷ ಚನ್ನಬಸಪ್ಪ, ವಾಸವಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಲ್.ಆರ್.ಬಾಲಾಜಿ ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.