ಉಚಿತ ಆರೋಗ್ಯ ತಪಾಸಣಾ ಶಿಬಿರ

ಹುಳಿಯಾರು :- ಪಟ್ಟಣದ ಇಂದಿರಾನಗರದಲ್ಲಿ ಸಮಗ್ರ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಸಾರ್ವಜನಿಕ ಆಸ್ಪತ್ರೆ ಚಿಕ್ಕನಾಯಕನಹಳ್ಳಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಪಟ್ಟಣ ಪಂಚಾಯಿತಿ ಹುಳಿಯಾರುಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಬುಧವಾರ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಸುಮಾರು 180 ಫಲಾನುಭವಿಗಳು ತಪಾಸಣೆ ಮತ್ತು ಪರೀಕ್ಷೆಗೆ ಒಳಪಟ್ಟರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೆಪಟೈಟಿಸ್ ಬಿ ಮತ್ತು ಸಿ. ಕ್ಷಯರೋಗ. ಕುಷ್ಟರೋಗ. ಅಸಂಕ್ರಾಮಿಕ ರೋಗಗಳಾದ ರಕ್ತದ ಒತ್ತಡ. ಮಧುಮೇಹ. ಕ್ಯಾನ್ಸರ್. ಎಚ್ಐವಿ ತಪಾಸಣೆ ಪರೀಕ್ಷೆ ನಡೆಸಲಾಯಿತು. ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಬಿ ಬಿ ಫಾತಿಮಾ ಹಾಗೂ ಆಯುಷ್ ವೈದ್ಯಾಧಿಕಾರಿಗಳಾದ ಡಾ|| ಚಂದನ ಇದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿವಿ ವೆಂಕಟರಾಮಯ್ಯ ಸ್ವಾಗತ ಮತ್ತು ನಿರೂಪಣೆ ಮಾಡಿದರು. ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿದರು. ಕಾರ್ಯಕ್ರಮದ ಮೂಲ ಉದ್ದೇಶ ರೋಗಗಳ ಪತ್ತೆಗೆ ಪರೀಕ್ಷೆ ಅತ್ಯವಶ್ಯಕ. ಪ್ರಾರಂಭಿಕ ಹಂತದಲ್ಲೇ ಎಲ್ಲ ರೋಗಗಳ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ಒಳಪಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ನವೀನ್. ಜಿಲ್ಲಾ ಮಟ್ಟದ ಕ್ಷಯರೋಗ ನಿರ್ಮೂಲನ ಅಧಿಕಾರಿಯಾಗಿದ ಮೇಲ್ವಿಚಾರಕರಾದ ಅಬ್ಸರ್ ಪಾಷಾ. ತಾಲೂಕು ಮಟ್ಟದ ಎಸ್ ಟಿ ಎಸ್ ಉಮಾಶಂಕರ್. ಅನ್ನಿಸ್ ಅಹಮದ್. ಎನ್ ಸಿ ಡಿ ವಿಭಾಗದ ಆಪ್ತ ಸಮಾಲೋಚಕರಾದ ಬಾಲಕೃಷ್ಣ. ಸ್ವಾತಿ, ಸೌಮ್ಯ ಆರ್ ಕೆ ಎಸ್ ಕೆ ಸಮಾಲೋಚಕರಾದ ಉಷಾ, ಪ್ರಯೋಗ ಶಾಲಾ ತಂತ್ರಜ್ಞಾನದ ವಿಜಯ, ತಿಪ್ಪೇಸ್ವಾಮಿ. ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು. ಆರೋಗ್ಯ ನಿರೀಕ್ಷಣಾಧಿಕಾರಿಗಳು. ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹುಳಿಯಾರು ನಮ್ಮ ಕ್ಲಿನಿಕ್ ನ ಆರೋಗ್ಯ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು

72

© ಹುಳಿಯಾರು ಸಮಗ್ರ ಸುದ್ಧಿ . All Rights Reserved.