ಹುಳಿಯಾರು- ಕೆಂಕೆರೆ ಕೆ.ಪಿ.ಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಯಶವಂತ್ ಮೇಲೆ ಏಳು ಜನ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಶಾಲೆಯಲ್ಲಿ ಶಾರದಾ ಪೂಜೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಯಶ್ವಂತ್ ಎಂಬ ಹತ್ತನೇ ತರಗತಿ ವಿದ್ಯಾರ್ಥಿಯುಮೂತ್ರ ವಿಸರ್ಜನೆಗೆಂದು ಶೌಚಾಲಯದ ಕಡೇ ಹೋದಾಗ ಶಾಲೆಗೆ ಸಂಬಂಧವಿಲ್ಲದ ಏಳು ಯುವಕರು ಬಾಲಕಿಯರ ಶೌಚಾಲಯಕ್ಕೆ ಕಲ್ಲು ತೂರುತ್ತಿರುವುದನ್ನು ಕಂಡು ಯಾಕೆ ಕಲ್ಲು ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ ವಿದ್ಯಾರ್ಥಿಗೆ ಏಳು ಜನ ಪುಂಡರ ಗುಂಪು ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ.
ಅಕ್ರಮವಾಗಿ ಶಾಲಾ ಆವರಣ ಪ್ರವೇಶಿಸಿದ್ದಲ್ಲದೆ ವಿಷಯವನ್ನು ಅಲ್ಲಿಗೆ ಬಿಡದೆ ಶಾಲೆಯ ಅಡಿಗೆ ಕೊಠಡಿ ಹತ್ತಿರ ಇದ್ದಂತ ವಿದ್ಯಾರ್ಥಿ ಯಶವಂತನ ಮೇಲೆ ಹಲ್ಲೆಗೆ ಮುಂದಾಗುತ್ತಾರೆ ಅಲ್ಲೇ ಇದ್ದ ಅಡಿಗೆ ಕೆಲಸದವರು ಯುವಕರಿಗೆ ಬೈದು ಕಳಿಸಿದ್ದಾರೆ ವಿದ್ಯಾರ್ಥಿಯು ಊಟ ಮುಗಿಸಿ ತನ್ನ ಸ್ನೇಹಿತನ ಜೊತೆಗೆ ತರಗತಿಯ ಕೊಠಡಿ ಬಳಿ ಮಾತನಾಡುತ್ತಾ ನಿಂತಿದ್ದಾಗ ಮತ್ತೆ ಏಳು ಯುವಕರ ಗುಂಪು ಅಲ್ಲಿಗೆ ಬಂದು ವಿದ್ಯಾರ್ಥಿಯ ಕಾಲರ್ ಹಿಡಿದು ಕೈಗಳಿಂದ ಹೊಡೆದಿದ್ದಲ್ಲದೆ ದೊಣ್ಣೆಯಿಂದ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದಿದ್ದಾರೆ ಹಾಗೂ ಚಾಕು ತೋರಿಸಿ ನಿನ್ನನ್ನು ಇವತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಶಿಕ್ಷಕರು ಬಂದದ್ದನ್ನು ನೋಡಿ ಹೋಡಿ ಹೋಗುತ್ತಿದ್ದಾಗ ಒಬ್ಬ ಮಾತ್ರ ಸಿಕ್ಕಿಬಿದ್ದು ಮಿಕ್ಕವರ ಹೆಸರು ಹೇಳಿದ್ದಾನೆ.
ವಿದ್ಯಾರ್ಥಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹುಳಿಯಾರು ಠಾಣೆಗೆ ಕರೆಸಿ ಹೇಳಿಕೆ ಪಡೆಯಲಾಯಿತು
ಆರೋಪಿಗಳು ಹುಳಿಯಾರಿನವರಾಗಿದ್ದು ಶಂಶುದ್ದೀನ್ , ಇರ್ಫಾನ್ , ಮೆಹಬೂಬ್ ಷರೀಫ್, ಮುಬಾರಕ್ , ಮುದಾಸಿರ್ , ಯಾಸೀನ್ , ತಾಝೀಮ್ ಎಂದು ತಿಳಿದುಬಂದಿದ್ದು 7 ಯುವಕರನ್ನು ಹುಳಿಯಾರು ಪೋಲೀಸರು ಬಂದಿಸಿದ್ದು ಪ್ರಕರಣ ದಾಖಲಿಸಿದ್ದಾರೆ. ಠಾಣೆಗೆ ಡಿ.ವೈ.ಎಸ್.ಪಿ ವಿನಾಯಕ್ ಶೆಟಿಗೇರಿ, ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕರಾದ ನಾಡಾಫ್, ಪಿ.ಎಸ್.ಐ ಯತೀಶ್ ಬೇಟಿ ನೀಡಿದ್ದರು
ಶಾಲೆಗೆ ಭದ್ರತೆಯಿಲ್ಲ – ಶಾಲೆಗೆ ಎರಡು ಗೇಟ್ ಗಳಿದ್ದು ಯಾರು ಯಾವಾಗಬೇಕಾದರು ಒಳ ಹೋಗಬಹುದು ಮತ್ತು ಯಾರು ಕೇಳುವುದಿಲ್ಲ, ಕೆಲವು ಕಡೆ ಕಾಂಪೌಂಡ್ ಶಿಥಿಲಗೊಂಡು ಬಿದ್ದುಹೋಗಿದ್ದು ಯಾರು ಬೇಕಾದರೂ ಅಕ್ರಮವಾಗಿ ಒಳ ಬರಬಹುದಾಗಿದೆ. ಶಿಕ್ಷಣ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಭದ್ರತೆ ಒದಗಿಸಬೇಕಿದೆ.
ವಿದ್ಯಾರ್ಥಿಯ ತಾಯಿ ಶಶಿರೇಖಾ : ನನ್ನ ಮಗ ಶೌಚಾಲಯಕ್ಕೆಂದು ಹೋದಾಗ ಅವರು ಕಲ್ಲು ಹೋಡೆಯುತ್ತಿದ್ದನ್ನು ನೋಡಿ ಕೇಳಿದ್ದಾನೆ ಎಲ್ಲಾ ಆರೋಪಿಗಳು ನನ್ನ ಮಗನಿಗೆ ಹೋಡೆದಿದ್ದಾರೆ ಶಾಲಾ ತರಗತಿಯೊಳಗೆ ಬಂದರು ಬಿಟ್ಟಿಲ್ಲ ಮತ್ತೆ ಬಂದು ಹೊಡೆದಿದ್ದಾರೆ ಕುತ್ತಿಗೆ ಹತ್ತಿರ ಮೂಳೆಗೆ ಏಟು ಬಿದ್ದಿದೆ ಬೆನ್ನಿಗೆ ಏಟು ಬಿದ್ದಿದೆ . ತುಂಬಾ ಏಟಾಗಿದೆ ದೊಣ್ಣೆಯಲ್ಲಿ ಹೊಡೆದಿದ್ದಾರೆ ಆಚೆ ಬಂದರೆ ಬಿಡೊಲ್ಲ ನಿನ್ನ ಚುಚ್ಚಿಬಿಡುತ್ತೇವೆ ಎಂದು ಎದುರಿಸಿದ್ದಾರೆ. ಅರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.