ಜನ ಕಛೇರಿಗಳಿಗೆೆ ಅಲೆದಾಡಬಾರದು ಎಂದು ನಾನೇ ಮನೆ ಬಾಗಿಲಿಗೆ ಅಧಿಕಾರಿಗಳ ಜೊತೆ ಬಂದಿದ್ದೇನೆ - ಶಾಸಕ ಸಿ ಬಿ ಸುರೇಶ್ ಬಾಬು

ಹುಳಿಯಾರು : ಜನ ಸರ್ಕಾರಿ ಕಛೇರಿಗಳಿಗೆ ಅಲೆದಾಡಬಾರದೆಂದು ಎಂದು ನಾನೇ ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕರೆತಂದಿದ್ದೇನೆ ಸಾರ್ವಜನಿಕರು ಈ ಕಾರ‍್ಯಕ್ರಮದ ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ ಬಿ ಸುರೇಶ್ ಬಾಬು ತಿಳಿಸಿದರು.
ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯಿತಿಗೆ ಸೇರುವ ಕೆರೆಸೂರಗೊಂಡನಹಳ್ಳಿ, ತಮ್ಮಡಿಹಳ್ಳಿ, ತಮ್ಮಡಿಹಳ್ಳಿ ಗೊಲ್ಲರಹಟ್ಟಿ, ಸಿಂಗಾಪುರ, ಯಳನಡು ಗ್ರಾಮದಲ್ಲಿ ‘ಮನೆ ಬಾಗಿಲಿಗೆ ಮನೆ ಮಗ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ವಯಸ್ಕರರ ವೇತನಕ್ಕೆ ಈ ವಾರ ಅರ್ಜಿ ಕೊಟ್ಟರೆ ಮುಂದಿನ ವಾರವೇ ಮಂಜೂರಾತಿಯಾಗುತ್ತಿದೆ, ನಮ್ಮ ಬಳಿ ಕೆಲವು ಅನುಕೂಲಸ್ಥರು ಮಾತ್ರ ಬರುತ್ತಿದ್ದರು ಅಧಿಕಾರಿಗಳ ಜೊತೆ ಚರ್ಚಿಸಿ ನಾವೇ ಮನೆ ಬಾಗಿಲಿಗೆ ಹೋದರೆ ಹೇಗಿರುತ್ತದೆ ಎಂದು ವಾರಕ್ಕೆ ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ, ಲಂಚ ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಬಳಿ 1 ಕೋಟಿ ವೆಚ್ಚದ ಚೆಕ್ ಡ್ಯಾಂ ಹಾಗೂ ಬಿಳಿಕಲ್ ಗೊಲ್ಲರಹಟ್ಟಿ ಬಳಿ 40 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಶಾಸಕ ಸಿಬಿ ಸುರೇಶ್ ಬಾಬು ಗುದ್ದಲಿ ಪೂಜೆ ನೆರವೇರಿಸಿದರು.

ತಹಸೀಲ್ದಾರ್ ಕೆ ಪುರಂದರ್ ಮಾತನಾಡಿ ಏಳನೇ ವಾರದ ಕಾರ‍್ಯಕ್ರಮ ನಾವು ಮಾಡುತ್ತಿದ್ದೇವೆ ಈ ಕಾರ‍್ಯಕ್ರಮದ ಯಶಸ್ಸಿನ ಬಗ್ಗೆ ವಿಜಯಪುರದ ತಹಸೀಲ್ದಾರ್ ನನಗೆ ವಿಡಿಯೋ ಕಳುಹಿಸಿ ಹೇಳಿದರು ಕಾರ‍್ಯಕ್ರಮ ಚನ್ನಾಗಿದೆ ಎಂದು, ನಮ್ಮ ಉದ್ದೇಶ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನಾವು ನಿಮ್ಮ ಊರಿಗೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ ಎಲ್ಲರೂ ಈ ಕಾರ‍್ಯಕ್ರಮವನ್ನು ಸದುಪಯೊಗ ಪಡಿಸಿಕೊಂಡು ವೃದ್ದಾಪ್ಯ ವೇತನ, ವಿಕಲ ಚೇತನರ ವೇತನ, ವಿಧವಾ ವೇತನ ಯಾವುದೇ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳನ್ನು ನೀವು ಶಾಸಕರ ಬಳಿ ನೀಡಬಹುದು ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್‌ಕುಮಾರ್ ಮಾತನಾಡಿ ಎರಡು ಎಕರೆ ಮೇಲ್ಪಟ್ಟವರಿಗೆ ಮಾತ್ರ ಸ್ಪಿಕ್ಲರ್ ಸಿಗುತ್ತಿತ್ತು ಆದರೆ ಒಂದು ವರ್ಷದಿಂದ ಒಂದು ಎಕರೆ ಇದ್ದರೆ ಸಾಕು ಸ್ಪಿಕ್ಲರ್ ಕೊಡುತ್ತಿದ್ದೇವು ಇದುವರೆಗೂ 7200 ರೈತರಿಗೆ ನೀಡಿದ್ದೇವೆ, ಈಗ 39 ಗುಂಟೆ ಇದ್ದರೆ ಸಾಕು ಸ್ಪಿಕ್ಲರ್ ಗಳನ್ನು ನೀಡುತ್ತಿದ್ದೇವೆ. ಇದನ್ನು ಶಾಸಕರು ಸಚಿವರ ಹತ್ತಿರ ಮಾತನಾಡಿ ತಮಗೆಲ್ಲಾ ಈ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಬಿತ್ತನೆ ಬೀಜವನ್ನು ಸಹ ಎಷ್ಟು ಅವಶ್ಯಕತೆ ಇದೆ ಪ್ರತಿ ಎಕರೆಗೆ 5 ಕೆಜಿ ಬಿತ್ತನೆ ಬೀಜ ನೀಡಲಾಗುತ್ತಿದೆ ಹಾಗೂ ಸಾಕಷ್ಟು ರಸಗೊಬ್ಬರವನ್ನು ಸಹ ನಮ್ಮ ತಾಲೂಕಿಗೆ ತರಿಸಿದ್ದಾರೆ ನಮ್ಮ ತಾಲೂಕಿಗೆ ರಾಗಿ ಕೊಯ್ಲು ಯಂತ್ರ ಬಂದಿದೆ. ಈ ಭಾಗದಲ್ಲಿ ಸಿರಿ ಧಾನ್ಯಗಳನ್ನು ಬೆಳೆಯುವ ರೈತರಿದ್ದೀರಿ ಅಂತಹ ರೈತರಿಗೆ ಪ್ರೋತ್ಸಾಹಕವಾಗಿ ಒಂದು ಹೆಕ್ಟೇರ್ ಗೆ 10 ಸಾವಿರ ರೂಗಳನ್ನು ನೀಡಲಾಗುತ್ತಿದೆ ಎಂದರು.

ಎಲ್ಲಾ ಗ್ರಾಮಗಳಲ್ಲಿಯೂ ಸಾರ್ವಜನಿಕರು ಚರಂಡಿ, ಕುಡಿಯುವ ನೀರಿನ ಸಮಸ್ಯೆ ವಿದ್ಯುತ್ ಟಿ.ಸಿ, ಸಮುದಾಯ ಭವನ ಹಾಗೂ ಸಿಂಗಾಪುರದಲ್ಲಿ ಪಡಿತರ ಚೀಟಿ ವಜಾ ಮಾಡಿರುವುದರ ಬಗ್ಗೆ, ಕುರಿ ಶೆಡ್, ಗ್ರಂಥಾಲಯವನ್ನು ಅಭಿವೃದ್ದಿ ಪಡಿಸುವ ಬಗ್ಗೆ, ಹಾಲು ಉತ್ಪಾದಕರ ಸಂಘÀಕ್ಕೆ ಹೊಸ ಕಟ್ಟಡಕ್ಕೆ ಹಾಗೂ ಬಸ್ಸು ಸಂಚಾರದ ಬಗ್ಗೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಯಳನಡು ಪಂಚಾಯಿತಿ ಪಿ.ಡಿ.ಓ ಹರ್ಷ, ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷ ರವೀಶ್, ಇ ಓ ದೊಡ್ಡಸಿದ್ದಯ್ಯ, ಬಿಇಓ ಕಾಂತರಾಜು, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೆಶಕ ರಾಜಪ್ಪ, ಪಶುಸಂಗೋಪನಾ ಇಲಾಖೆಯ ರೆ.ಮ.ನಾಗಭೂಷಣ್ , ಬೆಸ್ಕಾಂನ ರಘು ರಾಮ್, ಇನ್ನು ಮುಂತಾದವರು ಹಾಜರಿದ್ದರು.

246

© ಹುಳಿಯಾರು ಸಮಗ್ರ ಸುದ್ಧಿ . All Rights Reserved.