ಹೆತ್ತವರನ್ನು ಅನಾಥಾಶ್ರಮಕ್ಕೆ ಬಿಡುತ್ತಿದ್ದಾರೆ : ಕುಪ್ಪೂರು ಗದ್ದಿಗೆ ಮಠದ ವಾಗೀಶ್‌ ಪಂಡಿತಾರಾಧ್ಯ ಬೇಸರ

ಹುಳಿಯಾರು : ಜನ್ಮ ನೀಡಿದ ತಂದೆ ತಾಯಿಯರನ್ನು ಮಕ್ಕಳು ಅನಾಥಾಶ್ರಮಕ್ಕೆ ಬಿಡುತ್ತಿದ್ದಾರೆ ಇದು ಮನಸ್ಸಿಗೆ ನೋವನುಂಟು ಮಾಡುತ್ತಿದೆ ಎಂದು ಕುಪ್ಪೂರು ಗದ್ದಿಗೆ ಮಠದ ವಾಗೀಶ್ ಪಂಡಿತಾರಾದ್ಯರು ಬೇಸರ ವ್ಯೆಕ್ತಪಡಿಸಿದರು. ಹೋಬಳಿಯ ಚಿಕ್ಕಬಿದರೆ ಗ್ರಾಮದಲ್ಲಿ ಏಳು ಹಳ್ಳಿ ಗ್ರಾಮಸ್ಥರಿಂದ ಕೆರೆಯ ಗಂಗಾಪೂಜೆ ಹಾಗು ಶ.ಸಾ.ಪದಿಂದ ಹಳ್ಳಿಗೊಂದು ವಚನ ದೀಪ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ಮನುಷ್ಯ ಧರ್ಮಾಂಧಕಾರನಾಗಿದ್ದಾನೆ. ಗುರು ಹಿರಿಯರು ಎಂಬ ಭಾವನೆಯನ್ನ ಮಕ್ಕಳು ಬೆಳೆಸಿಕೊಳ್ಳಬೇಕು. ತಂದೆ ತಾಯಿ ಮಕ್ಕಳಿಗೆ ಜನ್ಮಕೊಟ್ಟ ದೇವರುಗಳು. ಅವರು ಮಕ್ಕಳ ಉಜ್ವಲಕ್ಕೆ ತಮ್ಮ ಜೀವನದಲ್ಲಿ ಅನೇಕ ತ್ಯಾಗವನ್ನ ಮಾಡಿರುತ್ತಾರೆ. ತಂದೆ ತಾಯಿಗೆ ವಯಸ್ಸಾದಾಗ ಮಕ್ಕಳು ಕೊನೆಗಾಲದಲ್ಲಿ ನೋಡಿಕೊಳ್ಳದೆ ತಮ್ಮ ಋಣ ತೀರಿಸದೆ ವೃದ್ಧಾಶ್ರಮ ಅಥವಾ ಅನಾಥಾಶ್ರಮಕ್ಕೆ ಬಿಟ್ಟು ಬರುತ್ತಾರೆ ಇಂತಹ ಘೋರ ನಿಜಕ್ಕೂ ನೊವನ್ನುಂಟು ಮಾಡುತ್ತಿದೆ. ಪ್ರತಿಯೋಬ್ಬರು ತಮ್ಮ ಮಾತಾ ಪಿತೃಗಳನ್ನ ಪೂಜಿಸಿ ಗೌರವಿಸಿ ಕೊನೆಗಾಲದಲ್ಲಿ ಪ್ರಿತಿಯಿಂದ ನೊಡಿಕೊಳ್ಳಬೇಕು ಎಂದು ಹೇಳಿದರು.

ಶ್ರೀಮಾರುತಿ ಪ್ರೌಢಶಾಲೆಯ ಕಾರ್ಯದರ್ಶಿ ಪ್ರದೀಪ್ ಮಾತನಾಡಿ ವಚನ ಸಾಹಿತ್ಯ ನಶಿಸಬಾರದು. ಮನುಷ್ಯನ ಬದುಕಿನ ಮೌಲ್ಯ ಏನೆಂಬುದನ್ನ ಅರಿವು ಮೂಡಿಸುವುದೇ ವಚನ ಸಾಹಿತ್ಯದಲ್ಲಿ ತಿರುಳಾಗಿದೆ. ಶರಣರು ತತ್ವ ಆದರ್ಶಗಳನ್ನ ತಮ್ಮ ನೆಡೆ ನುಡಿಯಲ್ಲಿ ಅನುಸರಿಸಿದ್ದರು .ಅಂತಹ ಶರಣರು ರಚಿಸಿದ ವಚನಗಳ ಸಾರವನ್ನ ಶರಣ ಸಾಹಿತ್ಯ ಪರಿಷತ್ತು ಪ್ರತಿಯೊಂದು ಹಳ್ಳಿಗಳಲ್ಲಿ ಸಾರವನ್ನ ಬೀರುತ್ತಿದೆ ಎಂದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜು ಹೊನ್ನೇಬಾಗಿˌಪ್ರಧಾನ ಕಾರ್ಯದರ್ಶಿ ಡಾ.ಸಿ.ರವಿಕುಮಾರ್ ˌಖಜಾಂಚಿ ಸಿ.ಮಲ್ಲಿಕಾರ್ಜುನಸ್ವಾಮಿˌಸಾಯಿಗಂಗಾ ಆಸ್ಪತ್ರೆ ಮುಖ್ಯಸ್ಥೆ ರಾಧ ವಿಜಯರಾಘವೇಂದ್ರ ಯಳನಡು ಶಿಕ್ಷಕಿ ಕವಿತಾ ಮಾತನಾಡಿದರು.ಉಪನ್ಯಾಸಕ ರಾಜಕುಮಾರ್ˌನಿವೃತ್ತ ಶಿಕ್ಷಕರಾದ ಬಿ.ನಾಗರಾಜುˌಶಾಂತಪ್ಪ ಮುಂತಾದವರಿದ್ದರು

96

© ಹುಳಿಯಾರು ಸಮಗ್ರ ಸುದ್ಧಿ . All Rights Reserved.