ಪಾರ್ಕ್ ನಲ್ಲಿ ಮಳಿಗೆ ಕಟ್ಟಡ ಕಟ್ಟದಂತೆ ಮನವಿ.

ಪಟ್ಟಣದ ವಾರ್ಡ್ ನಂ. 15 ರಾಮಹಾಲ್ ಮುಂದಿರುವ ಉದ್ಯಾನವನದಲ್ಲಿ ಮಳಿಗೆ ಕಟ್ಟದಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ನಾಗಭೂಷಣ್ ಗೆ ಮನವಿ ಸಲ್ಲಿಸಿದ ಬಜರಂಗದಳ ಕಾರ್ಯಕರ್ತರು.
ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಶ್ರೀರಾಮಹಾಲ್ ಮುಂಭಾಗದಲ್ಲಿರುವ ಶಿಶುವಿಹಾರ ಮತ್ತು ರೋಟರಿ ಸಂಸ್ಥೆಯ ಮುಂಭಾಗದ ಸ್ಥಳದಲ್ಲಿ ಉದ್ಯಾನವನವನ್ನು ನಿರ್ಮಾಣ ಮಾಡುವ ಬದಲು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವುದಾಗಿ ತೀರ್ಮಾನ ಕೈಗೊಂಡಿರುವುದು ವಿಷಾಧನಿಯ ನಿರ್ಧಾರವಾಗಿರುತ್ತದೆ. ಸುತ್ತಮುತ್ತಲ ಸ್ಥಳೀಕರ ದೇಣಿಗೆಯಿಂದ ಪಟ್ಟಣದ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಬಜರಂಗದಳದ ಕಾರ್ಯಕರ್ತರ ಸಹಯೋಗದೊಂದಿಗೆ ಆ ಜಾಗದಲ್ಲಿ ಉದ್ಯಾನವನವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದ್ದು ಸಾವಿರಾರು ಜನ ಸಂಖ್ಯೆ ಹೊಂದಿರುವ ಹುಳಿಯಾರು ಪಟ್ಟಣದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲಿಯೂ ಯಾವುದೇ ಉದ್ಯಾನವನವು ಇರುವುದಿಲ್ಲ. ಹಾಗೂ ಬೆರೆಲ್ಲೂ ಸಹ ಪಟ್ಟಣ ಪಂಚಾಯ್ತಿ ವತಿಯಿಂದ ಉದ್ಯಾನವನ ನಿರ್ಮಾಣ ಮಾಡಲು ಸಹ ಮುಂದಾಗಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಪಟ್ಟಣದಲ್ಲಿ ಇರುವಂತಹ ಚಿಕ್ಕದಾದ ಒಂದು ಉದ್ಯಾನವನ್ನೂ ಸಹ ಉಳಿಸಿಕೊಳ್ಳದೇ ಕೇವಲ ಪಂಚಾಯ್ತಿಗೆ ಆದಾಯ ಬರುವುದನ್ನು ಮಾತ್ರ ಗಮನಕ್ಕೆ ತೆಗೆದುಕೊಂಡು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಮುಂದಾಗಿದ್ದು ಸಾಮಾನ್ಯ ಜನರ ಆರೋಗ್ಯ ಹಾಗೂ ಪಟ್ಟಣದಲ್ಲಿ ಸುಂದರ ವಾತಾವರಣ ಹಾಗೂ ಶುದ್ಧ ಗಾಳಿ ಇರುವಂತಹ ಪರಿಸರವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಮರೆತು ಅದರ ಬದಲಾಗಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲವೆಂದೆನಿಸುತ್ತಿದೆ. ಇದಾದ ಮೇಲೂ ತಾವುಗಳು ಆ ಸ್ಥಳದಲ್ಲಿ ಮಳಿಗೆಗಳನ್ನು ನಿರ್ಮಿಸಲು ಮುಂದಾದಲ್ಲಿ ಮುಂದಿನ ಹೋರಾಟಕ್ಕೆ ನೀವೇ ದಾರಿ ತೋರಿದಂತಾಗುತ್ತದೆ. ಆದ್ದರಿಂದ ಪ.ಪಂ. ನವರು ದಯಮಾಡಿ ಈ ತೀರ್ಮಾನವನ್ನು ಇಲ್ಲಿಗೆ ಕೈಬಿಡಬೇಕಾಗಿ ಹಾಗೂ ಪಟ್ಟಣದಲ್ಲಿ ಪ್ರಮುಖವಾಗಿ ಉದ್ಭವಿಸುತ್ತಿರುವ ಸಮಸ್ಯೆಯಾದ ಕಸ ವಿಲೇವಾರಿ ಘಟಕ ನಿರ್ಮಾಣದ ವಿಚಾರವನ್ನು ಕೈಗೆತ್ತಿಕೊಂಡು ಅದರ ನಿರ್ಮಾಣದ ಬಗ್ಗೆ ಗಮನ ಹರಿಸಿ ಪಟ್ಟಣದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಂಡು ಗ್ರಾಮದಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಿಕೊಡಬೇಕಾಗಿ ಮನವಿ ಮಾಡಿದರು ಈ ಸಂಧರ್ಭದಲ್ಲಿ ಕಾರ್ಯಕರ್ತರಾದ ಬಸವರಾಜು ಪ್ಲಂಬರ್, ಹರೀಶ್, ವಿಶ್ವನಾಥ್ , ಸುರೇಶ್, ಶಶಿಕಿರಣ್ [ಕರಡಿ], ನೇಸರ, ಗಜೇಂದ್ರ, ಹರೀಶ್, ರಾಕೇಶ್, ಇನ್ನು ಮುಂತಾದವರಿದ್ದರು.

157

© ಹುಳಿಯಾರು ಸಮಗ್ರ ಸುದ್ಧಿ . All Rights Reserved.