KPS ಶಾಲಾ ವಿದ್ಯಾರ್ಥಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಎಬಿವಿಪಿ ಮನವಿ

ಕೆ.ಪಿ.ಎಸ್ ಶಾಲಾ ವಿದ್ಯಾರ್ಥಿ ಮೇಲೆ ಹಲ್ಲೆ ಘಟನೆ ಖಂಡಿಸಿ ಎಬಿವಿಪಿ ಮನವಿ
ಫೆ. 14ರ ಶುಕ್ರವಾರದಂದು ಹುಳಿಯಾರು – ಕೆಂಕೆರೆಯ ಕೆ.ಪಿ.ಎಸ್ ಶಾಲೆಯ10ನೇ ತರಗತಿ ವಿದ್ಯಾರ್ಥಿ ಯಶ್ವಂತ್ ನನ್ನು 7 ಜನ ಯುವಕರ ಗುಂಪು ಶಾಲಾ ಆವರಣದಲ್ಲಿ ಥಳಿಸಿತ್ತು ಈ ಘಟನೆ ಖಂಡಿಸಿ ಬುಧವಾರ ಉಪತಹಶೀಲ್ದಾರರ ಮುಖೇನ ಗೃಹಸಚಿವರಿಗೆ ಎಬಿವಿಪಿ ವಿದ್ಯಾರ್ಥಿಘಟಕದಿಂದ ಮನವಿ ಪತ್ರ ಸಲ್ಲಿಸಿದರು.

ಕೆ.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ ಘಟನೆ ವಿದ್ಯಾರ್ಥಿ ಸಮುದಾಯವನ್ನೆ ಬೆಚ್ಚಿ ಬೀಳಿಸುವಂತಿದೆ ಶಾಲಾ ಆವರಣದೊಳಗೆ ಪ್ರವೇಶಿಸಿದ್ದಲ್ಲದೆ ವಿದ್ಯಾರ್ಥಿಯನ್ನು ಥಳಿಸಿ, ಚಾಕು ತೋರಿಸಿರುವುದು ವಿದ್ಯಾರ್ಥಿಗಳನ್ನು ಭಯಬೀತಗೊಳಿಸಿದೆ, ಹುಳಿಯಾರು ಶಾಂತಿಯುತ ನಗರವಾಗಿದ್ದು ಈಂತಹ ಘಟನೆ ನಾಗರೀಕರನ್ನು ತಲೆ ತಗ್ಗಿಸುವಂತೆ ಮಾಡಿದೆ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ಮತ್ತು ದೈರ್ಯ ತುಂಬುವ ನಿಟ್ಟಿನಲ್ಲಿ ಕೆ.ಪಿ.ಎಸ್ ಶಾಲೆ ಸರ್ಕಾರಿ ಶಾಲೆಯಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದು ಸಿಸಿ ಟಿವಿ ಅಳವಡಿಸಬೇಕು ಹಾಗೂ ಪೋಲೀಸರು ಗಸ್ತು ಹೆಚ್ಚಿಸಬೇಕು ಮತ್ತು ಘಟನೆ ಬಗ್ಗೆ ಯಾವುದೇ ಒತ್ತಡಗಳಿಗೆ ಮಣಿಯದೇ ಕಾನೂನು ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ಅಖಿಲ ಭಾರತೀಯ ಪರಿಷತ್ ಆಗ್ರಹಿಸುತ್ತದೆ ಎಂದು ಮನವಿ ಮಾಡಿದರು.

ಕರ್ನಾಟಕದ ದಕ್ಷಿಣ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಹಂಜಗಿ ಮಾತನಾಡಿ ಘಟನೆ ಮಾಡಿರುವವರು ಯಾರೇ ಆಗಿರಲಿ ಯಾವುದೇ ಧರ್ಮದವರಾಗಿರಲಿ ಕೆ.ಪಿ.ಎಸ್ ಶಾಲೆಯಲ್ಲಿ ನಡೆದಿರುವ ಘಟನೆ ಯಾವುದೇ ಸಮುದಾಯದವರು ಒಪ್ಪುವಂತದ್ದಲ್ಲ ಅಮಾಯಕರು ಯಾರು ಇಂತಹ ಕೃತ್ಯ ಎಸಗುವುದಿಲ್ಲ, ಭಾರತ ವಿಶ್ವಗುರುವಾಗುವ ಈ ಸಂದರ್ಭದಲ್ಲಿ ಸಮಾನ ಶಿಕ್ಷಣ, ಸಮಾನ ಉದ್ಯೋಗವನ್ನು ಹೆಣ್ಣು ಮಕ್ಕಳು ಬಯಸುತ್ತಿದ್ದಾರೆ ಶಾಲೆಯಲ್ಲಿ ಗಂಡು ವಿದ್ಯಾರ್ಥಿಗೆ ಈ ರೀತಿ ಬದ್ರತೆ ಇಲ್ಲದೆ ಹೋದರೆ ಹೆಣ್ಣು ಮಕ್ಕಳ ಪಾಡೇನು. ಹುಳಿಯಾರಿನ ಆರಕ್ಷಕರಿಗೆ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತೆ ಯಾರು ಕಲ್ಲಲ್ಲಿ ಹೋಡಿತಾರೋ ಅವರ ವಿರುದ್ದ ಲಾಟಿ ಎತ್ತಿ , ಯಾರು ಸಮಾಜದ ವಿರುದ್ದ ಹೋಗುತ್ತಿದ್ದಾರೋ ಅವರ ವಿರುದ್ದ ಬಂದೂಕು ಎತ್ತುವುದರ ಮೂಲಕ ಸಮಾಜದ ಶಾಂತಿ ಕಾಪಾಡಬೇಕು ತನಿಖೆಯಲ್ಲಿ ಪಾರದರ್ಶಕತೆ ಇರಬೇ̧ಕು ಯಾವುದೇ ಅಧಿಕಾರಿ ಮತ್ತು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಬಾರದು ಎಂದು ಆಗ್ರಹಿಸಿದರು

ಕರ್ನಾಟಕ ದಕ್ಷಿಣ ಪ್ರಾಂತ ಎ.ಬಿ.ವಿ.ಪಿ ಸಹ ಕಾರ್ಯದರ್ಶಿ. ಹೆಚ್.ಆರ್ ಗುರುಪ್ರಸಾದ್ ಮಾತನಾಡಿ ಉನ್ನತ ಮಟ್ಟದ ಪ್ರಭಾವಿಗಳಿಗೆ ನಾನು ಕೇಳೋಕೆ ಇಷ್ಟ ಪಡುತ್ತೇನೆ ನಿಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ , ಹೊರ ದೇಶಗಳಲ್ಲಿ ಓದುತ್ತಾಯಿದ್ದಾರೆ ಜನ ಸಾಮಾನ್ಯರ ಕಡು ಬಡವರ ಮಕ್ಕಳು ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಕೆ.ಪಿ.ಎಸ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಯಾವರೀತಿ ವಾತಾವರಣ ನಿರ್ಮಾಣವಾಗಿದೆ ಎಂದರೆ ಪ್ರತಿನಿತ್ಯ ಯೋಚನೆ ಮಾಡಿ ಶಾಲೆಗೆ ಹೋಗುವ ದುಸ್ಥಿತಿ ಬಂದಿದೆ, ನಾಗರೀಕ ಸಮಾಜ ನಾವೆಲ್ಲಾ ಯಾವ ಪರಿಸ್ಥಿತಿಲಿ ಇದಿವಿ ಎಂದು ಯೋಚನೆ ಮಾಡಬೇಕು ಶಾಲೆಗೆ ಮಕ್ಕಳನ್ನು ಹೇಗೆ ಕಲಿಸೋದು ಎಂದು. ದೇಶ ಕಾಯೋ ಸೈನಿಕರು ಹೇಗೆ ದೇಶವನ್ನು ಕಾಯುತ್ತಾರೋ ಹಾಗೆಯೇ ಆರಕ್ಷಕರು ಜನಸಮಾನ್ಯರನ್ನು ದೇಶದೊಳಗೆ ರಕ್ಷಿಸಬೇಕು. ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡುವ ವಿಚಾರದಲ್ಲಿ ಶಾಲೆ ಹಾಗೂ ಶಿಕ್ಷಣ ಇಲಾಖೆ ಮುಂದಾಗಬೇಕಿದೆ, ಆ ಘಟನೆಯಲ್ಲಿ ಭಾಗಿಯಾದ ಪುಂಡರನ್ನು ಶಾಲಾ ಆವರಣದಲ್ಲಿ ಬಿಟ್ಟವರಾರು, ಶಾಲಾ ಕಾಲೇಜಿಗೆ ಸಂಬಂಧಪಡದ ಅನ್ಯರು ಶಾಲಾ ಕಾಲೇಜಿಗೆ ನುಗ್ಗುತ್ತಾರೆ ಚಾಕು ತೋರಿಸಿ ಹಲ್ಲೆ ಮಾಡುತ್ತಾರೆ ಎಂದರೆ ಇದು ತಪ್ಪಲ್ವ , ಈ ಘಟನೆ ಸರಿಯಾದ ತನಿಖೆಯಾಗಬೇಕು ತಪ್ಪಿತಸ್ತರಿಗೆ ತಕ್ಕ ಶಿಕ್ಷೆಯಾಗಲಿ, ಆ ಪುಂಡರಿಗೆ 18 ವರ್ಷ ತುಂಬಿದೇಯೋ ಇಲ್ಲವೋ ಇಲ್ಲವೋ ಅದಲ್ಲ ಪ್ರಶ್ನೆ ಅವರು ತಪ್ಪು ಮಾಡಿದ್ದರೆ ಅವರು ತಪ್ಪಿತಸ್ಥನೆ ಹೋರತು ನಿರಪರಾದಿ ಅಲ್ಲ . ಕಾನೂನು ಅಡಿಯಲ್ಲಿ ಶಿಕ್ಷೆಯಾಗಬೇಕು ಉತ್ತಮ ಸಮಾಜ ಹುಳಿಯಾರಿನಲ್ಲಿ ನಿರ್ಮಾಣವಾಗಬೇಕು ಎಂದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಿಲ್ , ವಿದ್ಯಾರ್ಥಿಗಳು, ಬಸವರಾಜು [ಫ್ಲಂಬರ್] ಕಾಯಿ ಬಸವರಾಜು, ಸುರೇಶ್ , ಯುವರಾಜು, ಹರೀಶ್, ಶಶಿಕಿರಣ್ , ಪ್ರಭಾಕರ್, ಇನ್ನು ಮುಂತಾದವರು ಭಾಗವಹಿಸಿದ್ದರು.

98

© ಹುಳಿಯಾರು ಸಮಗ್ರ ಸುದ್ಧಿ . All Rights Reserved.