ಬಜೆಟ್ ಪೂರ್ವಭಾವಿ ಸಭೆಯೋ ಅಥವಾ ಕುಂದು ಕೊರತೆ ಸಭೆಯೋ

ಹುಳಿಯಾರು :- ಪಟ್ಟಣ ಪಂಚಾಯಿತಿಯ 2025-26 ನೇ ಸಾಲಿನ ಬಜೆಟ್ ನ ಪೂರ್ವಭಾವಿ ಸಭೆ ಸೋಮವಾರ ಜರುಗಿತು. ಆದರೆ ಈ ಸಭೆ ಬಜೆಟ್ ನ ಪೂರ್ವಭಾವಿ ಸಭೆಯೋ ಅಥವಾ ಕುಂದು ಕೊರತೆ ಸಭೆಯೋ ತಿಳಿಯಲಿಲ್ಲ.

ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆಯಲ್ಲಿ ನಡೆದ 2025-26 ನೇ ಸಾಲಿನ ಬಜೆಟ್ ನ ಪೂರ್ವಭಾವಿ ಸಭೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲದೆ ನಡೆಯಿತು, ಕುಂದು ಕೊರತೆ ಸಭೆ ನಡೆದಂತೆ ನಡೆಯಿತು, ಸಮಸ್ಯೆಗಳ ಬಗ್ಗೆ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಪಟ್ಟಣ ಪಂಚಾಯಿತಿಗೆ ಒಳಪಡುವ ಹಳ್ಳಿಗಳಲ್ಲಿ ಕಣ ನಿರ್ಮಾಣ ಮಾಡಿ ಹಾಗೂ ಹುಳಿಯಾರು ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದ್ದೆ ಅಭಿವೃದ್ದಿಗೆ ಪೂರಕವಾದ ಕೆಲಸವಾಗಲಿಎಂದರು, ನಂತರ ಕಾಮನಬಿಲ್ಲು ಫೌಂಡೇಶನ್ ನ ಚನ್ನಕೇಶವ ಪೌರ ಕಾರ್ಮಿಕರನ್ನು ಬೇರೆ ಕೆಲಸಕ್ಕೆ ಬಳಸಬಾರದು ಎಂದು ಸರ್ಕಾರದ ಆದೇಶವಿದೆ ಆದರು ಕೂಡ ನೀವು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದೀರಿ ಅವರಿಗೆ ಐಡಿ ಕಾರ್ಡ್ , ಯುನಿಫಾರಂ ಹಾಕಿಸಿ ನಿಮ್ಮ ಕೆಲವು ಪೌರ ಕಾರ್ಮಿಕರು ಹಾಕುತ್ತಿಲ್ಲ ಎಂದರು, ಇಂಜಿನಿಯರ್ ಲಿಂಗರಾಜು ಎರಡು ಅಂತಸ್ತಿಗೆ ಹುಳಿಯಾರಿನಲ್ಲಿ ಪರ್ಮಿಶನ್ ಇದೇ 4 ಮತ್ತು 5 ಅಂತಸ್ತಿನ ಕಟ್ಟಡ ಕಟ್ಟುತ್ತಿದ್ದಾರೆ ಪಂಚಾಯಿತಿಯಲ್ಲಿ ಯಾರು ಕೇಳೋರು ಇಲ್ಲವ ಎಂದು ಪ್ರಶ್ನಿಸಿದರು, ಕಂಪ್ಯೂಟರ್ ಕೆಲಸದಿಂದ ಪೌರ ಕಾರ್ಮಿಕನನ್ನು ಬಿಟ್ಟು ಬೇರೆಯವರನ್ನ ನೇಮಿಸಿ ಎಂದರು.

ಖಾತೆಗೆ ಬೇಕಾದ ದಾಖಲೆಗಳ ಬಗ್ಗೆ ಏನೇನು ಬೇಕು ಎಂದು ಒಂದು ಚೆಕ್ ಲಿಸ್ಟ್ ಕೋಡಿ ಸುಮ್ಮನ್ನೆ ತಿಂಗಳು ಗಟ್ಟಲೆ ಸಾರ್ವಜನಿಕರನ್ನು ಅಲೆಸಬೇಡಿ ಎಂದು ಇಮ್ರಾಜ್ ಹೇಳಿದರು. ವಾರ್ಡ್ ಸಭೆ ಮಾಡುತ್ತಿಲ್ಲ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಾಲಾಜಿ ಸಿಂಗ್ ದ್ವನಿ ಎತ್ತಿದರು.
ಬಜೆಟ್ ನಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆಯಾಗುವುದು ಬಿಟ್ಟು ಪಟ್ಟಣ ಪಂಚಾಯಿತಿಯ ಕುಂದು ಕೊರತೆ ಸಭೆ ನಡೆದಂತಿತ್ತು, ಇದಕ್ಕೆ ಕಾರಣ ಬಜೆಟ್ ನ ಪೂರ್ವಭಾವಿ ಸಭೆ ಬಗ್ಗೆ ಪತ್ರಕರ್ತರಿಗಾಗಲಿ , ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರಿಗೆ, ಸಾರ್ವಜನಿಕರಿಗೆ ಹಾಗೂ ಸ್ಥಳೀಯ ಯಾವುದೇ ವಾಟ್ಸಪ್ ಗ್ರೂಪ್ ಗಳಲ್ಲಿ ಮಾಹಿತಿಯನ್ನು ನೀಡದೆ ಪಟ್ಟಣ ಪಂಚಾಯಿತಿಯವರು ನಿರ್ಲಕ್ಷತೊರಿರುವುದು ಕಂಡು ಬಂತು ಕೇವಲ ಪ.ಪಂ. ನವರಿಗೆ ಪರಿಚಯವಿರುವ ಕೆಲವರನ್ನು ಮಾತ್ರ ಕರೆದು ಸಭೆ ನಡೆಸಿದಂತ್ತಿತ್ತು .

ಈ ಬಗ್ಗೆ ಪ.ಪಂ. ಮುಖ್ಯಾಧಿಕಾರಿಗಳಾದ ನಾಗಭೂಷಣ್ ರವರಿಗೆ ಪ್ರಶ್ನಿಸಿದಾಗ ಪತ್ರಿಕೆಗಳಲ್ಲಿ ಹಾಕಿಸಿದ್ದೇವೆ ಎಂದು ಸಬೂಬು ನೀಡಿದರು, ಯಾವುದಾದರು ಉಣಸೆ ಮರ ಹಾರಾಜು ಮಾಡಬೇಕಾದರೆ ಪತ್ರಿಕೆ ಯಲ್ಲಿ , ಆಟೋ ದಲ್ಲಿ ಮೈಕ್ ಕಟ್ಟಿ ಘೋಷಣೆ ಕೂಗಿಸುವ ಪ.ಪಂ ನವರು ಮುಖ್ಯವಾಗಿ ಬಜೆಟ್ ನ ಪೂರ್ವಭಾವಿ ಸಭೆಗೆ ಹೆಚ್ಚಿನದಾಗಿ ಪಟ್ಟಣ ಪಂಚಾಯಿತಿಗೆ ಒಳಪಡುವ ಸಾರ್ವಜನಿಕರಿಗೆ ತಿಳಿಸದಿದ್ದರೆ ಹೇಗೆ.
ಹೆಚ್ಚಿನ ಸಾರ್ವಜನಿಕರು ಆಗಮಿಸಿರಲಿಲ್ಲ, ಕೆಲ ಸದಸ್ಯರು ಗೈರಾಗಿದ್ದರು. ಏನೇ ಆಗಲಿ ಅಂದಾಜು ಬಜೆಟ್ ಎಷ್ಠಿದೆ ಯಾವ ವಾರ್ಡ್ ನಲ್ಲಿ ಯಾವ ಕೆಲಸವಾಗಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯಲಿಲ್ಲ ಇದು ಬರಿ ಸಮಸ್ಯೆಗಳ ಬಗ್ಗೆ ಬಜೆಟ್ ನ ಪೂರ್ವ ಭಾವಿ ಸಭೆ ರೀತಿ ನಡೆಯಲಿಲ್ಲ.

ಈ ಸಂಧರ್ಭದಲ್ಲಿ ಅಧ್ಕ್ಷಕ್ಷರಾದ ರತ್ನಮ್ಮ , ಉಪಾಧ್ಯಕ್ಷರಾದ ಕಾವ್ಯ ರಾಣಿ , ಮುಖ್ಯಾಧಿಕಾರಿ ನಾಗಭೂಷಣ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ , ಪಂ.ಪಂ. ಇಂಜಿನಿಯರ್ ಮಂಜುನಾಥ್, ಉಪಸ್ಥಿತರಿದ್ದರು.

69

© ಹುಳಿಯಾರು ಸಮಗ್ರ ಸುದ್ಧಿ . All Rights Reserved.