ಹುಳಿಯಾರಿನ ಹೆಚ್‌ ಎಸ್‌ ಆದಿತ್ಯ ಜಿಲ್ಲೆಗೆ ಪ್ರಥಮ

ಹುಳಿಯಾರಿನ ಹೆಚ್‌ ಎಸ್‌ ಆದಿತ್ಯ ಜಿಲ್ಲೆಗೆ ಪ್ರಥಮ
ಹುಳಿಯಾರು : ವಿದ್ಯಾವಾರಿಧಿ ಪಿ ಯು ಕಾಲೇಜಿನ ವಿದ್ಯಾರ್ಥಿ ಹೆಚ್‌ ಎಸ್‌ ಆದಿತ್ಯ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಹುಳಿಯಾರಿನ ವಸಂತನಗರದ ವಾಸಿಗಳಾದ ಅಡ್ವಕೇಟ್‌ ಹೆಚ್‌ ಬಿ ಸತೀಶ್‌ ಮತ್ತು ಗೃಹಿಣಿ ಹೆಚ್‌ ಎನ್‌ ಗೀತಾ ರವರ ಹಿರಿಯ ಪುತ್ರನಾಗಿರುವ ಆದಿತ್ಯ ಯಾವುದೇ ಟ್ಯೂಷನ್‌ ಗೆ ಹೋಗದೆ ಈ ಸಾಧನೆ ಮಾಡಿದ್ದಾನೆ .
ವಿಜ್ಞಾನ ವಿಭಾಗದಲ್ಲಿಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದು ಕನ್ನಡ – 98 , ಇಂಗ್ಲೀಷ್‌ – 97 , ಭೌತಶಾಸ್ತ್ರ – 99, ರಾಸಾಯನಿಕ ಶಾಸ್ತ್ರ – 100, ಗಣಿತ – 100, ಜೀವಶಾಸ್ತ್ರ – 100 ಅಂಕಗಳನ್ನು ತೆಗೆದುಕೊಂಡಿದ್ದಾನೆ.
ಪ್ರಥಮ ಪಿಯುಸಿ ಯಿಂದಲೇ ಗುರಿಯಿಟ್ಟುಕೊಂಡಿದ್ದ ಆದಿತ್ಯ ಸಲ್ಪವು ಕೂಡ ಸಮಯ ವ್ಯರ್ಥಮಾಡದೆ 2 ವರ್ಷ ಕಠಿಣ ವಿದ್ಯಾಬ್ಯಾಸ ದಿಂದ ಇದು ಸಾದ್ಯವಾಯಿತು ಎಂದಿದ್ದಾನೆ.
ಈ ಸಾಧನೆಗೆ ಕಾಲೇಜಿನ ಉಪನ್ಯಾಸಕರು, ಕಾಲೇಜಿನ ಆಡಳಿತ ಮಂಡಳಿಯವರು, ಪೋಷಕರು ಆದಿತ್ಯನಿಗೆ ಓದಲಿಕ್ಕೆ ತುಂಬಾ ಸಹಕಾರ ನೀಡಿದ್ದು ಸದ್ಯ ನೀಟ್‌ ಪರೀಕ್ಷೆಗೆ ತಯಾರಾಗುತ್ತಿರುವ ಆದಿತ್ಯ ಮೆಡಿಕಲ್‌ ಓದುವ ಆಸೆ ಹೊಂದಿದ್ದಾನೆ.
ಆದಿತ್ಯ ನ ಈ ಸಾದನೆಗೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು, ಪೋಷಕರು, ಸಂತಸ ವ್ಯಕ್ತಪಡಿಸಿದ್ದಾರೆ.

191

© ಹುಳಿಯಾರು ಸಮಗ್ರ ಸುದ್ಧಿ . All Rights Reserved.