ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿವೆ ಜಲಾಶಯದ ಸಮೀಪ ಶಿಕ್ಷಕ ಪ್ರಕಾಶ್ ರವರ ಅಣ್ಣ ನಾಗರಾಜ್ ರವರ ತೋಟದಲ್ಲಿದ್ದ ಕೊಬ್ಬರಿ ಶೆಡ್ ಗೆ ಆಕಸ್ಮಿಕ ವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಹಣ ನಷ್ಟವಾಗಿರುವ ಘಟನೆ ಶುಕ್ರವಾರ ಸಾಯಂಕಾಲ ನಡೆದಿದೆ.
ಹೊಯ್ಸಳಕಟ್ಟೆ ಗ್ರಾಮದ ನಾಗರಾಜ್ ರವರ ತೋಟದಲ್ಲಿ ಕೊಬ್ಬರಿ ಶೆಡ್ ನಿರ್ಮಿಸಿದ್ದು ಆಕಸ್ಮಿಕವಾಗಿ ಬೆಂಕಿ ಬಿದ್ದು ಶೆಡ್ ನಲ್ಲಿದ್ದ 20 ಸಾವಿರಕ್ಕು ಅಧಿಕ ಕೊಬ್ಬರಿ, ಕೃಷಿ ಪಂಪ್ ಸೆಟ್ ಮೋಟಾರ್, ಪೈಪ್ ಗಳು, 20 ತೆಂಗಿನ ಮರಗಳು, 30 ಅಡಿಕೆ ಮರಗಳು ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಕರಕಲಾಗಿದೆ.
ತೆಂಗು ಹಾಗು ಅಡಿಕೆ ತೋಟಕ್ಕು ಬೆಂಕಿ ವ್ಯಾಪಿಸಿ ಇನ್ನು ಹೆಚ್ಚು ನಷ್ಟವಾಗುತ್ತಿತ್ತು, ಆದರೆ ದಸೂಡಿ ವಿದ್ಯುತ್ ಘಟಕದ ಶಾಖಾಧಿಕಾರಿಗಳು ತಕ್ಷಣವೆ ಮನವಿಗೆ ಸ್ಪಂದಿಸಿ ವಿದ್ಯುತ್ ನೀಡಿದ್ದರಿಂದ ನೀರು ಹರಿಸಿ ಬೆಂಕಿ ನಂದಿಸಲಾಯಿತು ಎಂದು ಮಾಜಿ ತಾಪಂ ಸದಸ್ಯೆ ಕವಿತಾಪ್ರಕಾಶ್ ವಿವರಿಸಿದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.