ಕೆ.ಎಂ.ಎಫ್ . ಮುಂದೆ ಅಹೋರಾತ್ರಿ ಧರಣಿಗೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಿರ್ದಾರ

ಹುಳಿಯಾರು: ಫೆ. 10 ರಂದು ಬೆಂಗಳೂರು ಕೇಂದ್ರ ಕಛೇರಿ ಕರ್ನಾಟಕ ಹಾಲು ಮಹಾ ಮಂಡಲ [ಕೆ.ಎಂ.ಎಫ್] ಡೈರಿಯ ಮುಂದೆ ಹಾಲಿನ ಅನುದಾನ ಭಾಕಿ ಬಿಡುಗಡೆ ಹಾಗೂ ಹಾಲಿನ ದರ ಹೆಚ್ಚಿಸಲು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಮುಖಂಡರ ಸಭೆ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಟಿ.ಸಿ. ಮಲ್ಲಿಕಾರ್ಜುನಯ್ಯ ಮಾತನಾಡಿ ಕುಂಟೆಗೆ ಲಕ್ಷಗಟ್ಟಲೆ ಹಣ ಕೊಟ್ಟು ಕೃಷಿ ಜಮೀನನ್ನು ಕೊಂಡುಕೋಳ್ಳುತ್ತಿದ್ದಾರೆ ಬೆಳೆ ಬೆಳೆಯುವ ಜಮೀನು ಮುಂದಿನ ದಿನಗಳಲ್ಲಿ ಇಲ್ಲವಾಗುತ್ತದೆ ಏನು ತಿನ್ನಬೇಕು ಎನ್ನುವ ಸ್ಥಿತಿ ರಾಜ್ಯದಲ್ಲಿ ದೇಶದಲ್ಲಿ ಮುಂದಿನ ದಿನಗಳಲ್ಲಿ ಉಂಟಾಗುತ್ತೆ ಇದರಲ್ಲಿ ಯಾವುದೇ ಸಂಶಯಬೇ̧ಡ ದೆಹಲಿಯಲ್ಲಿ ಎಷ್ಟೋ ಜನ ರೈತರು ಪ್ರಾಣತ್ಯಾಗ ಮಾಡಿದರು ಆಗ ಕೇಂದ್ರ ಸರ್ಕಾರ ಆರರಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ತೆಗೆದುಕೊಂಡರು, ನಾನು ಕೃಷಿ ಕಾಯ್ದೆ ತೆಗೆಯುವೆ ಎಂದು ಆಗ ಸಿದ್ದರಾಮಯ್ಯ ನವರು ಹೇಳಿದ್ದರು ಅದನ್ನು ನಾವು ಕೂಡ ನಂಬಿದ್ದೇವು ಆದರೆ ಈಗ ಅವರು ಮಾತಿಗೆ ತಪ್ಪಿದ್ದ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು, ಚಳಿಗಾಲದ ಅಧಿವೇಶನ ಆದಾಗಲು ಕೂಡ ನಾವು ಬೇಟಿ ಮಾಡಿದ್ದೇವು ಜನವರಿ ಒಳಗೆ ದರ ಏರಿಸುವುದಾಗಿ ಭರವಸೆ ಕೊಟ್ಟಿದ್ದರು ಆದರೆ ಫೆಬ್ರವರಿ ಬಂದರು ಇಲ್ಲ ಯಾವ ಸರ್ಕಾರಗಳು ಕೂಡ ರೈತರ ಪರವಾಗಿಲ್ಲ ಈ ನಿಟ್ಟಿನಲ್ಲಿ ರೈತರನ್ನು ಸಂಘಟಿಸಿ ಕೆ.ಎಂ.ಎಫ್ ಕಛೇರಿ ಮುಂದೆ ಅಹೋರಾತ್ರಿ ಧರಣಿ ಮಾಡೋಣ ಹಾಲಿನ ದರ ಹೆಚ್ಚಿಸಿದರೆ ರೈತ ಕುಟುಂಬಗಳು ಚೆನ್ನಾಗಿರುತ್ತವೆ. ಈ ಸಿದ್ದರಾಮಯ್ಯ ಸರ್ಕಾರ ರೈತರ ಪಂಪ್ ಸೆಟ್ ಗು ಮೀಟರ್ ಅಳವಡಿಸಲು ಹೊರಟಿದೆ. ಹಳ್ಳಿ ಹಳ್ಳಿಗಳಲ್ಲಿಯೂ ರೈತರು ಸಂಘಟಿತರಾಗಿ ರೈತರ ಬದುಕಿಗಾಗಿ ಹೋರಾಟ ಮಾಡಬೇಕು, ಇಲ್ಲವಾದರೇ ಸರ್ಕಾರ ರೈತರನ್ನು ಉಳಿಸಲ್ಲ ಎಂದರು.

ನಂತರ ಜಿಲ್ಲಾಧ್ಯಕ್ಷರಾದ ಧನಂಜಯರಾಧ್ಯ ಮಾತನಾಡಿ ಹಾಲಿನ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಕೆ.ಎಂ.ಎಫ್ ಕಛೇರಿ ಮುಂದೆ ರೈತರು ಸೇರಿ ಹಾಲು ಉತ್ಪಾದಕರ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲಿಕ್ಕೆ ಮತ್ತು ಅವರ ಸ್ಥಿತಿ ಏನಾಗಿದೆ ನಿಮಗೆ ಗೊತ್ತಿದೆ . ಸರ್ಕಾರ ಪ್ರೋತ್ಸಾಹ ಧನ ಎಂದು ಹೇಳಿ 1 ಲೀಟರ್ ಹಾಲಿಗೆ 5 ರೂಪಾಯಿಯನ್ನು ಕೊಡುತ್ತವೆ ಎಂದು ಘೋಷಣೆ ಮಾಡಿದ್ದರು ಕಳೆದ ಒಂದು ವರ್ಷದಿಂದ ಹಣವನ್ನು ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ ಸುಮಾರು 620 ಕೋಟಿ ಪ್ರೋತ್ಸಾಹ ಧನ ಬಾಕಿ ಇದೆ ಅದನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡ್ತೀನಿ ರಾಜ್ಯದಲ್ಲಿ ಹಾಲು ಉತ್ಪಾದನೆ ಮಾಡುವ ರೈತರಿಗೆ ಕಡಿಮೆ ಬೆಲೆ ಕೊಡುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಪರಿಶೀಲನೆ ಮಾಡಿದಾಗ ನಮ್ಮ ರಾಜ್ಯದಲ್ಲಿ ಕಡಿಮೆ ಬೆಲೆ ಕೊಡುತ್ತಿದ್ದಾರೆ. ಕನಿಷ್ಠ ರೈತರಿಗೆ 50 ರೂ ಹೆಚ್ಚಿಗೆ ಮಾಡಬೇಕು ಎಂದು ಸುಮಾರು 6 ಜಿಲ್ಲೆಯ ರೈತರು ಕೆ.ಎಂ.ಎಫ್ ಕಚೇರಿ ಮುಭಾಗ ಧರಣಿ ಮಾಡುತ್ತೇವೆ. ನಾವು ಅನಿವಾರ್ಯವಾಗಿ ಹೈನುಗಾರಿಕೆ ಅವಲಂಬಿಸಿದ್ದೇವೆ, ರೈತ ಹಸು ಸಾಕಬೇಕು ಅಂದರೆ ಹುಡುಗಾಟ ಅಲ್ಲ , ಬೂಸ ಹಣ ಎಷ್ಟು ಕರ್ಚುಗಳೆಷ್ಟು , ಬ್ಯಾಂಕುಗಳು ರೈತರಿಗೆ ಸಾಲ ಕೊಡುತ್ತಿಲ್ಲ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದರೆ ಕಿರುಕುಳ ಕೊಟ್ಟು ಬಹಳಷ್ಟುಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಕಾನೂನು ಜಾರಿ ಮಾಡಲು ಹೊರಟಿದೆ ಮಾಡಲಿ ಒಳ್ಳೆಯದು ಆರ್ ಬಿ ಐ ಕಾನೂನು ಉಲ್ಲಘನೆ ಮಾಡಿ ಕಿರುಕುಳ ಕೊಟ್ಟರೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟರು.
ತಾಲ್ಲೂಕು ಕಾರ್ಯಾಧ್ಯಕ್ಷರಾದ ತೋಂಟರಾಧ್ಯ ಮಾತನಾಡಿ ರೈತರು ಜೀವನ ಮಾಡಲು ಪಶುಸಂಗೋಪನೆಯನ್ನು ಅವಲಂಬಿಸುತ್ತಿದ್ದಾರೆ. ಹಸುಗಳಿಂದ ಆದಾಯಕ್ಕಿಂತ ಖರ್ಚು ಜಾಸ್ತಿ ಬರುತ್ತಿದೆ ಹಸುಗಳಿಗೆ ಹಾಕುವ ಮೆಡಿಸಿನ್ ಇರಬಹುದು ಹಾಗೂ ಹಾಲು ಫ್ಯಾಟ್ ಇಲ್ಲವೆಂದು ಕಡಿಮೆ ಧರ ನೀಡುತ್ತಾರೆ ರೈತರನ್ನು ಕಡೆಗಣಿಸುವ ಸರ್ಕಾರಕ್ಕೆ ದಿಕ್ಕಾರವಿರಲಿ ಎಂದರು.

ರೈತರ ಬೇಡಿಕೆಗಳು :
* ರೈತರ ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ 50 ನಿಗಧಿಪಡಿಸಬೇಕು.
* ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಿ ಹೆಚ್ಚಿನ ಧನ ನೀಡಬೇಕು
* ಸರ್ಕಾರ ನೀಡುವ ಪ್ರೋತ್ಸಾಹ ಧನ ರೂ 5 ರಿಂದ 10 ರೂಪಾಯಿಗೆ ಹೆಚ್ಚಿಸಬೇಕು
* ಹಾಲಿನ ಬೆಲೆ ನಿಗದಧಿಯಲ್ಲಿ ಒಕ್ಕೂಟಗಳು ಸ್ವತಂತ್ರವಾಗಿರಬೇಕು, ಗರಿಷ್ಠ ವೇತನ ಮಿತಿ ನಿಯಮ ಜಾರಿ ಮಾಡಬೇಕು.
* ಬಾಕಿ ಇರುವ ಸಹಾಯ ಧನ ಬಾಬ್ತು 620 ಕೋಟಿ ಹಣ ಕೂಡಲೇ ಬಿಡುಗಡೆ ಮಾಡಬೇಕು


ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಹೆಚ್ ಎನ್ ಸತೀಶ್, ಜಿಲ್ಲಾ ಮಹಿಳಾ ಮುಂಖಡರಾದ ಶಶಿಕಲಾ, ತಾಲ್ಲೂಕು ಉಪಾಧ್ಯಕ್ಷರಾದ ಸೀತಾರಾಮಯ್ಯ , ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಗಿರೀಶ್ , ಹಸಿರು ಸೇನೆ ಅಧ್ಯಕ್ಷರಾದ ನಾಗರಾಜು, ರೇಣುಕಮ್ಮ ತಾಲ್ಲೂಕು ಕಾರ್ಯದರ್ಶಿ ಲಕ್ಷ್ಮಮ್ಮ, ಹೋಬಳಿ ಸಮಿತಿಯ ಶರತ್, ಷಣ್ಮುಖಯ್ಯ , ಕೆಂಚಯ್ಯ , ಹೋಬಳಿ ಮಹಿಳಾ ಸಂಘಟನೆಯ ಲಲಿತಮ್ಮ , ಪುಷ್ಪಲತ, ಲಕ್ಷ್ಮಕ್ಕ, ಸುಶೀಲಮ್ಮ, ಭೂಮಿಕ, ಅಂಬಿಕಾ, ಅರುಣಕುಮಾರಿ, ಶಿವಮ್ಮ, ರೇಣುಕಮ್ಮ, ಗೌರಮ್ಮ, ಪಲ್ಲವಿ, ಮಂಜುಳ, ಗಾಯಿತ್ರಮ್ಮ ಉಪಸ್ಥಿತರಿದ್ದರು.

83

© ಹುಳಿಯಾರು ಸಮಗ್ರ ಸುದ್ಧಿ . All Rights Reserved.