ಕಂದಿಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಂದಿಕೆರೆ : ಚಿ.ನಾ.ಹಳ್ಳಿ ತಾಲ್ಲೂಕು ಪಿ.ಹೆಚ್.‌ಸಿ ಕಂದಿಕೆರೆ ವ್ಯಾಪ್ತಿಯ, ಕಂದಿಕೆರೆ ಗ್ರಾಮದಲ್ಲಿ ಸಮಗ್ರ ಆರೋಗ್ಯ ಅಭಿಯಾನದಡಿಯಲ್ಲಿ, ಸಮಗ್ರ ರೋಗಗಳ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು .ಕಂದಿಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತೊಳಸಮ್ಮ ಕಾರ್ಯಕ್ರಮ ಉದ್ಗಾಟಿಸಿದರು, ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ವೆಂಕಟರಾಮಯ್ಯನವರು ಸಮಗ್ರ ಆರೋಗ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ಹಾಗೂ ಆರೋಗ್ಯ ತಪಾಸಣೆ ರಕ್ತ ಪರೀಕ್ಷೆ ಹಾಗೂ ಅಸಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ತಾಲ್ಲೂಕು.ಹಿ.ಪ್ರಾ.ಆ.ಸುರಕ್ಷತಾಧಿಕಾರಿ ರೇಣುಕಮ್ಮನವರು ಮತ್ತು ಐಸಿಟಿಸಿ ವಿಭಾಗದ ನವೀನ್ ಕುಮಾರ್ ರವರು, ಎನ್‌ ಟಿ ಈ ಪಿ ವಿಭಾಗದ ಉಮಾ ಶಂಕರ್‌ ರವರು ಪ್ರಾಸ್ತವಿಕವಾಗಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಚಿ.ನಾ.ಹಳ್ಳಿ ಎನ್‌ ಸಿ ಡಿ ಘಟಕದ ವೈದ್ಯಾಧಿಕಾರಿಗಳಾದ ಡಾ.ಕವಿತಾ, ಹಾಗೂ ಕಂದಿಕೆರೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸಾದ್ ಗೌಡ್ರು, ವಸಂತಕುಮಾರ್, ಹಾಗೂ ಪಿ.ಡಿ.ಓ ಶಿವಕುಮಾರ್, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞರಾದ ವಿಜಯಾ ಪ್ರಾರ್ಥಿಸಿದರು, ಪಿ ಹೆಚ್‌ ಸಿ ಓ ಜ್ಯೋತಿ ಎಸ್. ಸ್ವಾಗತಿಸಿದರು ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಮಾಲತೇಶ್ ಕಾರ್ಯಕ್ರಮ ನಿರೂಪಿಸಿದರು, ಪಿ ಹೆಚ್‌ ಸಿ ಓ ಮಮತ ವಂದನಾರ್ಪಣೆ ಕಾರ್ಯಕ್ರಮ ನೆಡೆಸಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

60

© ಹುಳಿಯಾರು ಸಮಗ್ರ ಸುದ್ಧಿ . All Rights Reserved.