ಹಂದನಕೆರೆ ಹೋಬಳಿಯ ಬೆಳಗುಲಿ ಹೊನ್ನಮರಡಿ ಶ್ರೀ ರಂಗನಾಥಸ್ವಾಮಿಯವರ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ದಿನಾಂಕ : 14-01-2025 ನೇ ಮಂಗಳವಾರ ನಡೆಯಲಿದೆ. ಶ್ರೀ ಸ್ವಾಮಿಯವರ ಉತ್ಸವವು ಪ್ರತಿ ವರ್ಷದಂತೆ ಬೆಟ್ಟದ ಮೇಲೆ ಹೊಸಕೆರೆ ಶ್ರೀ ಉಡುಸಲಮ್ಮ ದೇವಿಯವರ ಆಗಮನದೊಂದಿಗೆ ಗಂಡುಗತ್ರಿ ಮುಳ್ಳಾವಿಗೆ, ಊರು ಬತ್ತಿ ಮತ್ತು ದೊಡ್ಡುಳಗ ಕಾರ್ಣಿಕವು ನಡೆಸುವಂತೆ ಶ್ರೀ ಸ್ವಾಮಿಯವರ ಅಪ್ಪಣೆಮೇರೆಗೆ ನಿಶ್ಚಾಯಿಸಲಾಗಿದ್ದು, ನಂತರ ಸಂಜೆ ಬೆಳಗುಲಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿಯವರು ಹಾಗೂ ಕೆಂಚರಾಯಸ್ವಾಮಿ ಶ್ರೀ ಜಾಲಿಮರದಮ್ಮ ಮತ್ತು ಶ್ರೀ ಉಡಿಸಲಮ್ಮ ದೇವಿಯವರ ಉತ್ಸವ ಏರ್ಪಡಿಸಲಾಗಿದೆ ಮತ್ತು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ರಂಗನಾಥ ಕಮಿಟಿ ಬೆಳಗುಲಿ ಹಾಗೂ ಗ್ರಾಮಸ್ಥರು ಕೋರಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.