ತಾಲೂಕು ಮಟ್ಟದ ಡೆಂಗ್ಯೂ ವಿರೋಧಿ ಮಾಸಾಚರಣೆ

ಚಿಕ್ಕನಾಯಕನಹಳ್ಳಿ : ತಾಲೂಕಿನ ಹಾಸ್ಟೆಲ್ ನ ವಾರ್ಡನ್ ಮತ್ತು ಸಿಬ್ಬಂದಿಗಳಿಗೆ ಡೆಂಗ್ಯೂ ರೋಗದ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣ, ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿವಿ ವೆಂಕಟರಾಮಯ್ಯ ಮಾತನಾಡಿ ಡೆಂಗ್ಯೂ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಡೆಂಗ್ಯೂ ರೋಗ ಹರಡುವ ಈ ಡೀಸ್ ಈಜಿಪ್ಟ್ ಸೊಳ್ಳೆಯ ಸಂತಾನವೃದ್ಧಿ ತಾಣಗಳು. ಅಭಿವೃದ್ಧಿ ಪಡುವ ಬಗ್ಗೆ ತಿಳಿಸಿ ನಿಯಂತ್ರಣ ಕ್ರಮಗಳ ಬಗ್ಗೆ ಸೊಳ್ಳೆಯ ಬೆಳವಣಿಗೆಯ ವಿವಿಧ ಹಂತಗಳು ವಾರದ ಒಣಗಲು ದಿನ, ಸ್ವಯಂ ರಕ್ಷಣಾ ವಿಧಾನ. ಜೈವಿಕ ವಿಧಾನದಲ್ಲಿ ಗಪ್ಪಿ ಮತ್ತು ಗ್ಯಾಂಬೋಸಿಯ ಮೀನುಗಳ ಸಾಕಾಣಿಕೆ. ಲಾರ್ವ ಸಮೀಕ್ಷೆ ಮಾಡಿ ಲಾರ್ವ ಮುಕ್ತ ಹಾಸ್ಟೆಲ್ ಮಾಡುವ ಬಗೆ ಪರಿಸರ ನೈರ್ಮಲ್ಯ ಹಾಗೂ ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಅರಿವು ಮೂಡಿಸಿದರು.

ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ತಾಲೂಕು ಮೇಲ್ವಿಚಾರಕರಾದ ಮಂಜೇಗೌಡ ರವರು ಮಕ್ಕಳಲ್ಲಿ ಡೆಂಗ್ಯೂ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿ ಕರೆ ತಂದು ರಕ್ತ ಪರೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶೇಷಾದ್ರಿ ಅವರು ಸೊಳ್ಳೆಗಳ ಜೀವನ ಚರಿತ್ರೆ ರೋಗ ಹರಡುವ ವಿಧಾನಗಳ ಬಗ್ಗೆ ತಿಳಿಸಿದರು.

ಆರೋಗ್ಯ ಅಧಿಕಾರಿಗಳಾದ ಚೇತನ್ ಮಾತನಾಡಿ ಡೆಂಗ್ಯೂ ರೋಗಕ್ಕೆ ಚಿಕಿತ್ಸೆಗಳಿಲ್ಲ. ರೋಗ ಲಕ್ಷಣಗಳಿಗನುಗುಣವಾದ ಚಿಕಿತ್ಸೆಗಳನ್ನು ತಕ್ಷಣ ಕೊಡಿಸಿ. ಮಾರಣಾಂತಿಕ ಡೆಂಗ್ಯೂ ಜ್ವರವನ್ನು ನಿಯಂತ್ರಣದಲ್ಲಿಡಲು ಪೌಷ್ಟಿಕ ಆಹಾರ ಸೇವನೆ ಹಾಗೂ ಆರೋಗ್ಯ ಶಿಕ್ಷಣ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದ ಅವರು ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಏರುತ್ತಿರುವ ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ. ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ವಿಧಾನಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡೆಂಗ್ಯೂ ರೋಗದ ಬಗ್ಗೆ ಕಿರುಹೊತ್ತಿಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಸ್ಟರ್ ಗಳನ್ನು ಎಲ್ಲರಿಗೂ ವಿತರಿಸಲಾಯಿತು.

74

© ಹುಳಿಯಾರು ಸಮಗ್ರ ಸುದ್ಧಿ . All Rights Reserved.