ಚಿಕ್ಕನಾಯಕನಹಳ್ಳಿ: ಬಗರ್ ಹುಕುಂ ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ಹಾಗೂ ಕಂದಾಯ ಇಲಾಖೆಯ ಯಾವುದೇ ಸಮಸ್ಯೆಗಳಿದ್ದರು ಅವುಗಳನ್ನು ಪರಿಹರಿಸಲು ಪ್ರತಿ ಸೋಮವಾರ ಮದ್ಯಾಹ್ನ 2.30 ರಿಂದ ಮದ್ಯಾಹ್ನ 4 ಗಂಟೆಯವರೆಗೆ ಅವಕಾಶವಿದ್ದು ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ
ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಬಗರ್‌ಹುಕುಂ ಸಭೆಯ ನಂತರ ಮಾತನಾಡಿದ ಅವರು ನಮ್ಮ ತಾಲೂಕಿನ ಸಾರ್ವಜನಿಕರಿಗಾಗಿ ಒಂದು ವಿಶೇಷ ಯೋಜನೆಯನ್ನು ರೂಪಿಸಿದ್ದು ಅದರಂತೆ ತಾಲೂಕಿನ ಎಲ್ಲಾ ಭಾಗದ ಜನರು ತಮ್ಮ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳಿಗೆ ಹಾಗೂ ಸಾಗುವಳಿ ಚೀಟಿ, ಬಗರ್ ಹುಕುಂ, ಖಾತೆಗಳಿಗೆ ಸಂಬಂಧಿಸಿದಂತೆ ತಮ್ಮ ಸಮಸ್ಯೆಗಳಿಗಾಗಿ ಎಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಿನ ಸೋಮವಾರದಿಂದ ತಾಲೂಕು ಆಡಳಿತ ಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಅವಕಾಶವಿದ್ದು ಇದನ್ನು ಸಾರ್ವಜನಿಕರು ಉಪಯೋಗಿಸಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ ಎಂದ ಅವರು ನಮೂನೆ 50 ಹಾಗೂ 53 ರಲ್ಲಿ ಈ ಹಿಂದೆ ಗೋಮಾಳದಲ್ಲಿ ಮಂಜೂರಾದ ಜಮೀನುಗಳಿಗೆ ಮಾತ್ರ ಖಾತೆ ಮಾಡಲು ಅವಕಾಶವಿದ್ದು ನಂತರ ನಮೂನೆ 57 ರಲ್ಲಿ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಲು ಸರ್ಕಾರ ಅವಕಾಶ ನಿಡಿಲ್ಲ ಹಾಗೂ ಗೋಮಾಳವನ್ನು ಉಳುಮೆ ಮಾಡುತ್ತಿರುವ ರೈತರಿಗೆ ಗೋಮಾಳ ಮಂಜೂರು ಮಾಡುವ ಬಗ್ಗೆಯು ಕೆಲವು ಷರತ್ತುಗಳನ್ನು ಹಾಕಿದೆ ಅದರಂತೆ ಗ್ರಾಮಕ್ಕೆ ಸೇರಿದ ಹೆಚ್ಚುವರಿ ಗೋಮಾಳವಿದ್ದರೆ ಅಂತಹವುಗಳನ್ನು ಪರೀಶಿಲನೆ ಮಾಡಲು ತಿಳಿಸಿದ್ದಾರೆ ಅದೇ ರೀತಿ ನಮ್ಮ ಬಗರ್‌ಹುಕುಂ ಸಮಿತಿಯೊಂದಿಗೆ ಚರ್ಚೆ ನಡೆಸಿ ನೈಜ ಪಲಾನುಭವಿಗಳನ್ನು ಗುರುತಿಸಿ ಅರ್ಹರಿಗೆ ಭೂಮಿಯನ್ನು ಮಂಜೂರು ಮಾಡಲಾಗುವುದು ಎಂದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.