ಹುಳಿಯಾರು : ಪಟ್ಟಣದ ವಸಂತನಗರದ ವಾಸವಿ ಆಂಗ್ಲ ಪ್ರೌಢಶಾಲೆಗೆ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇ.100 ಫಲಿತಾಂಶ ಬಂದಿದೆ.
49 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 15 , ಉನ್ನತ ಶ್ರೇಣಿಯಲ್ಲಿ 28, ದ್ವಿತೀಯ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ,
ಸುನಿಲ್ ಕುಮಾರ್ ಎಂ ಕೆ – 614, ಹರ್ಷಿತ ಆರ್ ಡಿ – 613, ಸಂಚಿತ ಟಿ ಎಸ್ – 610 , ದೃತಿ ಆರ್ – 606, ಇಂದುಶ್ರೀ ಎಂ – 606, ಹರ್ಷಿತ ಹೆಚ್ ಜಿ – 603, ವರ್ಷಿಣಿ – 597, ಸಂಧ್ಯಾ – 591, ಕಿರಣ್ ಕುಮಾರ್ ಎಸ್ ಹೆಚ್ – 576, ಹರ್ಷಿತ್ ಗೌಡ – 573, ಅನಿಲ್ ಕುಮಾರ್ ಎಂ ಕೆ – 564, ಜೀವನ್ ಟಿ ಪಿ – 563, ಗಂಧನ ಹೆಚ್ ಎಂ – 562, ದೃವಿತ್ ಹೆಚ್ ಎನ್ – 555 , ಸಹನಿಕ – 535 ಅತಿ ಹೆಚ್ಚು ಅಂಕ ಪಡೆದವರಾಗಿದ್ದಾರೆ.
ತಾಲ್ಲೂಕಿನಲ್ಲಿಯೇ ಶೇ. 100 ಫಲಿತಾಂಶ ನಮ್ಮ ಶಾಲೆಗೆ ಬಂದಿರುವುದು ತುಂಬಾ ಸಂತಸದ ವಿಷಯವಾಗಿದೆ ಎಂದು ವಿದ್ಯಾರ್ಥಿಗಳ ಸಾಧನೆಗೆ ಅಧ್ಯಕ್ಷರಾದ ಟಿ.ಎಲ್.ಬಾಲೇಶ್ , ಕಾರ್ಯದರ್ಶಿ ಎಲ್.ಆರ್. ಬಾಲಾಜಿ, ಸಹಕಾರ್ಯದರ್ಶಿ ಎಂ.ಎಸ್. ನಾಗರಾಜು, ಮುಖ್ಯ ಶಿಕ್ಷಕ ಪ್ರಕಾಶ್ ಎಸ್.ಎನ್, ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.