ಗೂಬೇಹಳ್ಳಿ ಪ್ರಾಥಮಿಕ ಆರೋಗ್ಯ ಕೆಂದ್ರದ ನೂತನ ಕಟ್ಟಡ ಉದ್ಘಾಟನೆ

ಹಂದನೆಕೆರೆ ಹೋಬಳಿಯ ಗೂಬೇಹಳ್ಳಿ ಗ್ರಾಮದಲ್ಲಿ ಸುಮಾರು 1 ಕೋಟಿ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ದ ನೂತನ ಕಟ್ಟಡವನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗುಂಡೂರಾವ್‌ ರವರು ಉದ್ಘಾಟಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಸುಸರ್ಜಿತ ಕಟ್ಟಡ ನಿರ್ಮಾಣವಾಗಿದೆ ಈಗಾಗಲೇ ಶಾಸಕರು ಹೇಳಿದಂತೆ ಪ್ರಾಥಮಿಕ ಕೇಂದ್ರಕ್ಕೆ ಬೇಕಾಗುವ ಸಲಕರಣೆಗಳು ಕೊಡಿ ಎಂದು ಈಗಾಗಲೇ ಡಿ.ಹೆಚ್.ಓ ರವರಿಗೆ ಸೂಚಿಸಿದ್ದೇನೆ. ತಾಲ್ಲೂಕು ಆಸ್ಪತ್ರೆಯನ್ನು ಕೂಡ ನೋಡಿದೆ ಬಹಳ ಚಿಕ್ಕದಾಗಿ ಕಾಣಿಸಿತು ಕನಿಷ್ಠ ತಾಲ್ಲೂಕು ಆಸ್ಪತ್ರೆ ಎಂದರೆ 100 ಬೆಡ್‌ ಇರಬೇಕು ಆದರೆ 50 ಬೆಡ್‌ ಮಾತ್ರ ಸೌಲಭ್ಯವಿದೆ, ಏಕೆಂದರೆ ಹಳ್ಳಿಗಾಡಿನ ಜನ ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಆದ್ದರಿಂದ ತಾಲ್ಲುಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಅವಶ್ಯಕತೆ ಇದೆ ನಾನು ಮಂಜೂರು ಮಾಡಿಕೊಡುತ್ತೇನೆ, ಬರುವ ಬಜೆಟ್‌ ನಲ್ಲಿ ಸೇರಿಸಿಕೊಳ್ಳಿ ಎಂದು ಈಗಾಗಲೇ ಅಧಿಕಾರಿಗಲಿಗೆ ಸೂಚಿಸಿದ್ದೇನೆ, ತಾಲ್ಲೂಕು ಆಸ್ಪತ್ರೆಗಳು 24 ಗಂಟೆ ನಡೆಯಬೇಕು ಜಿಲ್ಲಾ ಆಸ್ಪತ್ರೆಯಂತಿರಬೇಕು ಎಂಬುದು ನಮ್ಮ ಸಿದ್ದರಾಮಯ್ಯ ಸರ್ಕಾರದ ಉದ್ದೇಶ ಆಗಿದೆ, ಎಲ್ಲಾ ಕಡೆ ತಾಲ್ಲೂಕು ಆಸ್ಪತ್ರೆಗಳನ್ನು ಅಭಿವೃದ್ದಿ ಪಡಿಸಲು ಶ್ರಮಿಸುತ್ತಿದ್ದೇವೆ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗ ನೀಡಿದ ದಿವಂಗತ ಸಿದ್ದೇಗೌಡರು ಹಾಗೂ ಅವರ ಕುಟುಂಬಕ್ಕೆ ವಿಶೇಷವಾಗಿ ಅಭಿನಂದನೆ ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಸಕರಾದ ಸುರೇಶ್‌ ಬಾಬು ರವರು ಮಾತನಾಡಿ ಆಸ್ಪತ್ರೆಗಳು ದೇವಾಲಯಗಳಿದ್ದಂತೆ ಎಲ್ಲಾ ವೈದ್ಯಾಧಿಕಾರಿಗಳಿಗೆ ಯಾವುದೇ ಸಮಸ್ಯೆ ಮನೆಯಲ್ಲಿರಲಿ ಅದನೆಲ್ಲಾ ಮರೆತು ಯಾವ ರೋಗಿ ಆಸ್ಪತ್ರೆಗೆ ಬರುತ್ತಾನೆ ಆ ರೋಗಿಯನ್ನು ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿ ಉತ್ತಮ ಚಿಕಿತ್ಸೆ ಕೊಟ್ಟು ಅವನನ್ನು ಗುಣವಂತನಾಗಿ ಮಾಡಿದರೆ ಯಾವತ್ತು ಕೂಡ ವೈದ್ಯರನ್ನು ಜನ ಮರೆಯಲ್ಲ, ಸಿಬ್ಬಂದಿ ಕೊರತೆ ಆರೋಗ್ಯ ಇಲಾಖೆಯಲ್ಲಿ ಇದೆ ನಿಜ ಹೆಚ್ಚಿನ ಸಂಖ್ಯೆಯಲ್ಲಿ ಹಲವಾರು ವೈದ್ಯರನ್ನು ತೆಗೆದುಕೊಳ್ಳಲು ನಾನು ಒತ್ತಾಯಿಸುತ್ತೇನೆ. ಹಾಗೂ ಖಾಸಗಿ ಆಸ್ಪತ್ರೆಗೆ ಹೋದರೆ ನಿಮ್ಮನ್ನ ಸುಲಿಗೆ ಮಾಡುತ್ತಾರೆ ಆದ್ದರಿಂದ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ದಿ ಪಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಚಂದ್ರೇಶೇಖರ್‌ ಪ್ರಾಸ್ತಾವಿಕ ನುಡಿಗಳನ್ನಾಡಿ ಸುಮಾರು 1 ಕೋಟಿ 80 ಲಕ್ಷ ಅಂದಾಜಿನಲ್ಲಿ ಈ ಹಿಂದೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಮಾಜಿ ಕಾನೂನು ಸಚಿವರಾದ ಮಾಧುಸ್ವಾಮಿ ಯವರು ನೇರವೆರಿಸಿದ್ದರು ಜುಲೈ 14 2022 ರಂದು ನೇರವೇರಿಸಿದ್ದರು ಈಗ ಶಾಸಕರಾದ ಸುರೇಶ್‌ ಬಾಬುರವರ ಅದ್ಯಕ್ಷತೆಯಲ್ಲಿ ಆರೋಗ್ಯ ಸಚಿವರಾದ ದಿನೇಶ್‌ ಗುಂಡೂರಾವ್‌ ನವರು ನೂತನ ಕಟ್ಟಡ ಉದ್ಘಾಟಿಸಿದ್ದಾರೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಬೆಳಗುಲಿ ಗ್ರಾ.ಪಂ. ಅದ್ಯಕ್ಷರಾದ ಬಸವರಾಜು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಜಾಗ ನೀಡಿದ ದಿವಂಗತ ಸಿದ್ದೇಗೌಡರನ್ನು ನಾವು ಇವತ್ತು ನೆನೆಯಬೇಕು ಅವರ ಕುಟುಂಬಕ್ಕೆ ನಾನು ಅಭಿನಂಧನೆ ತಿಳಿಸುತ್ತೇನೆ, ಈ ಸಂಧರ್ಭದಲ್ಲಿ ಮಾಜಿ ಸಚಿವರನ್ನು ನಾವು ನೆನೆಯಬೇಕು ಅನುದಾನ ನೀಡಿ ಶಂಕುಸ್ಥಾಪನೆ ನೇರವೇರಿಸಿದ್ದರು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿದ್ದೇಗೌಡರ ಹೆಸರಿಡಿ ಹಾಗೂ ಹೊರಗುತ್ತಿಗೆ ವೈದ್ಯರನ್ನು ಖಾಯಂ ಮಾಡಿ :
ಗೂಬೇಹಳ್ಳಿಯ ಆರೋಗ್ಯ ಕೇಂದ್ರಕ್ಕೆ ಜಾಗ ನೀಡಿದ ಸ್ಥಳೀಯರಾದ ದಿವಂಗತ ಪಟೇಲ್‌ ಸಿದ್ದೇಗೌಡರ ಹೆಸರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಸರಿಡಬೇಕು ಎಂದು ಹಾಗೂ ಹೊರ ಗುತ್ತಿಗೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ|| ಭರತ್‌ ರನ್ನು ಗೂಬೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ಮಾಡಬೇಕಾಗಿ ಗ್ರಾಮಸ್ಥರು ಆರೋಗ್ಯ ಸಚಿವರಿಗೆ ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ.ಎ. ಪುರಂದರ್‌ , ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಿ. ದೊಡ್ಡಸಿದ್ದಯ್ಯ, ಟಿ.ಹೆಚ್‌ .ಓ ಡಾ|| ಯಶವಂತ್‌ ಹೆಚ್‌ ಎನ್‌ , ಗೂಬೇಹಳ್ಳಿ ಆಸ್ಪತ್ರೆ ವೈಧ್ಯರಾದ ಡಾ|| ಭರತ್‌, ಹುಳಿಯಾರು ಆಸ್ಪತ್ರೆ ವೈದ್ಯರಾದ ಡಾ|| ಕೃಷ್ಣ ಹಾಗೂ ಬೆಳಗುಲಿ ಪಂಚಾಯಿತಿಯ ಉಪಾಧ್ಯಕ್ಷರು , ಸದಸ್ಯರು, ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.

108

© ಹುಳಿಯಾರು ಸಮಗ್ರ ಸುದ್ಧಿ . All Rights Reserved.