ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿ ಎದುರು ಅಂಗವಿಕಲರ ಪ್ರತಿಭಟನೆ.

ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಅಂಗವಿಕಲರು ಗ್ರಾಪಂ ಆವರಣದಲ್ಲಿ ಶನಿವಾರ ಸಭೆ ಸೇರಿ ಸರ್ಕಾರ ಅಂಗವಿಕಲರಿಗೆ ನೀಡುತ್ತಿರುವ ಸೌಲಭ್ಯ ವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.

ಈ ಬಾರಿ ಬಜೆಟ್ ನಲ್ಲಿ ಸರ್ಕಾರ ಅಂಗವಿಕಲರಿಗೆ ಯಾವುದೇ ವಿಶೇಷವಾದ ಕೊಡುಗೆ ನೀಡಿಲ್ಲ,ಅಕ್ಕ ಪಕ್ಕದ ರಾಜ್ಯಗಳು ತಿಂಗಳಿಗೆ 5000 ವರೆಗೆ ಮಾಶಾಸನ ನೀಡುತ್ತಿವೆ ಆದರೆ ಇಲ್ಲಿ ಕೇವಲ 1400 ನೀಡುತ್ತಿದೆ, ಸರ್ಕಾರದ 5 ಗ್ಯಾರಂಟಿ ಗಳ ಜೊತೆಯಲ್ಲಿ ಅಂಗವಿಕಲರಿಗೆ ವಿಶೇಷ ಸ್ಥಾನಮಾನ ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಂಗವಿಕಲ ಬೆಳ್ಳಾರ ಗೊಲ್ಲರಹಟ್ಟಿಯ ನಾಗರಾಜ್ ಮಾತನಾಡಿ ಸರ್ಕಾರ ಅಂಗವಿಕಲರಿಗೆ ಈಗ ನೀಡುತ್ತಿರುವ ಮಾಶಾಸನ 1400 ರಿಂದ 5000 ಕ್ಕೆ ಹೆಚ್ಚಿಸಬೇಕು,

ಸರ್ಕಾರಿ ಕಛೇರಿಗಳಲ್ಲಿ ಅಂಗವಿಕಲರ ಸ್ನೇಹಿ ಶೌಚಾಲಯ ಹಾಗು ಹಾಸನಗಳ ವೀಲ್ ಚೇರ್ ವ್ಯವಸ್ಥೆ ಮಾಡಬೇಕು,

Ksrtc ಸಾರಿಗೆ ಬಸ್ ನಲ್ಲಿ ಈಗಿರುವ 100 ಕಿ.ಮೀ ನಿಂದ 200 ಕಿ.ಮೀ ವರೆಗೆ ಉಚಿತ ಪ್ರಯಾಣ ಹರಿಸಬೇಕು,

ಗ್ರಾಪಂ ಗಳಲ್ಲಿ ಶೇ 5% ಹಣವನ್ನು ಅಂಗವಿಕಲರಿಗೆ ಬಳಸಬೇಕು,
ತ್ರಿ ಚಕ್ರ ವಾಹನ ಮತ್ತು ಸಾಧನ ಸಲಕರಣೆ ನೀಡುವಾಗ ರಾಜಕೀಯ ಮಾಡದೆ ನಿಜವಾದ ಫಲಾನುಭವಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಅಂಗವಿಕಲ ಜಯಚಂದ್ರನಗರದ ಕರಿಯಪ್ಪ ಮಾತನಾಡಿ ವಿಕಲ ಚೇತನರನ್ನು ಪ್ರತಿ ಸರ್ಕಾರಿ ಕಛೇರಿಗಳಲ್ಲಿ ಗೌರವಿಸಬೇಕು ಮತ್ತು ಅಂಗವಿಕಲರಿಗೆ ಒಂದು ಹುದ್ದೆ ನೀಡ ಬೇಕು ಎಂದು ಆಗ್ರಹಿಸಿಸರು.

ಡಿ.ರಾಧಮಣಿ,ಶ್ರೀನಿವಾಸ್,ರೇವಣ್ಣ, ಮಹಾಲಿಂಗಪ್ಪ,ಹಿಮಾಲಯ,ಗೀತಾ,ಜಯಮ್ಮ,ಭೂತಯ್ಯ,ಪಾಟೀಲ್,ದರ್ಶನ್ ಗೌಡ,ಮೋನಿಕ ಉಪಸ್ಥಿತರಿದ್ದರು.

131

© ಹುಳಿಯಾರು ಸಮಗ್ರ ಸುದ್ಧಿ . All Rights Reserved.