ಜ್ಞಾನಜ್ಯೋತಿ ಶಾಲೆಯಿಂದ ನಾದ ಸಂಗಮ

ಜ್ಞಾನಜ್ಯೋತಿ ಶಾಲೆಯಿಂದ ನಾದ ಸಂಗಮ - 2025

ಪಟ್ಟಣದ ಜ್ಞಾನಜ್ಯೋತಿ ವಿದ್ಯಾಸಂಸ್ಥೆ (ರಿ) ಆಶ್ರಯದಲ್ಲಿ ನಡೆಯುತ್ತಿರುವ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮ ನಾದ ಸಂಗಮ – 2025 ಗುರುವಾರ ಅದ್ದೂರಿಯಾಗಿ ನಡೆಯಿತು.

ಶಾಲೆಯು ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡಿತ್ತು , ಉತ್ತಮವಾಗಿ ಮಕ್ಕಳು ಬಣ್ಣ ಬಣ್ಣದ ಬಟ್ಟೆ ಧರಿಸಿ ವಿವಿಧ ರೀತಿಯ ಹಾಡುಗಳು, ಕೋಲಾಟ, ಕಂಸಾಳೆ, ಜಾನಪದ ಕಲೆ ಹೀಗೆ ಹಲವಾರು ಪ್ರಕಾರಗಳಲ್ಲಿ ನೃತ್ಯಗಳನ್ನು ಮಾಡಿ ಸಾವಿರಾರು ಪೋಷಕರನ್ನು ಹಾಗೂ ಜನ ಸಮೂಹವನ್ನು ಖುಷಿ ಪಡಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಉಪನ್ಯಾಸಕರಾದ ಆರ್.ದೇವೇಂದ್ರ ರವರು ಮಾತನಾಡಿ ವಿದ್ಯಾಸಂಸ್ಥೆಯ ಬಗ್ಗೆ ಹಾಗೂ ಆಡಳಿತ ಮಂಡಳಿ , ಹಾಗೂ ಮುಖ್ಯ ಶಿಕ್ಷಕರ ಕಾರ್ಯ ವೈಖರಿ ಯನ್ನು ನೋಡಿ ಮೆಚ್ಚಿಗೆ ವ್ಯಕ್ತ ಪಡಿಸಿದರು ಪ್ರತಿ ವರ್ಷವೂ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಪಲಿತಾಂಶ ಪಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ಮಾರುತಿ ಶಾಲೆಯ ಹಿರಿಯ ದೈಹಿಕ ಶಿಕ್ಷಕ ಬಸವರಾಜಪ್ಪ ಮಾತನಾಡಿ. ಈ ಸಂಸ್ಥೆಯಲ್ಲಿ ಕೇವಲ ಪಾಠ ಪ್ರವಚನ ಮಾಡದೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದ್ದು ಈ ಶಾಲಾ ಮಕ್ಕಳು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿರುವುದು ಸಾಕ್ಷಿಯಾಗಿದೆ, ವಿದ್ಯಾಸಂಸ್ಥೆಯವರು ಶಿಕ್ಷಕರು ಹೆಚ್ಚಿನದಾಗಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ, ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಪ್ರತ್ಯೇಕವಾಗಿ ತರಗತಿಗಳನ್ನು ತೆಗೆದುಕೊಂಡು ಫಲಿತಾಂಶಕ್ಕಾಗಿ ಶ್ರಮಿಸುತ್ತಿದ್ದಾರೆ, ಕೆಲವು ವರ್ಷಗಳ ಹಿಂದೆ ಸಂಸ್ಥೆಯವರಿಗೆ ಈ ಶಾಲೆಯಲ್ಲಿ ಮಕ್ಕಳು ಇಲ್ಲ ಈ ಶಾಲೆ ತುಂಬಾ ದಿನ ನೆಡೆಯೊಲ್ಲ ಎಂದು ನೇರವಾಗಿ ಹೇಳೆದ್ದೆ ಆದರೆ ಈಗ ಶಾಲೆ ಬೆಳೆದು ನಿಂತಿದೆ ನಾನು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದೇನೆ ನನಗೆ ತುಂಬಾ ಸಂತಸವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ ಸಿ . ಶಿವಣ್ಣ, ಕಾರ್ಯದರ್ಶಿಗಳಾದ ಸುದಾ. ಎಸ್, ಸಹಕಾರ್ಯದರ್ಶಿಯಾದ ಲಿಖಿತ ಎಸ್ , ಮುಖ್ಯ ಶಿಕ್ಷಕರಾದ ಗಿರೀಶ್ ಕೆ ಎಲ್, ಹಾಗೂ ಸಿಬ್ಬಂದಿ ವರ್ಗ, ಬೋಧಕೇತರ ವರ್ಗದವರು, ಪೋಷಕರು ಉಪಸ್ಥಿತರಿದ್ದರು.

84

© ಹುಳಿಯಾರು ಸಮಗ್ರ ಸುದ್ಧಿ . All Rights Reserved.