ಚಿಕ್ಕನಾಯಕನಹಳ್ಳಿ : ಸರ್ಕಾರಿ ಯೋಜನೆಗಳು ನೈಜ ಪಲಾನುಭವಿಗಳಿಗೆ ತಲುಪಿದಾಗ ಮಾತ್ರ ಆಯೋಜನೆ ರೂಪಿಸಿದ್ದಕ್ಕು ಸಾರ್ಥಕ ರೈತರು ಇಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಸ್ವಾವಲಂಬಿ ಸಾಧಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆಯವತಿಯಿಂದ ರೈತರಿಗೆ ಬಿತ್ತನೆ ಕೂರಿಗೆಗಳನ್ನು ವಿತರಿಸಿ ಮಾತನಾಡಿದ ಅವರು ನಮ್ಮ ಹಳೆಯ ವ್ಯವಸಾಯ ಪದ್ದತಿಯಿಂದ ನಮ್ಮ ದೇಶದಲ್ಲಿ ಆಹಾರದ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಮೂಲಕ ಅತ್ಯಾದುನಿಕ ತಂತ್ರಜ್ಞಾನಗಳನ್ನು ಬಳಸಿ ಆಹಾರ ಸಮಸ್ಯೆಯನ್ನು ಬಗೆಹರಿಸಲಾಯಿತು ಇಂದು ನಮ್ಮ ದೇಶ ಆಹಾರದ ಉತ್ಪಾದನೆಯಲ್ಲಿ ಸ್ವವಲಂಬಿ ಸಾಧಿಸುವುದರೊಂದಿಗೆ ಬೇರೆ ರಾಷ್ಟ್ರಗಳಿಗೆ ಕೇಲವು ಆಹಾರದ ವಸ್ತುಗಳನ್ನು ರಪ್ತು ಮಾಡುತ್ತಿದೆ ಈ ನಿಟ್ಟಿನಲ್ಲಿ ನಮ್ಮ ರೈತರು ಇಂತಹ ಆದುನಿಕ ತಂತ್ರಾಜ್ಞಾನ ಕೂರಿಗೆ ಯಂತ್ರಗಳನ್ನು ನೀಡಿದ್ದು ಇವುಗಳನ್ನು ಬಳಸಿಕೊಂಡು ಬಿತ್ತನೆ ಮಾಡಿ ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಿ ಎಂದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.