ಕಂದಿಕೆರೆಯ ಅವಧೂತ ಶ್ರೀ ಶ್ರೀ ಶ್ರೀ ಗವಿಶಾಂತವೀರಮಹಾಸ್ವಾಮಿಗಳವರ 35ನೇ ವರ್ಷದ ಜಾತ್ರಾ ಮಹೋತ್ಸವ ಫೆ. 6 ರಿಂದ ಫೆ. 14 ರವರೆಗೆ ನಡೆಯಲಿದೆ.
ಫೆ. 6 ಗುರುವಾರ ಶ್ರೀ ವಿಘ್ನೆಶ್ವರ ಸ್ವಾಮಿಗೆ ಅಭಿಷೇಕ, ಪೂಜೆ, ಧ್ವಜಾರೋಹಣ, ಹೋಮ ಮಹಾಮಂಗಳಾರತಿ,
ಫೆ. 7 ಶುಕ್ರವಾರ ವಿಘ್ನೇಶ್ವರ ಸ್ವಾಮಿಗೆ ಅಭಿಷೇಕ, ಪೂಜೆ ಮಹಾಮಂಗಳಾರತಿ,
ಫೆ. 8 ಶನಿವಾರ ನವಗ್ರಹಗಳಿಗೆ ಅಭಿಷೇಕ , ಪೂಜೆ , ಮಹಾಮಂಗಳಾರತಿ,
ಫೆ. 9 ಭಾನುವಾರ ಶ್ರೀ ಅಂಭಾದೇವಿಗೆ ಅಭಿಷೇಕ, ಪೂಜೆ ಕುಂಕುಮಾರ್ಚನೆ, ಮಹಾಮಂಗಳಾರತಿ,
ಫೆ. 10 ಸೋಮವಾರ ಶ್ರೀ ಸುಬ್ರಮಣ್ಯ ಸ್ವಾಮಿಗೆ ಅಭಿಷೇಕ, ಪೂಜೆ ಮಹಾಮಂಗಳಾರತಿ,
ಫೆ. 11 ಮಂಗಳವಾರ ಶ್ರೀ ಜಡೇಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಸಹಸ್ರನಾಮ, ಪೂಜೆ,ಮಹಾಮಂಗಳಾರತಿ,
ಫೆ. 12 ಬುಧವಾರ ಅವಧೂತ ಶ್ರೀ ಶ್ರೀ ಶ್ರೀ ಗವಿಶಾಂತವೀರಮಹಾಸ್ವಾಮಿಗಳಿಗೆ ಗಂಗಾಸ್ನಾನ ರುದ್ರಾಭಿಷೇಕ 101 ಪೂಜಾದಿಗಳು ಮಹಾಮಂಗಳಾರತಿ,
ಫೆ. 13 ಗುರುವಾರ ಮದ್ಯಾಹ್ನ 12 ಗಂಟೆಗೆ ರಥೋತ್ಸವ ನಂತರ ಮಹಾ ದಾಸೋಹ ನಡೆಯಲಿದೆ.
ಫೆ. 14 ಶುಕ್ರವಾರದಂದು ಶುಕ್ರವಾರ ಬೆಳಗ್ಗೆ ಸಾಧು ಸಂತರಿಗೆ ಕವದಿ ಪೂಜಾ ಕಾರ್ಯಕ್ರಮವಿರುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಸಮಿತಿಯವರು ಕೋರಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.